Advertisement

ರೈಲುಗಳಲ್ಲಿ ಮಹಿಳೆಯರಿಗೆ ಹೆಚ್ಚುವರಿ ಮೀಸಲು

10:17 AM Dec 05, 2018 | Team Udayavani |

ಹೊಸದಿಲ್ಲಿ: ರಾಜಧಾನಿ, ತುರಂತೊ ಮತ್ತು ಸಂಪೂರ್ಣ ಹವಾನಿಯಂತ್ರಿತ ರೈಲುಗಳ ಮೂರನೇ ಹಂತದ ಎಸಿ ಕೋಚ್‌ಗಳಲ್ಲಿ ಇನ್ನೂ ಆರು ಬರ್ತ್‌ಗಳನ್ನು ಮಹಿಳೆಯರಿಗೆ ಮೀಸಲಾಗಿ ಇರಿಸಲು ರೈಲ್ವೇ ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಅದು ಸುತ್ತೋಲೆ ಹೊರಡಿಸಿದೆ. ಲೋವರ್‌ ಬರ್ತ್‌ನಲ್ಲಿ ನಾಲ್ಕನ್ನು ಈಗಾಗಲೇ ಹಿರಿಯ ನಾಗರಿಕರಿಗೆ, 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮೀಸಲಾಗಿ ಇರಿಸುತ್ತಿದೆ. ಹೊಸ ನಿರ್ಧಾರ ಈಗಿನದ್ದಕ್ಕೆ ಹೆಚ್ಚುವರಿಯಾಗಿದೆ. ಇದಲ್ಲದೆ, ಎಲ್ಲ ರೀತಿಯ ಮೈಲ್‌ ಅಥವಾ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ 6 ಬರ್ತ್‌ಗಳನ್ನು ಮಹಿಳೆಯರಿಗಾಗಿ ಮೀಸಲು ಇರಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next