Advertisement

ಮಹಿಳೆಯರ ಮೀಸಲಾತಿ; ಕಾಂಗ್ರೆಸ್‌ ಸಹಿ ಅಭಿಯಾನ

01:38 PM May 18, 2017 | Harsha Rao |

ಹೊಸದಿಲ್ಲಿ: ದೇಶದ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ, ಪ್ರಮುಖ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಮೇ 21ರಿಂದ ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ಆರಂಭಿಸಲಿದೆ.
ರಾಜೀವ್‌ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಮಹಿಳಾ ಕಾಂಗ್ರೆಸ್‌ ಈ ಅಭಿಯಾನ ಹಮ್ಮಿಕೊಳ್ಳಲಿದ್ದು, ಅವರ ಜನ್ಮದಿನಾಚರಣೆಯ ದಿನದವರೆಗೆ ಅಂದರೆ ಆ.20ರವರೆಗೆ ನಡೆಯಲಿದೆ. 

Advertisement

“ಮಹಿಳೆಯರಿಗೆ ದೇಶದ ರಾಜಕೀಯದಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವುದು ರಾಜೀವ್‌ ಗಾಂಧಿ ಅವರ ಕನಸಾಗಿದೆ. ಇದನ್ನು ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಡ ಹೇರಲು ದೊಡ್ಡ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು’ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶೋಭಾ ಓಝಾ ಹೇಳಿದ್ದಾರೆ. 

ಮಹಿಳಾ ಮೀಸಲಾತಿ ವಿಧೇಯಕ 108ನೇ ಸಂವಿಧಾನ ತಿದ್ದುಪಡಿ ಮಸೂದೆಯಾಗಿದ್ದು, ಈಗಲೂ ಲೋಕಸಭೆಯಲ್ಲಿ ಅಂಗೀಕಾರವಾಗದೇ ಉಳಿದಿದೆ.  1996ರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಅವಧಿಯಲ್ಲಿ ಇದನ್ನು ಮಂಡಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next