Advertisement

Reservation: ಮಹಿಳಾ ಮೀಸಲು: ಕಾಂಗ್ರೆಸ್‌ 21 ಸುದ್ದಿಗೋಷ್ಠಿ

10:23 PM Sep 25, 2023 | Team Udayavani |

ನಾಗ್ಪುರ: “ಮಹಿಳಾ ಮೀಸಲು ವಿಧೇಯಕವು ರಾಜಕೀಯವಾಗಿ ಬಿಜೆಪಿಗೆ ಸರಿಹೊಂದುತ್ತದೆ. ಆದರೆ ಅದರ ಅನುಷ್ಠಾನವು ಆ ಪಕ್ಷದ “ಮನುವಾದಿ” ಸಿದ್ಧಾಂತಕ್ಕೆ ಸರಿಹೊಂದುವುದಿಲ್ಲ” ಎಂದು ಕಾಂಗ್ರೆಸ್‌ ನಾಯಕಿ ಅನುಮ ಆಚಾರ್ಯ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜನಗಣತಿ ಹಾಗೂ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ನಂತರವಷ್ಟೇ ಮಹಿಳಾ ಮೀಸಲು ಕಾಯ್ದೆ ಜಾರಿಗೆ ಬರಲಿದೆ. ಈ ಮೂಲಕ ಬೇಕೆಂದೇ ಇದರ ಅನುಷ್ಠಾನವನ್ನು 10ರಿಂದ 12 ವರ್ಷಗಳವರೆಗೆ ಬಿಜೆಪಿ ಮುಂದೂಡಿದೆ’ ಎಂದು ಆರೋಪಿಸಿದ್ದಾರೆ. “ಮಹಿಳಾ ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಬಣ್ಣ ಬಯಲು’ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್‌, ಸೋಮವಾರ ದೇಶಾದ್ಯಂತ 21 ನಗರಗಳಲ್ಲಿ 21 ಸುದ್ದಿಗೋಷ್ಠಿಗಳನ್ನು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next