Advertisement
ಈ ವೇಳೆ ಮಾತನಾಡಿದ ಮುಲ್ಲಾ ಅವರು, ಹಡಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮುದ್ದೇಬಿಹಾಳ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ ಪದ್ಮಾವತಿ ದೇವಸ್ಥಾನದ ಎಡಭಾಗದ ಆಶ್ರಯ ಯೋಜನೆಗಳ ಮನೆಗಳ ನಿಜವಾದ ಫಲಾನುಭವಿಗಳ ಪಟ್ಟಿ ಮತ್ತು ಅಲ್ಲಿರುವ ಮನೆಗಳ ದಾಖಲೆಗಳನ್ನು ನೀಡುವಂತೆ ಕೇಳಿದ್ದರೂ ಗ್ರಾಪಂ ಪಿಡಿಓ ನೀಡುತ್ತಿಲ್ಲ. ಬಡವರಿಗೆ ದೊರಕಬೇಕಾದ ಆಶ್ರಯ ಮನೆಗಳಲ್ಲಿ ಸಂಬಂಧ ಇಲ್ಲದವರು ಬಂದು ವಾಸಿಸುತ್ತಿದ್ದು ಅಕ್ಕಪಕ್ಕದ ಸರ್ಕಾರಿ ಜಾಗೆಯನ್ನು ಕಬಳಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪಂಚಾಯಿತಿಯ 9 ನಂಬರ್ ರಜಿಸ್ಟರ್‌ನಲ್ಲೂ ಇಂಥ ಕೆಲವನ್ನು ನೋಂದಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅನಧಿಕೃತವಾಗಿ ವಾಸವಿರುವವರ ಮತ್ತು ಸರ್ಕಾರದ ಜಾಗ ಕಬಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
Advertisement
ಹಡಲಗೇರಿ ಗ್ರಾಪಂ ಮುಂದೆ ಮಹಿಳೆಯರ ಧರಣಿ
05:02 PM Apr 02, 2022 | Shwetha M |
Advertisement
Udayavani is now on Telegram. Click here to join our channel and stay updated with the latest news.