Advertisement

ಮಹಿಳೆಯರ ಆಶಾಕಿರಣ ಫುಲೆ: ಮಾಡ್ಯಾಳೆ

12:32 PM Jan 10, 2022 | Team Udayavani |

ಆಳಂದ: ಶತಮಾನಗಳಿಂದ ಶೋಷ ಣೆಗೆ ಒಳಗಾಗಿ, ನಾಲ್ಕು ಗೋಡೆಗೆ ಸೀಮಿತವಾಗಿದ್ದ ಮಹಿಳೆಯರಿಗೆ ಅಕ್ಷರ ಕಲಿಸಿ, ಆತ್ಮಾಭಿಮಾನ ಮೂಡಿಸಿ ಪುರುಷರಿಗೆ ಸರಿಸಮನಾಗಿ ನಿಲ್ಲುವಂತೆ ಮಾಡಿರುವ ಸಾವಿತ್ರಿಬಾಯಿ ಫುಲೆ ಮಹಿಳೆಯರ ಬಾಳಿನ ಆಶಾಕಿರಣ ವಾಗಿದ್ದಾರೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀಶೈಲ ಮಾಡ್ಯಾಳೆ ಹೇಳಿದರು.

Advertisement

ತಾಲೂಕಿನ ಕೊರಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿ, ಪತಿಯ ಸಹಕಾರದಿಂದ ಸಮಾಜದ ಎಲ್ಲ ಸ್ತರದ ಮಹಿಳೆಯರ ಏಳ್ಗೆಗಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಶ್ರಮಿಸಿದರು. ವಿದ್ಯಾರ್ಥಿನಿಯರು ಸಾವಿತ್ರಿಬಾಯಿ ಬದುಕು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಂಶುಪಾಲ ಡಾ| ರಾಜಶೇಖರ ಮಾಂಗ್‌ ಮಾತನಾಡಿ, ಮಹಿಳೆಯರು ಅದರಲ್ಲೂ ಶೋಷಿತ ವರ್ಗದ ಮಹಿಳೆಯರು ಘನತೆ, ಗೌರವದಿಂದ ಜೀವನ ನಡೆಸುತ್ತಿರುವುದು ಫುಲೆ ದಂಪತಿಗಳ ಹೋರಾಟ ಹಾಗೂ ಬಾಬಾ ಸಾಹೇಬ್‌ ಡಾ| ಬಿ.ಅರ್‌. ಅಂಬೇಡ್ಕರ್‌ ತ್ಯಾಗ, ಪರಿಶ್ರಮ ಸದಾ ಸ್ಮರಿಸಬೇಕು ಎಂದು ಹೇಳಿದರು.

ಶಾಲಾ ಸಂಸತ್ತಿನ ಉಪ ಪ್ರಧಾನಿ ವರ್ಷಾ, ನಿಲಯ ಪಾಲಕಿ ನಾಗಮ್ಮ ಆವಟೆ ಹಾಜರಿದ್ದರು. ಚೈತನ್ಯ ವಚನ ಹಾಡಿದರು. ಸಿಂಧೂ ಸ್ವಾಗತಿಸಿದರು. ಸೌಂದರ್ಯ ನಿರೂಪಿಸಿದರು, ಕಾವೇರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next