Advertisement

ವನಿತಾ ಹಾಕಿ ಸರಣಿ: ಸೋಲುವ ಪಂದ್ಯ ಡ್ರಾ ಮಾಡಿಕೊಂಡ ಭಾರತ

01:35 AM Apr 10, 2019 | sudhir |

ಕೌಲಾಲಂಪುರ: ಮಲೇಶ್ಯ ವಿರುದ್ಧದ 3ನೇ ಹಾಕಿ ಟೆಸ್ಟ್‌ ಪಂದ್ಯದಲ್ಲಿ ಸೋಲುವ ಹಂತದಲ್ಲಿದ್ದ ಭಾರತದ ವನಿತೆಯರು ಕೊನೆ ಗಳಿಗೆಯಲ್ಲಿ ದಿಟ್ಟ ಆಟವಾಡಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಸೋಮವಾರ ನಡೆದ ಪಂದ್ಯದಲ್ಲಿ 2-4 ಹಿನ್ನಡೆಯಲ್ಲಿದ್ದ ಭಾರತ ಅಂತಿಮ ಕ್ವಾರ್ಟರ್‌ನಲ್ಲಿ ಆಕ್ರಮಣ ಆಟಕ್ಕೆ ಮರಳಿ 2 ಗೋಲು ಹೊಡೆದು ಸೋಲಿನಿಂದ ಪಾರಾಯಿತು.

2-0 ಮುನ್ನಡೆ
13ನೇ ನಿಮಿಷದಲ್ಲಿ ನವಜೋತ್‌ ಕೌರ್‌ ಮತ್ತು 22ನೇ ನಿಮಿಷದಲ್ಲಿ ನವನೀತ್‌ ಕೌರ್‌ ಗೋಲು ಹೊಡೆದು ಭಾರತಕ್ಕೆ ಭರ್ಜರಿ ಆರಂಭ ಒದಗಿಸಿದರು. ಆದರೆ ಈ ಮುನ್ನಡೆ ಯನ್ನು ಹೆಚ್ಚು ಹೊತ್ತು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿರಂತರ ತಪ್ಪುಗಳನ್ನು ಮಾಡಿ ಮಲೇಶ್ಯಕ್ಕೆ ಗೋಲು ಹೊಡೆ ಯುವ ಅವಕಾಶ ಕಲ್ಪಿಸಿತು.

26ನೇ ನಿಮಿಷದಲ್ಲಿ ಮಲೇಶ್ಯದ ಗುರ್‌ದೀಪ್‌ ಕಿರಣ್‌ದೀಪ್‌ ಗೋಲು ಬಾರಿಸಿದರು. ಮೊದಲೆರಡು ಪಂದ್ಯ ಗಳಲ್ಲಿ 0-3, 0-5 ಅಂತರದಿಂದ ಸೋತಿದ್ದ ಮಲೇಶ್ಯ, ಈ ಕೂಟದಲ್ಲಿ ಮೊದಲ ಗೋಲು ಬಾರಿಸಿ ಸಂಭ್ರಮಿ ಸಿತು. ಇದರಿಂದ ಆತ್ಮವಿಶ್ವಾಸ ಹೆಚ್ಚಿಸಿ ಕೊಂಡ ಮಲೇಶ್ಯ ಇನ್ನೊಂದು ಗೋಲು ಹೊಡೆದು 2-2 ಸಮಬಲ ಸಾಧಿಸಿತು. ಈ ಗೋಲನ್ನು ನುರೈನಿ ರಶೀದ್‌ ಹೊಡೆದರು.

ಸಮಬಲದ ಬಳಿಕ ಸಿಕ್ಕಿದ ಇನ್ನೆರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಮಲೇಶ್ಯ ಯಶಸ್ವಿಗೊಳಿಸಿತು. ಮುನ್ನಡೆ 4-2ಕ್ಕೆ ಏರಿತು.

Advertisement

ಅಂತಿಮ ಕ್ವಾರ್ಟರ್‌ನಲ್ಲಿ ಭಾರತ ಮತ್ತೆ ಆಕ್ರಮಣ ಆಟವಾಡಿತು. ನವನೀತ್‌ ಕೌರ್‌ (45ನೇ ನಿಮಿಷ) ಮತ್ತು ಲಾಲ್ರೆಮಿÕಯಾಮಿ (54ನೇ ನಿಮಿಷ) ಗೋಲು ಹೊಡೆದು ಪಂದ್ಯ ಡ್ರಾ ಮಾಡುವಲ್ಲಿ ಯಶಸ್ವಿಯಾದರು.
4ನೇ ಟೆಸ್ಟ್‌ ಪಂದ್ಯ ಬುಧವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next