ಗದಗ: ಪೊಲೀಸ್ ಇಲಾಖೆ ನಾಗರಿಕ, ಪರಿಸರ ಸ್ನೇಹಿ ಹಾಗೂ ಜನಸ್ನೇಹಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಲ್ಲಿ, ಅನ್ಯಾಯ ಕ್ಕೊಳಗಾದವರಲ್ಲಿ ನ್ಯಾಯ ದೊರೆಯುವ ಭರವಸೆ ಇಮ್ಮಡಿಗೊಳಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಇಲ್ಲಿನ ಶಹರ ಪೊಲೀಸ್ ಠಾಣಾ ಆವರಣದಲ್ಲಿ ಗದಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದನೂತನವಾಗಿ ಸ್ಥಾಪಿಸಿರುವ ಮಹಿಳಾ ಸಹಾಯ ಗೆಳತಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರಲ್ಲಿ ಕಾನೂನಿನ ಅರಿವು ಮತ್ತು ಸಂವಿಧಾನ ಬದ್ಧ ಹಕ್ಕುಗಳ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು. ಜಿಲ್ಲಾ ಪೊಲೀಸ್ ಇಲಾಖೆ ಪ್ರಾರಂಭಿಸಿರುವ ಈ ಗೆಳತಿ ಕೇಂದ್ರ ಶೋಷಿತ ನೊಂದವರ ಧ್ವನಿಯಾಗಿ ಕಾರ್ಯ ನಿರ್ವಹಿಸಬೇಕು. ಇಲಾಖಾ ಸಿಬ್ಬಂದಿ ಠಾಣೆಗೆ ಬರುವ ಮಹಿಳೆಯರು, ಯುವತಿಯರು ಹಾಗೂ ಸೇರಿದಂಂತೆ ದೂರು ನೋಂದಾಯಿಸಲು ಬಂದ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು . ಆ ಮೂಲಕ ನೊಂದವರ ಮನೋಬಲ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ, ಜಿ.ಪಂ. ಸಿಇಒ ಡಾ|ಆನಂದ, ಡಿಎಸ್‌ಪಿ ಪ್ರಲ್ಹಾದ ಎಸ್.ಕೆ., ಆರ್‌ಪಿಐ ಡಿ.ಎಸ್.ಧನಗರ, ಸಿಪಿಐಗಳಾದ ಆಂಜನೇಯ ಡಿ.ಎಸ್., ಆರ್.ಎಫ್. ದೇಸಾಯಿ, ಟಿ.ಮಹಾಂತೇಶ, ಗೆಳತಿ ಮಹಿಳಾ ಕೇಂದ್ರದ ಕಾನೂನು ಸಲಹೆಗಾರ ಎಸ್.ಆರ್.ಬ್ಯಾಹಟ್ಟಿ, ಪಿಎಸ್‌ಐಗಳಾದ ಕಮಲಾ ದೊಡ್ಡಮನಿ, ಉಮಾ ವಗ್ಗರ, ಜಿ.ಟಿ. ಜಕ್ಕಲಿ ಇದ್ದರು.