Advertisement
ಹೆಣ್ಣು ಮಕ್ಕಳಿಗೆ ಮುಟ್ಟು ಸ್ವಾಭಾವಿಕ. ಆ ನೋವು ಸಹಿಸುವುದರೊಂದಿಗೆ ಆ ಸಮಯವನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಉದ್ಯೋಗಕ್ಕಾಗಿ ಹೊರಗಡೆ ತೆರಳುವ ಮಹಿಳೆಯರಿಗೆ ಈ ಸಮಯವನ್ನು ಕೂಲ್ ಆಗಿ ನಿಭಾಯಿಸುವುದು ಸವಾಲು.
Related Articles
ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿದರೆ ಅದನ್ನು ಆಗಾಗ ಬದಲಾಯಿಸಬೇಕಾಗುತ್ತದೆ. ಅಧಿಕ ರಕ್ತಸ್ರಾವ ಇರುವವರಿಗೆ ಇದನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಆದರೆ ಕಪ್‌ಗ್ಳಿಂದ ಅಧಿಕ ರಕ್ತಸ್ರಾವದಿಂದ ಆಗುವ ಮುಜುಗರ ತಪ್ಪುತ್ತದೆ. ಇದಕ್ಕೆ 12 ಗಂಟೆಗಳ ರಕ್ತಸ್ರಾವವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಅದರೊಂದಿಗೆ ಕಪ್ ಸ್ವತ್ಛತೆಯನ್ನು ಕಾಪಾಡುತ್ತದೆ. ಅಲರ್ಜಿ ಸಮಸ್ಯೆ ಇಲ್ಲ. ಒಮ್ಮೆ ಬಳಸಿದ ಕಪ್‌ನ್ನು ಮತ್ತೂಮ್ಮೆ ಬಳಸಬಹುದು. ಕೆಲವು ಮಹಿಳೆಯರು ಇದನ್ನು ಬಳಸಲು ಕಷ್ಟ ಎನ್ನುತ್ತಾರೆಯಾದರೂ ರೂಢಿಯಾದ ಮೇಲೆ ಸುಲಭ ಅನ್ನುವುದು ಇನ್ನು ಹಲವರ ವಾದ. ಇದರಲ್ಲಿ ರಾಸಾಯನಿಕ ವಸ್ತುಗಳಿರುವುದಿಲ್ಲ. ಸರಿಯಾದ ವಿಧಾನದಲ್ಲಿ ಬಳಸಿದರೆ ಇದು ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಅತ್ಯುತ್ತಮ ಸಂಗಾತಿ ಎಂದರೆ ತಪ್ಪಾಗಲಾರದು. ಇವುಗಳನ್ನು ಹಾಕಿಕೊಂಡು ಯಾವುದೇ ರೀತಿಯ ಚಟುವಟಿಕೆಯಲ್ಲಿ ಭಯವಿಲ್ಲದೇ ಭಾಗವಹಿಸಬಹುದು. ಈಜು, ಯೋಗ ಚಟುವಟಿಕೆಗಳನ್ನು ಆರಾಮವಾಗಿ ಮಾಡಬಹುದು.
Advertisement
ಪ್ಯಾಡ್ ಮತ್ತು ಟ್ಯಾಂಪೂನ್ ನಿಗೆ ಇದು ಸರಿಯಾದ ಪರ್ಯಾಯ. ಆರಂಭದಲ್ಲಿ ತುಂಬಾ ಕಿರಿಕಿರಿ ಅನಿಸಬಹುದು. ಈ ಕಪ್ ನ್ನು ಮರಳಿ ಬಳಕೆ ಮಾಡಬಹುದು. ಅದರ ದಿನಾಂಕದ ಬಳಿಕ ಬದಲಾಯಿಸಿಕೊಳ್ಳಿ. ಆರು ತಿಂಗಳ ಕಾಲ ಬಳಸಿ ಕೊಳ್ಳಬಹುದು.
ಮೆನ್‌ಸ್ಟ್ರೆವಲ್ ಕಪ್‌ಗ್ಳಿಗೆ ಹೆಚ್ಚಿದ ಬೇಡಿಕೆಮುಟ್ಟಿನ ಕಪ್‌ನ ವೈದ್ಯಕೀಯ ದರ್ಜೆಯ ಸಿಲಿಕೋನ್ ಎಂಬ ಸಂಯುಕ್ತ ಪದಾರ್ಥದಿಂದ ಮಾಡಲಾಗುತ್ತದೆ. ಇದರಿಂದ ಯಾವುದೇ ಸೋಂಕುಗಳು ಉಂಟಾಗುವುದಿಲ್ಲ. ಇದರಲ್ಲಿ ಹಲವು ವಿಧ ಹಾಗೂ ಬಣ್ಣಗಳಿದ್ದು, ಬಳಸುವುದು ಕೂಡ ಸುಲಭವಾಗಿದೆ. ಆ ಕಾರಣಕ್ಕಾಗಿ ಬಹುತೇಕ ಮಹಿಳೆಯರು ಬಟ್ಟೆ, ಸ್ಯಾನಿಟರಿ ಪ್ಯಾಡ್‌ಗಳನ್ನು ದೂರ ಸರಿಸಿ ಮೆಸ್ಟ್ರವಲ್ ಕಪ್‌ಗ್ಳನ್ನು ಬಳಸುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎಂದು ಸಾಬೀತಾದ ಬಳಿಕ ಮಹಿಳೆಯರು ಪ್ಯಾಡ್‌ಗಳ ಬದಲಾಗಿ ಕಪ್‌ಗ್ಳ ಬಳಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಬಳಕೆ ಹೇಗೆ
ತಿಂಗಳ ಮುಟ್ಟು ಆರಂಭವಾದ ದಿನ ಪ್ರಥಮವಾಗಿ ಕೈಗಳನ್ನು ಹಾಗೂ ಕಪ್ ಅನ್ನು ನೀರಿನಲ್ಲಿ ಶುಚಿಗೊಳಿಸಬೇಕು. ಬಾಗುವ ಹಾಗೂ ಬಳಕುವ ಈ ಕಪ್ ಅನ್ನು ಮಡಚಿ ಯೋನಿಯೊಳಗೆ ತೂರಿಸಬೇಕು. ಬೆರಳುಗಳ ಸಹಾಯದಿಂದ ಈ ಕಪ್ ಅನ್ನು ಒಳಗೆ ಸೇರಿಸಿದ ಅನಂತರ ಯೋನಿಯ ಗೋಡೆಯ ಆಕಾರದಂತೆ ಈ ಕಪ್ ತೆರೆದುಕೊಳ್ಳುತ್ತದೆ. ಅನಂತರ ಋತುಸ್ರಾವವು ಅದರಲ್ಲಿ ಶೇಖರಣೆಯಾಗುತ್ತದೆ. ಋತುಸ್ರಾವ ಕಡಿಮೆ ಹಾಗೂ ಸಾಮಾನ್ಯವಾಗಿದ್ದಲ್ಲಿ 8ರಿಂದ 12 ಗಂಟೆಗಳ ಅನಂತರ ಅದನ್ನು ಹೊರತೆಗೆದು ಶುಚಿಗೊಳಿಸಿ ಮತ್ತೆ ಬಳಸಬಹುದು. ಈ ಕಪ್‌ನ ಬಳಕೆ ಕಷ್ಟವೇನಲ್ಲ. ಆ ದಿನಗಳಲ್ಲಿ ಕಪ್ ಅನ್ನು ಬಳಸುವಾಗ ಪ್ರತಿಬಾರಿಯೂ ಕೈ ಹಾಗೂ ಕಪ್ ಅನ್ನು ಬಿಸಿನೀರು ಅಥವಾ ತಣ್ಣೀರಿನಲ್ಲಿ ಶುಭ್ರಗೊಳಿಸಬೇಕು. ಮುಟ್ಟಿನ ದಿನಗಳು ಮುಗಿದ ಬಳಿಕ ಕಪ್ ಅನ್ನು ತೊಳೆದು, ಬಿಸಿನೀರಿನಲ್ಲಿ ಕುದಿಸಿ ಒಣ ಪ್ರದೇಶದಲ್ಲಿ ಶೇಖರಿಸಿಡಬೇಕು. ಬಳಸಿದ ಬಳಿಕ ರೂಢಿಯಾಗುತ್ತದೆ
ಮುಟ್ಟಿನ ಸಮಯದಲ್ಲಿ ಬಟ್ಟೆ, ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿ ಸ್ವಚ್ಛತೆ ಕಾಪಾಡದೆ ಇದ್ದಲ್ಲಿ ಕೆಲವರಿಗೆ ಬ್ಯಾಕ್ಟೀರಿಯಾದ ಸೋಂಕು, ಚರ್ಮದಲ್ಲಿ ತುರಿಕೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹವರು ಮುಟ್ಟಿನ ಕಪ್ ಬಳಸಿಕೊಳ್ಳಬಹುದು. ಮೊದಲಾಗಿ ಕಂಫರ್ಟ್ ಫೀಲ್ ಸಿಗದೆ ಇದ್ದರೂ ಮತ್ತೆ ರೂಢಿಯಾಗುತ್ತದೆ.
– ಡಾ| ನಯನಾ ವೈದ್ಯರು - ಪ್ರಜ್ಞಾ ಶೆಟ್ಟಿ