Advertisement

“ಮಾದೇವಿ’ಯದ್ದು ಪುರುಷರಿಗಿಂತ ಒಂದು ಕೈ ಮೇಲು

05:11 PM Mar 08, 2021 | Team Udayavani |

ತೆಲಸಂಗ: ಎಂತಹದ್ದೇ ಪ್ರಸಂಗ ಧೈರ್ಯವಾಗಿ ಎದುರಿಸಿ ಜೀವನ ಗೆಲ್ಲುವ ಶಕ್ತಿ ಮಹಿಳೆಯರಿಗಿದೆ ಎಂದು ಎನ್ನುವುದಕ್ಕೆ ಜೀವಂತ ಉದಾಹರಣೆಗಳು ದೇಶದಲ್ಲಿ ಸಾಕಷ್ಟಿವೆ. ಅಂತಹ ದಿಟ್ಟ ಮಹಿಳೆಯರ ಸಾಲಿನಲ್ಲಿ ಗ್ರಾಮದ ಮಾದೇವಿ ಬಾಳು ಮುಗದುಮ್‌ ಕೂಡ ಒಬ್ಬರು.

Advertisement

ಮಾದೇವಿ ಕೃಷಿ ಕೆಲಸದಲ್ಲಿ ಪುರುಷರಿಗೆ ಯಾವುದರಲ್ಲಿಯೂ ಕಡಿಮೆ ಇಲ್ಲ. ಟ್ರ್ಯಾಕ್ಟರ್‌ ಮೂಲಕ ತೋಟದಲ್ಲಿ ದ್ರಾಕ್ಷಿಗೆ ಔಷಧಿ ಸಿಂಪಡಿಸುವುದು ಸೇರಿದಂತೆ ಎಲ್ಲ ಕೆಲಸ ಮಾಡುತ್ತಾಳೆ. ಅಚ್ಚರಿ ಎಂದರೆ ಇಷ್ಟೆಲ್ಲ ಕೆಲಸ ಸ್ವಂತ ಹೊಲದಲ್ಲಿ ಮಾಡಲ್ಲ. ಬದಲಾಗಿ ಬೇರೆಯವರ ಹೊಲದಲ್ಲಿ ಕೂಲಿ ಪಡೆದು ಈ ಎಲ್ಲ ಕೆಲಸ ಮಾಡಿ ಉಪಜೀವನ ನಡೆಸುತ್ತಿದ್ದಾಳೆ. 8 ವರ್ಷಗಳ ಹಿಂದೆ ನನಗೆ ಮದುವೆಯಾಯಿತು. ಮನೆಯಲ್ಲಿ ಕಿರುಕುಳ ತಾಳದೆ ನನ್ನ ಮಗುವನ್ನು ಕಟ್ಟಿಕೊಂಡು ತವರಿಗೆ ಬಂದು ಸ್ವಂತ ಮನೆ ಮಾಡಿಕೊಂಡು ಹೊಸ ಜೀವನ ನಡೆಸುತ್ತಿದ್ದೇನೆ. 8 ವರ್ಷದಿಂದ ರೈತರ ಜಮೀನುಗಳಲ್ಲಿ ಕೆಲಸ ಮಾಡಿಜೀವನದ ಬಂಡಿ ದೂಡುತ್ತಿದ್ದೇನೆ ಎನ್ನುತ್ತಾರೆ ಮಾದೇವಿ.

ಕಷ್ಟದ ಸಮಯದಲ್ಲಿ ಧೃತಿಗೆಡದೆ ಸಂಕಷ್ಟ ಮೆಟ್ಟಿ ನಿಂತು ಮಾದರಿ ಜೀವನ ನಡೆಸುತ್ತಿರುವ ಮಾದೇವಿಸೋತೆನೆಂದು ಕಣ್ಣೀರು ಹಾಕಿಲ್ಲ, ತಲೆ ಮೇಲೆ ಕೈ ಹೊತ್ತು ಕೂತಿಲ್ಲ. ಅಕ್ಷರ ಕಲಿಯದಿದ್ರೂ ಸಂಸ್ಕಾರ ಇದೆ. ಇದ್ದು ಜಯಿಸುವೆ ಎನ್ನುವ ಛಲವಿದೆ. ಮಾನ, ಅಪಮಾನ ಸಹಿಸಿಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ಬದುಕಿ ತೋರಿಸಿದ ಮಾದೇವಿ ಕೃಷಿ ಕೆಲಸದಲ್ಲಿ ಯಾವೊಬ್ಬ ಪುರುಷನಿಗೂ ಕಡಿಮೆ ಇಲ್ಲ. ಇಂತಹ ದಿಟ್ಟ ಮಹಿಳೆಯರು ಇನ್ನೊಬ್ಬರಿಗೆ ಸ್ಫೂರ್ತಿಯೇ ಹೌದು.

ತೊಂದರೆ, ತಾಪತ್ರಯ ಯಾರೊಬ್ಬರ ಬೆನ್ನು ಬಿಟ್ಟಿಲ್ಲ. ಹೆಣ್ಣು ಒಂಟಿಯಾಗಿ ಬದುಕಿ ತೋರಿಸುವುದು ತುಂಬಾ ಕಷ್ಟ. ಹಾಗಂತ ಎಲ್ಲವೂ ಮುಗಿಯಿತು ಅಂದುಕೊಳ್ಳುವುದು ತಪ್ಪು. ಕೆಟ್ಟ ಘಟನೆ ಮರೆತು ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದೇನೆ. -ಮಾದೇವಿ ಬಾಳು ಮುಗದುಮ್‌,

Advertisement

Udayavani is now on Telegram. Click here to join our channel and stay updated with the latest news.

Next