ಕುಷ್ಟಗಿ: ಸಮಾಜದಲ್ಲಿ ಬೇರೂರಿದ್ದ ದೇವದಾಸಿಯಂತಹ ಅನಿಷ್ಠ ಪದ್ಧತಿ ಅಳಿಸಿ ಹಾಕುವ ನಿಟ್ಟಿನಲ್ಲಿ ಇಬ್ಬರು ಮಹಿಳೆಯರು ಮನಃ ಪರಿವರ್ತನೆ ಹೋರಾಟದ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.
ತಾಲೂಕಿನ ಕ್ಯಾದಗುಂಪ ಗ್ರಾಮದ ಪಡಿಯಮ್ಮ ಕರಿಯಪ್ಪ, ದೋಟಿಹಾಳ ಗ್ರಾಮದ ದುಗ್ಗಮ್ಮ ಅವರು, ತಮ್ಮದಲ್ಲದ ತಪ್ಪಿಗೆ ದೇವದಾಸಿ ಪದ್ಧತಿಗೆ ಸಿಲುಕಿದ್ದರು. ಈಗ ಅನಿಷ್ಟ ಪದ್ಧತಿಯಿಂದ ಹೊರಬಂದಿದ್ದಾರೆ. ಕಿತ್ತು ತಿನ್ನುವ ಬಡತನದ ಹಿನ್ನೆಲೆಯಲ್ಲಿ ಸಾಮಾಜಿಕ ಮೌಡ್ಯತೆ ಒಳಗಾಗಿ ಶೋಚನೀಯ ಬದುಕು ಸವೆಸಿದ್ದಾರೆ. ಈ ಮಹಿಳೆಯರು ತಾವು ತಮ್ಮ ಜೀವನ ಎಂದು ಸುಮ್ಮನಿರದೇ ಯಾವೂದೇ ಕಾರಣಕ್ಕೂ ದಲಿತ ಸಮುದಾಯದ ಮಹಿಳೆಯರು ಸಾಮಾಜಿಕ ಅನಿಷ್ಠಕ್ಕೆ ಜಾರದಂತೆ, ಬೆಂಗಾವಲಾಗಿ ವಿಮುಕ್ತ ದೇವದಾಸಿ ಮಹಿಳಾ ಸಂಘಟನೆ ಕಟ್ಟಿಕೊಂಡು ಕಾರ್ಯೋನ್ಮುಖರಾಗಿದ್ದಾರೆ.
ವಿಮುಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಪಡಿಯಮ್ಮ, ದುಗ್ಗಮ್ಮ ಹಾಗೂ ಚಂದಾಲಿಂಗಪ್ಪ ಕಲಾಲಬಂಡಿ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನಲ್ಲಿ671 ದೇವದಾಸಿ ಮಹಿಳೆಯರನ್ನುಗುರುತಿಸಲಾಗಿದೆ. ಈ ಎಲ್ಲಾ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸ್ವಉದ್ಯೋಗ ಸಾಲ ಸೌಲಭ್ಯ ಹಾಗೂ ಈ ಪೈಕಿ 18 ಜನರಿಗೆ ತಲಾ 3 ಎಕರೆಯಂತೆ ಜಮೀನು ಖರೀ ದಿಸಲಾಗಿದೆ. ಇನ್ನೂ 30 ಜನ ದೇವದಾಸಿ ಮಹಿಳೆಯರಿಗೆ ಸರ್ಕಾರದ ಮಂಜೂರಾತಿ ಹಂತದಲ್ಲಿದೆ.
ಸಾಮಾಜಿಕ ಕ್ರಾಂತಿ: ದೇವದಾಸಿ ಮಕ್ಕಳನ್ನುಯಾರು ಮದುವೆಯಾಗುತ್ತಾರೆ ಹೀಗೆ ಬಿಟ್ಟರೆ ಅನಿಷ್ಠ ಪದ್ಧತಿ ಮುಂದುವರಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕುಷ್ಟಗಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ 2018ರಲ್ಲಿ 32 ಜೋಡಿ ದೇವದಾಸಿ ಮಹಿಳೆ ಮಕ್ಕಳ ವಿವಾಹ ಮಹೋತ್ಸವ ನಡೆಸಿರುವುದು ಸಾಮಾಜಿಕ ಜವಾಬ್ದಾರಿಯ ದೃಢ ಹೆಜ್ಜೆಯಾಯಿತು. ಈ ಸಾಮಾಜಿಕ ಬದಲಾವಣೆಯಕ್ರಾಂತಿಯ ಯಶಸ್ವಿನ ಬೆನ್ನಲ್ಲೇ 2019ರಲ್ಲಿ 25 ಜೋಡಿ ದೇವದಾಸಿ ಮಕ್ಕಳ ವಿವಾಹ ಮಹೋತ್ಸವ ನಡೆಸಿರುವುದು ಸಾಮಾಜಿಕ ಜವಾಬ್ದಾರಿಯ ದೃಢ ಹೆಜ್ಜೆಯಾಯಿತು. ಈ ಸಾಮಾಜಿಕ ಬದಲಾವಣೆಯ ಕ್ರಾಂತಿಯ ಯಶಸ್ವಿನ ಬೆನ್ನಲ್ಲೇ 2019ರಲ್ಲಿ 25 ಜೋಡಿ ದೇವದಾಸಿ ಮಕ್ಕಳ ವಿವಾಹ ಮಹೋತ್ಸವ ಜರುಗಿತ್ತು. ಇದಕ್ಕೆಲ್ಲ ಇಳಿವಯಸ್ಸಿನ ಪಡಿಯಮ್ಮ ಹಾಗೂ ಅಂಗವಿಕಲೆಯಾಗಿದ್ದರೂ, ಸಾಮಾಜಿಕಕಾರ್ಯಕ್ಕೆ ಜಗ್ಗದ ದುಗ್ಗಮ್ಮ ಎನ್ನುವ ಮಹಿಳಾ ಶಕ್ತಿ ಕಾರಣ.
ಸರ್ಕಾರದಿಂದ ಹಾಗೂ ಬ್ಯಾಂಕ್ ಗಳಿಂದ ಸಿಗುವ ಸೌಲಭ್ಯಗಳನ್ನು ಆದ್ಯತೆಯಾಗಿ ಸಿಗುವಂತೆ ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಿದ್ದೇವೆ. ದೇವದಾಸಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆಉತ್ತಮ ಭವಿಷ್ಯ ಕಲ್ಪಿಸಿ ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಲು ಸಹಾಯಕ್ಕೆ ಮುಂದಾಗಿದ್ದೇವೆ.
-ದುಗ್ಗಮ್ಮ ದೋಟಿಹಾಳ, ವಿಮುಕ್ತ ದೇವದಾಸಿ ಮಹಿಳಾ ವೇದಿಕೆ
ದೇವದಾಸಿ ಮಹಿಳೆ ಎಂದರೆ ಕೀಳಾಗಿ ಕಾಣುವ ಸಂದರ್ಭ, ಶಾರೀರಿಕವಾಗಿ ಸಂಬಂಧ ಬೆಳೆಸಲು ಮುಂದಾಗುವವರಿಂದ ಕಿರುಕುಳ ತಪ್ಪಿಸಲು ವಿಮುಕ್ತ ಮಹಿಳಾಸಂಘಟನೆ ಸೃಷ್ಟಿಸಲಾಗಿದೆ. ದೇವದಾಸಿ ಮಹಿಳೆಯರ ಮನಃಪರಿವರ್ತಿಸಿ, ಇನ್ಮುಂದೆ ಯಾವೂದೇ ಕಾರಣಕ್ಕೂ ಈ ಅನಿಷ್ಠ ಪದ್ಧತಿಗೆ ಆಚರಿಸದಿರಲು ಅರಿವು ಮೂಡಿಸಿದ್ದೇವೆ.
-ಪಡಿಯಮ್ಮ ಕ್ಯಾದಗುಂಪ, ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಕುಷ್ಟಗಿ
-ಮಂಜುನಾಥ ಮಹಾಲಿಂಗಪುರ