Advertisement

ಮಹಿಳೆಯರಲ್ಲಿ ಆತ್ಮವಿಶ್ವಾಸ ಬಲಪಡಿಸಿ

03:03 PM Mar 15, 2021 | Team Udayavani |

ಬನಹಟ್ಟಿ: ಮಹಿಳೆಯರಲ್ಲಿ ಆತ್ಮವಿಶ್ವಾಸ ಬಲಪಡಿಸುವುದು ಮಹಿಳಾ ದಿನಾಚರಣೆಯಉದ್ಧೇಶವಾಗಿದೆ ಎಂದು ರಬಕವಿ-ಬನಹಟ್ಟಿಯಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಪ್ರಾಚಾರ್ಯೆ ಚಂದ್ರಪ್ರಭಾ ಬಾಗಲಕೋಟ ಹೇಳಿದರು.

Advertisement

ಬನಹಟ್ಟಿಯ ತೇರದಾಳ ಮತಕ್ಷೇತ್ರದ ಬಿಜೆಪಿ ಕಾರ್ಯಾಲಯದಲ್ಲಿ ಮಹಿಳಾ ಮೋರ್ಚಾ ವತಿಯಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರುಮಾತನಾಡಿದರು. ಮಹಿಳಾ ಸಮಾನತೆ ಎಂದರೆಮನೆ ಹಾಗೂ ಮನೆಯ ಆಚೆಗಿನ ಪರಿಸರದಲ್ಲಿಆಕೆಗೆ ಸಹಜವಾಗಿ ಸಿಗುವ ಮತ್ತು ಸಿಗಬೇಕಾದಅವಕಾಶಗಳು. ಪುರುಷ ಪಾರುಪತ್ಯವೇ ಅಧಿ ಕವಾಗಿರುವ ಅಧಿ ಕಾರದ ಸ್ಥಾನಗಳಲ್ಲಿ, ರಾಜ್ಯಹಾಗೂ ಕೇಂದ್ರದ ಮೇಲ್ಮನೆ, ಕೆಳಮನೆಗಳಲ್ಲಿ ಅವಳಪಾಲಿನ ಅವಕಾಶಗಳು ಅವಳಿಗೆ ಯಾವ ಯಾರತಕರಾರು ಹಸ್ತಕ್ಷೇಪ ಇಲ್ಲದೇ ಸಿಗುವಂತಾಗುವುದುನಿಜವಾದ ಸಮಾನತೆ ಎಂದರು. ಇಂದಿರಾ ಗಾಂಧಿ ,ಪ್ರತಿಭಾ ಪಾಟೀಲ, ಸುಷ್ಮಾ ಸ್ವರಾಜ್ಯ, ನಿರ್ಮಲಾ ಸೀತಾರಾಮನ್‌ ಇವರೆಲ್ಲ ಸಮರ್ಥವಾಗಿ ತಮ್ಮ ಪ್ರತಿಭೆಯನ್ನು ಸಶಕ್ತವಾಗಿ ಸಾಬೀತುಪಡಿಸಿದ್ದಾರೆ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಹಿಳೆ ಎಲ್ಲ ರಂಗಗಳಲ್ಲಿಯೂ ಮಿಂಚುತ್ತಿದ್ದು, ಸರಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನುಹಾಕಿಕೊಂಡಿದೆ. ಮಹಿಳೆಯರು ಸ್ವಾವಲಂಬಿಗಳಾಗಿಬದುಕಲು ಕೂಡಾ ಸರಕಾರ ಹಲವಾರು ಯೋಜನೆಅನುಷ್ಠಾನಗೊಳಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮೀನಾಕ್ಷಿ ಸವದಿ ಉದ್ಘಾಟಿಸಿದರು. ನಗರ ಘಟಕದ ಅಧ್ಯಕ್ಷೆ ಸುವರ್ಣ ಕೊಪ್ಪದ ಅಧ್ಯಕ್ಷತೆವಹಿಸಿದ್ದರು. ನಗರ ಘಟಕದ ಅಧ್ಯಕ್ಷ ಧರೆಪ್ಪಉಳ್ಳಾಗಡ್ಡಿ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶಅಕ್ಕಿವಾಟ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಸವಿತಾ ಹೊಸೂರ, ಕಾರ್ಯದರ್ಶಿ ವೈಷ್ಣವಿ ಬಾಗೇವಾಡಿ, ಅನುರಾಧಾ ಹೊರಟ್ಟಿ, ಗೌರಿ ಮಿಳ್ಳಿ, ಶಾಂತಾ ಸೊರಗಾಂವಿ, ಸುನೀತಾ ನಂದಗೊಂಡ,ರತ್ನಾ ಕೊಳಕಿ, ಮಾಲಾ ಬಾವಲತ್ತಿ, ಗಂಗಾ ಹೊರಟ್ಟಿ,ಮಹಾದೇವಿ ಮುದಕವಿ, ಭಾರತಿ ಬಿಲವಡಿ, ಮಂಜುಳಾ ಬೀಳಗಿ, ರಾಜೇಶ್ವರ ಕೈಸಲಗಿ, ಪವಿತ್ರಾ ತುಕ್ಕಣ್ಣವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next