ದಾವಣಗೆರೆ: ಜೀವನದ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಶಕ್ತಿ ಇದೆ ಎಂಬುದನ್ನು ಮಹಿಳೆ ರುರುಜುವಾತು ಪಡಿಸುತ್ತಿದ್ದಾರೆ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ತಿಳಿಸಿದರು.
ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮುಸ್ಲಿಂ ಮಹಿಳಾ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಹೊಂಡದ ರಸ್ತೆಯಲ್ಲಿರುವ ದುರ್ಗಾಂಬಿಕಾ ಸಂಯುಕ್ತ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, 21ನೇ ಶತಮಾನದಲ್ಲಿ ಮಹಿಳೆಯರು ವೃತ್ತಿ ಮತ್ತು ಸಂಸಾರ ಎರಡನ್ನೂ ನಿಭಾಯಿಸುವಲ್ಲಿ ಯಶಸ್ವಿಯಾಗಿ ಮಾದರಿಯಾಗಿ ನಿಂತಿದ್ದಾರೆ. ಬುದ್ಧಿವಂತಿಕೆ, ಪರಿಶ್ರಮ, ಕ್ರಿಯಾಶೀಲತೆ, ನೋವು ನುಂಗುವ ಶಕ್ತಿ ಮತ್ತುಸಂಘಟನೆಯಲ್ಲಿಯೂ ಮುಂದು ಎಂದು ಹೆಣ್ಣು ಸಮಾಜಕ್ಕೆ ತೋರಿಸಿಕೊಟ್ಟಿದ್ದಾಳೆ ಎಂದು ಪ್ರಶಂಸಿಸಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಮಹಿಳಾ ಸಬಲೀಕರಣ ಎಂಬುದು ಒಂದು ಪ್ರಬಲ ಅಂಶವಾಗಿ ಹುಟ್ಟಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯೇ ಮುನ್ನಡೆದಿದ್ದರೂ ಸಹ ಅವಳ ಸ್ಥಿತಿಗತಿ ಸ್ಥಾನಮಾನ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಮೇಲಕ್ಕೇರಲು ಹೆಚ್ಚು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಇಂದಿಗೂ ಕೂಡ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ಆ್ಯಸಿಡ್ ದಾಳಿ, ವರದಕ್ಷಿಣೆ ಹಿಂಸೆಗಳಿಗೆ ಹೆಣ್ಣು ಬಲಿಯಾಗುತ್ತಿರುವುದನ್ನುನೋಡಿದರೆ ಮಹಿಳಾ ದಿನಾಚರಣೆಗೆ ಇನ್ನು ಸಾರ್ಥಕತೆ ದೊರೆತಿಲ್ಲ ಎಂಬುದು ವಿಷಾದಕರವಾಗಿದೆ ಎಂದರು. ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ನಡೆಯುವದೌರ್ಜನ್ಯಗಳಲ್ಲಿ ಅಪರಾಧ ಗಳಿಗೆ ಬೇಗನೇ ಶಿಕ್ಷೆ ನೀಡುವಂತಾಗಬೇಕು. ಶಿಕ್ಷಣ, ಆರ್ಥಿಕ ಸಬಲೀಕರಣ ಸಾಧಿಸಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಮಹಿಳೆಯರು ದುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.ಮಹಿಳೆಯರಿಗೆ ಹಕ್ಕು, ಹಿತರಕ್ಷಣೆ ಜಾಗತಿಕ ಮಟ್ಟದಲ್ಲಿ ತಿಳವಳಿಕೆ, ವಿಜ್ಞಾನ-ತಂತ್ರಜ್ಞಾನಕ್ಕೆನೆರವು ನೀಡಿ ಸಮಾಜದಲ್ಲಿ ಸಮಾನತೆಯವೈಶಿಷ್ಟಪೂರ್ಣ ಬದಲಾವಣೆಗೆ ಅವಕಾಶಕಲ್ಪಿಸಬೇಕು ಎಂದು ಪ್ರತಿಪಾದಿಸಿದರು.
ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ಟಿ.ಮಂಜುನಾಥ್, ವಕೀಲರಾದ ಎನ್.ಎಂ.ಆಂಜನೇಯ, ಜೆ.ಎಸ್. ಭಾಗ್ಯಮ್ಮ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ನೂರ್ ಫಾತೀಮಾ, ಎಂ. ಕರಿಬಸಪ್ಪ,ರೈತ ಮುಖಂಡ ಎಸ್. ಎಂ. ಮಹೇಶ್‌ರೆಡ್ಡಿ ಇತರರು ಇದ್ದರು.