ಉಡುಪಿ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಉಡುಪಿ ಜಿಲ್ಲಾ ಉಸ್ತುವಾರಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಹಿಳೆಯರು ತಮಗೆ ಸಿಗುವಂತಹ ಅವಕಾಶಗಳನ್ನು ಸದುಪಯೋಗಪಡಿಸಬೇಕು ಎಂದರು.
ಗೀತಾ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಹಕಾರಿ ರಂಗದಲ್ಲಿ ವಿಶೇಷ ಸಾಧನೆಗೈದು ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಸರಳಾ ಕಾಂಚನ್, ರಂಗ ಕಲಾವಿದೆ ಕ್ಯಾಥರಿನ್ ರಾಡ್ರಿಗಸ್ ಕಟಪಾಡಿ, ಉದ್ಯಮಿ ಜೇಬಾ ಸೆಲ್ವನ್ ಅವರ ವಿಶೇಷ ಸಾಧನೆಗಾಗಿ ಗೌರವಿಸಲಾಯಿತು.
ನೂತನವಾಗಿ ಆಯ್ಕೆಯಾಗಿರುವ ಗ್ರಾ.ಪಂ. ಅಧ್ಯಕ್ಷರಾದ ಕುಕ್ಕೆಹಳ್ಳಿಯ ಮಾಲತಿ ಹೆಗ್ಡೆ, ಉಚ್ಚಿಲ ಬಡಾ ಗ್ರಾಮದ ಶರ್ಮಿಳಾ ಸಾಲಿಯಾನ್ ಅವರನ್ನು ಅಭಿನಂದಿಸಲಾಯಿತು. ಶ್ರೇಯಸ್ ಡಿ. ಕೋಟ್ಯಾನ್ ಅವರು ದಿಕ್ಸೂಚಿ ಭಾಷಣ ಮಾಡಿದರು.
ಪಕ್ಷದ ಐದು ಹಿರಿಯ ಮಹಿಳೆಯರು ಜ್ಯೋತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಡಾ| ಸಚ್ಚಿದಾನಂದ ಅವರು “ಆರೋಗ್ಯ ಕರ್ನಾಟಕ’ ಯೋಜನೆಯ ಕುರಿತು ಮಹಿಳೆಯರಿಗೆ ಮಾಹಿತಿ ನೀಡಿದರು. ಪಕ್ಷದ ಯುವ ನಾಯಕ ಅಲೆವೂರು ಹರೀಶ್ ಕಿಣಿ ಮಹಿಳಾ ಕಾಂಗ್ರೆಸ್‌ಗೆ ಸ್ಟೀಲ್ ಕಪಾಟೊಂದನ್ನು ದೇಣಿಗೆಯಾಗಿ ನೀಡಿರುವ ಬಗ್ಗೆ ಕೃತಜ್ಞತೆ ಸಲ್ಲಿಸಲಾಯಿತು.
ಹಿರಿಯರಾದ ಜಯಶ್ರೀ ಕೃಷ್ಣರಾಜ್, ಲಕ್ಷ್ಮೀ ಭಟ್, ಸರಸು ಡಿ. ಬಂಗೇರಾ, ಜಯಲಕ್ಷ್ಮೀ ಆಳ್ವ ಪಾದೂರು, ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿಗಳಾದ ವೆರೋನಿಕಾ ಕರ್ನೇಲಿಯೋ ಹಾಗೂ ಜಿ.ಎ. ಬಾವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜ್ಯ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಫಜಾìನ ಸಂಜಯ್, ಆರ್.ಜಿ.ಪಿ.ಆರ್.ಎಸ್.ನ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್, ಬ್ಲಾಕ್ ಅಧ್ಯಕ್ಷೆÒ ಗೋಪಿ ನಾಯ್ಕ, ಸಂಧ್ಯಾ ಶೆಟ್ಟಿ, ಮಂಜುಳಾ ದೇವಾಡಿಗ, ಪ್ರಭಾ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಕಾಪು ನಗರಾಧ್ಯಕ್ಷೆ ಪ್ರಭಾವತಿ ಸಾಲಿಯಾನ್ ಕೆ.ಡಿ.ಪಿ ಸದಸ್ಯರಾದ ಉಮೇಶ್ ನಾಯ್ಕ, ನಗರಸಭಾ ಸದಸ್ಯ ರಮೇಶ್ ಕಾಂಚನ್ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಜ್ಯೋತಿ ಹೆಬ್ಟಾರ್ ನಿರೂಪಿಸಿ, ಸುಜಾತಾ ವಂದಿಸಿದರು.