ಪುಣೆ, ಮಾ. 17: ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಪುಣೆ ಬಂಟರ ಭವನದಲ್ಲಿ ಮಾ. 8ರಂದು ಹಮ್ಮಿಕೊಳ್ಳಲಾಯಿತು.
ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಶಾಂತಿ ಕ್ಯಾನ್ಸರ್ ಕೇರ್ ಇದರ ಸಿಇಒ ಶ್ರೀಮತಿ ಲಾಲೆಹ್ ಬುಶೆರಿ ಹಾಗೂ ಶಿಲ್ಪಾ ಸೋನಾವಣೆ ಉಪಸ್ಥಿತರಿದ್ದರು.
ಲಾಲೆಹ್ ಬುಶೆರಿರವರು ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆಯ ಶುಭವನ್ನು ಕೋರುತ್ತಾ ಕ್ಯಾನ್ಸರ್ ರೋಗ ಬಾರದಂತೆ ತಡೆಗಟ್ಟುವಲ್ಲಿ ಜನಜಾಗೃತಿ ಅಗತ್ಯ. ಮಹಿಳೆಯರು ಮುಖ್ಯವಾಗಿ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಸುಲತಾ ಶೆಟ್ಟಿ ಅವರು ಬಂಟರ ಭವನದಲ್ಲಿ ಬಂಟ ಮಹಿಳೆ ಯರಿಗಾಗಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲು ಕೇಳಿ ಕೊಂಡಿದ್ದು ಇದಕ್ಕಾಗಿ ನಾನು ಸಹಕಾರ ನೀಡಲು ಸಿದ್ಧ ಎಂದರು.
ಶಿಲ್ಪಾ ಶೆಟ್ಟಿ ಸೋನಾವಣೆ ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ ಭಾಗಿ ಯಾಗಿರುವುದಕ್ಕೆ ಆನಂದವಾಗುತ್ತಿದೆ. ತುಳುನಾಡಿನ ದೈವಾರಾಧನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.ಈ ಸಂದರ್ಭ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಕುರ್ಕಿಲ್ ಬೆಟ್ಟು ಮಾತನಾಡಿ, ಮಹಿಳೆಯರಿಗೆಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಮ್ಮ ಸಂಘದ ಮಹಿಳಾ ವಿಭಾಗವು ಕ್ರಿಯಾಶೀಲತೆಯಿಂದ ಕೂಡಿದ್ದು ಸಂಘದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಮಾಜದ ಒಗ್ಗಟ್ಟಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಸಮಾಜ ಬಾಂಧವರೆಲ್ಲರ ಸಂಪೂರ್ಣವಾದ ಸಹಕಾರದಿಂದ ಸಂಘದಭವನದ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು ಮುಂದಿನ ದಿನ ಗಳಲ್ಲಿ ಸಂಘದ ಮೂಲಕ ಇನ್ನಷ್ಟು ಸಮಾಜಮುಖೀ ಯೋಜನೆಗಳನ್ನು ಬಂಟರ ಸಂಘ ಪುಣೆ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆ ಭವಿಷ್ಯದಲ್ಲಿ ಮಹತ್ತರವಾದ ಯೋಜನೆಗಳು ಸಂಘದ ಮುಂದಿವೆ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಹಮ್ಮಿಕೊಳ್ಳಲು ಚಿಂತಿಸಲಾಗಿದೆ. ಭವಿಷ್ಯದಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಹಾಗೂ ಬಂಟ ಸೇವಾ ಗ್ರಾಮಗಳಂಥ ಮಹತ್ತರ ಯೋಜನೆ ಗಳು ಸಂಘದ ಮುಂದಿದ್ದು ಸಮಾಜ ಬಾಂಧವರೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಜತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಹೆರ್ಡೆ ಬೀಡು ಮಹಿಳಾ ದಿನಾಚರಣೆಯ ಶುಭ ಹಾರೈಸಿದರು. ಅತಿಥಿಗಳನ್ನು ಪುಷ್ಪಗುತ್ಛ, ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಕಾರ್ಯದರ್ಶಿ ಸುಚಿತ್ರಾ ಶ್ರೀನಿವಾಸ್ ಶೆಟ್ಟಿ, ಕೋಶಾಧಿಕಾರಿ ಶಮ್ಮಿ ಅಜಿತ್ ಹೆಗ್ಡೆ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ದಿವ್ಯಾ ಸಂತೋಷ್ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷೆ ಸಾರಿಕಾ ಚಂದ್ರಹಾಸ ಶೆಟ್ಟಿ , ಸಮಿತಿ ಸದಸ್ಯರಾದ ಸಂಧ್ಯಾ ರಾಮಕೃಷ್ಣ ಶೆಟ್ಟಿ, ನೀನಾ ಬಾಲಕೃಷ್ಣ ಶೆಟ್ಟಿ, ನಯನಾ ಜಯ ಶೆಟ್ಟಿ, ನಿವೇದಿತಾ ಸುಧಾಕರ್ ಶೆಟ್ಟಿ, ವಿನಯಾ ಉಮಾ ನಾಥ ಶೆಟ್ಟಿ, ಗೀತಾ ಜಯ ಶೆಟ್ಟಿ, ವೀಣಾ ಪ್ರಶಾಂತ್ ಶೆಟ್ಟಿ, ಆಶಾ ಪ್ರವೀಣ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್. ಶೆಟ್ಟಿ ಸ್ವಾಗತಿಸಿ ವಂದಿಸಿದರು.
– ಚಿತ್ರ -ವರದಿ: ಕಿರಣ್ ಬಿ. ರೈ ಕರ್ನೂರು