ಇಂದು ಮಹಿಳಾ ದಿನಾಚರಣೆ. ತಾಯಿ, ಸಹೋದರಿ, ಮಗಳು, ಪತ್ನಿಯಾಗಿ ಮಹಿಳೆ ಬದುಕಿನ ಅವಿಭಾಜ್ಯ ಅಂಗವಾಗಿದ್ದಾರೆ. ಕೋವಿಡ್ ತುರ್ತು ವೇಳೆ ವಿವಿಧ ಕ್ಷೇತ್ರಗಳ ಮಹಿಳೆಯರು ಸಮರ್ಥವಾಗಿ ಎದುರಿಸಿ, ಕುಟುಂಬದ ನೊಗವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಕುರಿತು ಆಯ್ದ ಪೌರಕಾರ್ಮಿಕರು, ಶುಶ್ರೂಷಕಿಯರು, ಪೋಲಿಸ್ ಇಲಾಖೆಯ ಮಹಿಳಾ ಸಾಧಕಿಯರು ಉದಯವಾಣಿ ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ…
“ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾರೆ. ಆದರೆ, ನನ್ನ ಯಶಸ್ಸಿನ ಹಿಂದೆ ಪತಿ ರಾಚಣ್ಣ ಕಲ್ಲಶೆಟ್ಟಿ ಇದ್ದಾರೆ. ಅವರ ಸಹಕಾರದಿಂದಲೇ ನನ್ನ ಕನಸಿನಂತೆ ಪೊಲೀಸ್ ಇಲಾಖೆಯಲ್ಲಿ ಸೇರಿಕೊಂಡಿದ್ದೇನೆ. 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಪತಿಯ ಪ್ರೋತ್ಸಾಹ ದಿಂದ ಮತ್ತೆ ವಿದ್ಯಾಭ್ಯಾಸ ಮುಂದುವರಿಸಿ, ನಾಲ್ಕು ವರೆವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿಕೊಂಡಿದ್ದೇನೆ.
ಪಾಳಿ ಮಾದರಿಯಲ್ಲಿ ಕೆಲಸಮಾಡುವಾಗ ಪತಿ ತುಂಬಾನೇ ಸಹಕಾರ ನೀಡುತ್ತಾರೆ. ವಿಶೇಷವೆಂದರೆಇಡೀ ಕುಟುಂಬದಲ್ಲಿ ಪೊಲೀಸ್‌ಇಲಾಖೆಗೆ ಸೇರಿದ ಮೊದಲಮಹಿಳೆ ನಾನೇ ಎಂದು ಹೆಮ್ಮೆ ಪಡುತ್ತಾರೆ ರಾಜಾಜಿನಗರ ಸಂಚಾರ ಠಾಣೆ ಕಾನ್‌ಸ್ಟೇಬಲ್ ಸಾವಿತ್ರಿ ರಾಚಣ್ಣ ಕಲ್ಲಶೆಟ್ಟಿ.”ನಿತ್ಯ ರಸ್ತೆಯಲ್ಲೇ ನಿಂತು ಕೆಲಸ ಮಾಡುವುದರಿಂದಮಹಿಳೆಯರಿಗೆ ಅವರದ್ದೆ ಆದ ಸಮಸ್ಯೆಗಳು ಇರುತ್ತವೆ.ಹಿರಿಯ ಅಧಿಕಾರಿಗಳ ಸಹಕಾರದಿಂದ ಸಮಸ್ಯೆಗಳು ಬಗೆಹರಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಮನೆ ಮತ್ತುಪೊಲೀಸ್ ಠಾಣೆ ಎರಡು ತನ್ನ ಕಣ್ಣುಗಳಿದ್ದಂತೆ ಯಾವುದೇಮೋಸ ಮಾಡದೆ ನಿಭಾಯಿಸುತ್ತಿದ್ದೇನೆ. ಸಾರ್ವಜನಿಕರರಕ್ಷಣೆ ಮಾಡುವ ನನಗೆ, ನನ್ನ ಸಮವಸ್ತ್ರವೇ ಶ್ರೀರಕ್ಷೆ. ರಾತ್ರಿವೇಳೆ ಮನೆಗೆ ಹೋಗುವಾಗ ಸಮವಸ್ತ್ರ ನನಗೆ ರಕ್ಷಣೆನೀಡುತ್ತದೆ’ ಎಂದರು.
ಮದುವೆ ನಂತರವೂ ಓದಿ: ಇನ್ನು “ಕೆಲ ಮಹಿಳೆಯರು ಮದುವೆ ನಂತರ ಓದುವುದಿಲ್ಲ. ಆ ರೀತಿ ಯಾರು ಮಾಡಬೇಡಿ. ಜೀವನದಲ್ಲಿ ಸಮಸ್ಯೆಗಳು ಇದ್ದೆ ಇರುತ್ತದೆ. ಅವುಗಳನ್ನು ಮೆಟ್ಟಿ ನಿಂತು ಓದಬೇಕು. ಸಮಾಜದಲ್ಲಿತನ್ನದೇ ಆದ ಗೌರವ ಸೃಷ್ಟಿಸಿಕೊಳ್ಳಬೇಕು. ಹಣಕ್ಕಿಂತ ಗೌರವ ಮುಖ್ಯ. ಮಹಿಳೆಯರು ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು. ಸ್ವಾವಲಂಬಿಯಾಗಿ ಬದುಕುವನ್ನು ರೂಢಿಸಿಕೊಂಡಾಗ ಮಾತ್ರ ಮಹಿಳೆಯರು ಸಮಾಜದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದು ಮಹಿಳೆಯರಿಗೆ ಸಲಹೆ ನೀಡಿದರು.
ಆರೋಪಿ ಸೆರೆ ಹಿಡಿಯುವ ಟಾಸ್ಕ್ :
“ಪೊಲೀಸ್ ಇಲಾಖೆ ಕರ್ತವ್ಯಕ್ಕೆ ಸೇರಿ 11 ವರ್ಷ ಕಳೆದಿವೆ. ಈ ನಡುವೆ ಹಲವಾರು ಸಮಸ್ಯೆಗಳು, ಸವಾಲುಗಳನ್ನು ಎದುರಿಸಿ ಎಲ್ಲವನ್ನುಮೆಟ್ಟಿನಿಂತು ಇಂದು ಉತ್ತಮ ಜೀವನ ನಡೆಸುತ್ತಿದ್ದೇವೆ. 2011ರಲ್ಲಿ ಮದುವೆಯಾಗಿದ್ದು,ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಇದ್ದಾರೆ. ಪತಿಟ್ರಾವೆಲ್ಸ್ ನಡೆಸುತ್ತಿದ್ದಾರೆ. ಹೀಗಾಗಿ ಇಡೀಮನೆಯ ಜವಾಬ್ದಾರಿ ನನ್ನ ಹೆಗಲ ಮೇಲಿದೆ.ಮಕ್ಕಳ ಯೋಗಕ್ಷೇಮ, ಅವರಿಗೆ ತಿಂಡಿ, ಶಾಲೆಗೆಬಿಡುವುದು ಎಲ್ಲವೂ ನಾನೇ ಮಾಡುತ್ತೇನೆ.ಜತೆಗೆ ಸರಿಯಾಗಿ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಹೀಗಾಗಿ ಎರಡಲ್ಲೂ ಲೋಪವಾಗದಂತೆ ನಿಭಾಯಿಸಿಕೊಂಡುಹೋಗುತ್ತಿದ್ದೇನೆ’ ಎನ್ನುತ್ತಾರೆ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಶಕುಂತಲಾ.
“ವೃತ್ತಿ ಜೀವನದಲ್ಲೂ ಸಾಕಷ್ಟು ಸವಾಲುಗಳುಇವೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಆರೋಪಿಗಳನ್ನು ಹಿಡಿಯುವ ಟಾಸ್ಕ್ಗಳನ್ನು ಪೂರೈಸಬೇಕಾಗಿರುತ್ತದೆ. ಆಗ ಕಠಿಣವಾಗಿಯೇ ನಡೆದುಕೊಳ್ಳುಬೇಕಾಗುತ್ತದೆ. ಸರಿ ಯಾದ ಸಮಯಕ್ಕೆ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ. ಈ ನಡುವೆ ಪುಟ್ಟ ಮಕ್ಕಳ ನೆನಪು ಬರುತ್ತದೆ’.
ಮತ್ತೂಂದೆಡೆ ಕೊರೊನಾ ಸಂದರ್ಭದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಕರ್ತವ್ಯನಿರ್ವಹಿಸಿದ್ದೇವೆ. ಹೊರಗಡೆ ಕರ್ತವ್ಯ ಮುಗಿಸಿಕೊಂಡು ಮನೆಗೆ ಹೋದರೆ, ಮಕ್ಕಳ ಕಂಡಕೂಡಲೇ ಭಯವಾಗುತ್ತಿತ್ತು. ಹೀಗಾಗಿ ಇಬ್ಬರುಮಕ್ಕಳಿಂದ ಸ್ಪಲ್ಪ ಅಂತರ ಕಾಯ್ದುಕೊಂಡುಬಹಳ ಎಚ್ಚರಿಕೆಯಿಂದ ನೋಡಿಕೊಂಡಿದ್ದೇವೆ. ಆ ದಿನಗಳಲ್ಲಿ ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟಿದ್ದೇನೆ. ಕಷ್ಟದ ದಿನಗಳು ಎಂದರೆನು? ಎಂದು ಹೇಳಿಕೊಟ್ಟಿದ್ದೇನೆ. ಇದನ್ನು ಪ್ರತಿಯೊಬ್ಬ ಮಹಿಲೆ ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ’ ಎನ್ನುತ್ತಾರೆ ಶಕುಂತಲಾ.
ಮಕ್ಕಳನ್ನು ಠಾಣೆಗೆ ಕರೆ ತರುತ್ತೇನೆ! :
“ಈಗಲೂ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಬರುತ್ತೇನೆ. ಮುಂಜಾನೆಯೇ ಮಕ್ಕಳಿಗೆ ತಿಂಡಿ, ಊಟದವ್ಯವಸ್ಥೆ ಮಾಡಿ, ಶಾಲೆಗೆ ಕಳುಹಿಸಿ,ಕೆಲಸಕ್ಕೆ ಹೋಗುತ್ತೇನೆ. ವಾಪಸ್ ಮನೆಗೆಹೋಗುವುದು ತಡವಾದರೆ ಶಾಲೆಸಮೀಪದಲ್ಲಿ ಪರಿಚಯಸ್ಥರ ಮನೆಯಲ್ಲಿ ಇರಲು ಹೇಳಿ, ರಾತ್ರಿಮನೆಗೆ ಕರೆದೊಯ್ಯುತ್ತೇನೆ. ಇನ್ನು ಕೆಲಸಂದರ್ಭದಲ್ಲಿ ಮಕ್ಕಳನ್ನು ಠಾಣೆಗೆಕರೆತಂದು ಮಲಗಿಸಿಕೊಂಡಿರುವ ಉದಾಹರಣೆಗಳು ಇವೆ. ಆದರೂ ಪೊಲೀಸ್‌ಕರ್ತವ್ಯ ನಿರ್ವಹಿಸುವಾಗ ಹೊಸಉರುಪು ಇರುತ್ತದೆ. ಯಾಕೆಂದರೆ ಸದಾ ಸಾರ್ವಜನಿಕ ಸೇವೆಯಲ್ಲಿ ತೊಡಗುವುದರಿಂದ ಭವಿಷ್ಯದಲ್ಲಿ ಆ ದೇವರು ನಮ್ಮಮಕ್ಕಳಿಗೆ ಒಳಿತು ಮಾಡುತ್ತಾನೆ ಎಂಬಭರವಸೆ ಇದೆ’ ಎಂದು ಶಕುಂತಲಾ ವಿಶ್ವಾಸ ವ್ಯಕ್ತಪಡಿಸಿದರು
ಮಗುಗೆ ಹಾಲುಣಿಸಿ, ಮತ್ತೆ ಆಸ್ಪತ್ರೆಗೆ ಬಂದಿದ್ದೆ :
ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಲಾರಂಭಿಸಿ 10 ವರ್ಷಗಳ ಕಳೆದಿವೆ.ಮನೆ-ಕರ್ತವ್ಯ ಎರಡನ್ನು ಯಾವುದೇ ಕುಂದುಬಾರದ ಹಾಗೇ ನಿಭಾಯಿಸುವುದು ಬಹಳ ಕಷ್ಟದವಿಚಾರ. ಆರು ತಿಂಗಳ ಹೆರಿಗೆ ರಜೆ ಮುಗಿಸಿಕರ್ತವ್ಯಕ್ಕೆ ಸೇರ್ಪಡೆಯಾದಸಮಯದಲ್ಲಿ ಕೋವಿಡ್‌ಪ್ರಾರಂಭವಾಗಿತ್ತು.ಮನೆಯನ್ನು ಆಸ್ಪತ್ರೆಯಸಮೀಪಕ್ಕೆ ಶೀಫ್ಟ್ಮಾಡಿದೆ. ನಿತ್ಯ ರಾತ್ರಿ8ಗಂಟೆಯ ವರೆಗೆಕೋವಿಡ್ ರೋಗಿಗಳ ಆರೈಕೆ ಮಾಡಿದ್ದೇನೆ. ಪತಿಮಗುವನ್ನು ನೋಡಿಕೊಳ್ಳುವುದಕ್ಕೆ ಸಹಾಯಮಾಡಿದ್ದರು. ಮಗು ಅತ್ತಾಗ ಹೋಗಿ ಹಾಲುಣಿಸಿಬಂದಿದ್ದೇನೆ. ಮಹಿಳೆ ಎನ್ನುವ ಅನುಕಂಪಪಡೆಯದೆ ಹಗಲಿರುಳು ದುಡಿದ್ದೇನೆ. ಕೋವಿಡ್‌ಸಂದರ್ಭದಲ್ಲಿ ಶುಶ್ರೂಷಕಿಯಾಗಿ ನ್ಯಾಯುತಸೇವೆ ಸಲ್ಲಿಸಿರುವ ಸಂತೃಪ್ತಿ ನನ್ನಲ್ಲಿದೆ ಎಂದುಬೊಮ್ಮನಹಳ್ಳಿ ಯುಪಿಎಚ್‌ಸಿ ಸ್ಟಾಫ್ ನರ್ಸ್ ಜ್ಯೋತಿ ಎನ್. ತಿಳಿಸಿದರು.
ಕೈ ಸೋಲುವವರೆಗೂ ರಸ್ತೆ ಕಸ ಗುಡಿಸುವೆ :
ಕೋವಿಡ್ ಲಾಕ್‌ಡೌನ್ ಅಥವಾ ಬಂದ್‌ಗಳೇ ಇರಲಿ ನಮ್ಮ ಕೆಲಸ ನಿರಂತರವಾಗಿರಲಿದೆ. ಸ್ವತ್ಛತೆ ಮಾಡಿಲ್ಲ ಎಂದರೆ ಯಾರೊಬ್ಬರು ರಸ್ತೆಯಲ್ಲಿ ತಿರುಗಾಡಲು ಸಾಧ್ಯವಿಲ್ಲ. ಬೆಳಗ್ಗೆ ನೀವು ಕಚೇರಿಗೆ ಹೋಗುವ ಮೊದಲ ಬೀದಿಗಳನ್ನುಸ್ವಚ್ಛಗೊಳಿಸುವಲ್ಲಿ ತೊಡಗಿಸಿಕೊಳ್ಳುವ ನಮಗೂ ಕುಟುಂಬವು ಇದೆ. ಬೆಳಗ್ಗೆ 3ಗಂಟೆಗೆ ಎದ್ದು ಉಪಾಹಾರ ಮತ್ತು ಮಧ್ಯಾಹ್ನದಊಟವನ್ನು ಸಿದ್ಧಪಡಿಸಿ 6.30ಕ್ಕೆ ಸರಿಯಾಗಿ ನಿತ್ಯ ಕರ್ತವ್ಯಕ್ಕೆಹಾಜರಾಗುತ್ತೇನೆ. ನಿತ್ಯ ಎರಡರಿಂದ ಮೂರು ಕಿ.ಮೀ. ಎರಡುಉದ್ದ ರಸ್ತೆಯ ಇಕ್ಕೆಲಗಳನ್ನು ಸ್ವತ್ಛ ಮಾಡುತ್ತೇನೆ. ಈಕೆಲಸ ಮುಗಿಯುವ ಹೊತ್ತಿಗೆ ಮಧ್ಯಾಹ್ನ 2 . ಬಳಿಕನೇರವಾಗಿ ಮನೆ ತೆರಳಿ ಮತ್ತೆ ದಿನಚರಿಯಂತೆ ಅಡುಗೆ ಮನೆ ಕೆಲಸದಲ್ಲಿಯೇ ದಿನ ಕಳೆಯುತ್ತದೆ.
ಕೆಲಸಕ್ಕೆ ಹೋಗದೆ ಇದ್ದರೆ, ಮನೆ ಖರ್ಚುಪತಿಯಿಂದ ನಿಭಾಯಿಸುವುದು ಕಷ್ಟವಾಗಲಿದೆ.ನಾನು ಯಾರಿಗೂ ಹೊರೆಯಾಗಲು ಇಚ್ಚಿಸುವುದಿಲ್ಲ.ಸಾಧ್ಯವಾದಷ್ಟು ಮಟ್ಟಿಗೆ ಕೆಲಸ ಮಾಡಿಕೊಂಡು ಮನೆಆರ್ಥಿಕ ಸಮಸ್ಯೆಗಳನ್ನು ನೀಗಿಸಲು ನೆರವಾಗುತ್ತಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಭೀತಿಯಿದ್ದರೂ
ಕರ್ತವ್ಯ ನಿರ್ವಹಿಸಿದ್ದೇನೆ ಎನ್ನುತ್ತಾರೆ ಕಳೆದ 10 ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯ ಪೌರಕಾರ್ಮಿಕರಾದ ನಳಮ್ಮ …ಕಳೆದ 10 ವರ್ಷದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿನಗರದ ಬೀದಿ ಸ್ವತ್ಛತೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಗಂಡ ಆಟೋ ಡ್ರೈವರ್. ಇಬ್ಬರುಮಕ್ಕಳಲ್ಲಿ ಓರ್ವನ ಶಿಕ್ಷಣ ಮುಕ್ತಾಯಗೊಂಡಿದೆ.
ಇನ್ನೋರ್ವ ಪದವಿ ಓದುತ್ತಿದ್ದಾನೆ. ಅವರೊಬ್ಬ ವೇತನ ಜೀವನ ನಡೆಸಲು ಸಾಧ್ಯವಿಲ್ಲ. ಕೈ ಸೋಲುವವರೆಗೂ ರಸ್ತೆಗಳಲ್ಲಿನ ಕಸ ಗುಡಿಸುತ್ತೇನೆ.ಸುಸ್ತು ಆದರೆ ಸ್ವಲ್ಪ ಹೊತ್ತು ಕುಳಿತುಕೊಂಡು ಕೆಲಸ ಮತ್ತೆ ಮುಂದುವರಿಸುತ್ತೇನೆ. ಕೆಲಸ ಮಾಡಿದರೆಮಾತ್ರ ದಿನಕೂಲಿ, ಕೋವಿಡ್ ಸಂದರ್ಭದಲ್ಲಿಜನರು ರಸ್ತೆಗೆ ಇಳಿಯಲು ಹೆದರುತ್ತಿದ್ದರು. ಆದರೆ, ನಾನುಕೆಲಸ ಮಾಡಿದ್ದೇನೆ. ಕೆಲಸ ಮಾಡಿದರೆ ಮಾತ್ರ ಹೊಟ್ಟೆತುಂಬತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಪತಿಗೆ ಸಹಾಯಮಾಡುತ್ತಿದ್ದೇನೆ ಎನ್ನುವುದು ಒಂದು ತರಹ ಸಂತೋಷ.ಮನೆಯ ಗಡಿಬಿಡಿಯ ಕೆಲಸದ ಜತೆಗೆ ಕರ್ತವ್ಯಕ್ಕೆ ಎಳ್ಳಷ್ಟು ಮೋಸ ಮಾಡಿದ ಸಂದರ್ಭವೇ ಇಲ್ಲ ಎನ್ನುತ್ತಾರೆ ರತ್ನಮ್ಮ
***
ಮುಜುಗರವಿಲ್ಲದೆ ಕೆಲಸ ಮಾಡುವೆ: ಕಳೆದ 21ವರ್ಷದಿಂದ ಬೆಳಗ್ಗೆ 5 ಗಂಟೆಗೆಲ್ಲ ಪೊರಕೆ ಹಿಡಿದು ರಸ್ತೆಯನ್ನು ಗುಡಿಸುತ್ತೇನೆ. ಕಸ ಗುಡಿಸುತ್ತಲೇ ತನ್ನ ಬದುಕಿನ ನೋವುಮರೆಯುತ್ತೇನೆ. ನಗರದ ಜನತೆ ಕಣ್ಣು ಬಿಡುವ ಮೊದಲೇ ಅವರು ನಡೆದಾಡುವ ರಸ್ತೆಗಳನ್ನು ಶುಚಿಮಾಡಿರುತ್ತೇವೆ. ಅವರು ತಿಂದುಂಡು, ಮಜಾಮಾಡಿ ಬಿಸಾಡುವ ಪ್ರತಿ ವಸ್ತುವನ್ನು ಮುಜುಗರವಿಲ್ಲದೆ ನಮ್ಮ ಎರಡು ಕೈಗಳಲ್ಲಿ ಎತ್ತಿ ತಳ್ಳುವ ಗಾಡಿಗೆ ಹಾಕಿಕೊಳ್ಳುತ್ತೇವೆ. ಕೆಲವು ವೇಳೆ ವಾಂತಿ ಮಾಡಿಕೊಳ್ಳುವಷ್ಟು ದುರ್ವಾಸನೆ ಬರುತ್ತಿರುತ್ತದೆ. ಆದರೂ ಅದೆಲ್ಲವನ್ನೂಸಹಿಸಿಕೊಂಡು ಕೆಲಸ ಮಾಡುತ್ತೇವೆ. ಬೆಳ್ಳಂಬೆಳಗ್ಗೆಕೆಲಸವನ್ನು ಪ್ರಾರಂಭಿಸುವ ನಾವು ಮಧ್ಯಾಹ್ನಆದರೂ ಕೆಲಸ ಮುಗಿಯುವುದಿಲ್ಲ. ತಿಂಗಳಿಗೆಸಿಗುವ ವೇತನದಲ್ಲಿ ಅಷ್ಟೋ ಇಷ್ಟೋ ಉಳಿಸಿ ಜೀವನ ಸಾಗಿಸುತ್ತೇನೆ. ಪೌರಕಾರ್ಮಿಕ ಕೆಲಸ ಮಾಡುವುದರಿಂದ ಕೆಮ್ಮು, ಅಸ್ತಮಾ,ಚರ್ಮರೋಗ ಸೇರಿದಂತೆ ಅನೇಕ ರೋಗಗಳು ಬರುತ್ತವೆ. ಈ ಕೆಲಸ ಮಾಡುವ ಪ್ರತಿಯೊಬ್ಬರಿಗೂಗಜ್ಜಿ, ತುರಿಕೆ ಸಾಮಾನ್ಯವಾಗಿಬಿಟ್ಟಿದೆ. ಮೆಡಿಕಲ್ ಸ್ಟೋರ್‌ಗೆ ಹೋಗಿ ಮಾತ್ರೆ ಇಲ್ಲವೇ ಮುಲಾಮು ತೆಗೆದುಕೊಂಡು ತಾತ್ಕಾಲಿಕವಾಗಿ ವಾಸಿ ಮಾಡಿಕೊಳ್ಳುತ್ತೇವೆ. ಹೀಗೆ ಸಾವು-ಬದುಕಿನ ನಡುವೆ ಜೀವನ ಮಾಡುತ್ತಿದ್ದೇವೆ ಎನ್ನುತ್ತಾರೆ ಪೌರಕಾರ್ಮಿರಾದ ಪಾರ್ವತಿ.