Advertisement

ಭಾರತದ ಆತಿಥ್ಯದಲ್ಲಿ ವನಿತಾ ಏಶ್ಯನ್‌ ಕಪ್‌ ಫ‌ುಟ್‌ಬಾಲ್‌

01:09 AM Jan 29, 2021 | Team Udayavani |

ಹೊಸದಿಲ್ಲಿ: ಮುಂದಿನ ವರ್ಷಾರಂಭದಲ್ಲಿ ವನಿತೆಯರ ಏಶ್ಯನ್‌ ಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ ಭಾರತದ ಆತಿಥ್ಯದಲ್ಲಿ ನಡೆಯಲಿದೆ. ಏಶ್ಯನ್‌ ಫ‌ುಟ್‌ಬಾಲ್‌ ಕಾನೆ#ಡರೇಶನ್‌ (ಎಎಫ್ಸಿ) ಗುರುವಾರ ಇದನ್ನು ಪ್ರಕಟಿಸಿತು.

Advertisement

2022ರ ಜನವರಿ 20ರಿಂದ ಫೆಬ್ರವರಿ 6ರ ತನಕ ಪಂದ್ಯಾವಳಿ ನಡೆಯಲಿದೆ. ಭಾಗವಹಿಸಲಿರುವ ತಂಡಗಳ ಸಂಖ್ಯೆಯನ್ನು 8ರಿಂದ 12ಕ್ಕೆ ವಿಸ್ತರಿಸಿರುವುದು ಈ ಸಲದ ವಿಶೇಷ. ತಲಾ 4 ತಂಡಗಳ 3 ಗುಂಪುಗಳನ್ನಾಗಿ ವಿಂಗಡಿಸಿ ಲೀಗ್‌ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಮೊದಲ ಸಲ ಕ್ವಾರ್ಟರ್‌ ಫೈನಲ್‌ ಸ್ಪರ್ಧೆಗಳು ನಡೆಯಲಿವೆ. ಇದು 2023ರ ಫಿಫಾ ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಗೆ ಅರ್ಹತಾ ಕೂಟವೂ ಆಗಿದೆ.

ಏಶ್ಯನ್‌ ಕಪ್‌ ಫ‌ುಟ್‌ಬಾಲ್‌ ಅರ್ಹತಾ ಸ್ಪರ್ಧೆಗಳು ಸೆ. 13ರಿಂದ 25ರ ತನಕ ನಡೆಯಲಿದ್ದು, ಇದರಲ್ಲಿ 8 ತಂಡಗಳು ಅರ್ಹತೆ ಪಡೆಯಲಿವೆ. ಕಳೆದ ಕೂಟದ 3 ಅಗ್ರ ರ್‍ಯಾಂಕಿಂಗ್‌ ತಂಡಗಳಾದ ಜಪಾನ್‌, ಆಸ್ಟ್ರೇಲಿಯ, ಚೀನ ಮತ್ತು ಆತಿಥೇಯ ಭಾರತ ನೇರ ಪ್ರವೇಶ ಪಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next