Advertisement

ವನಿತಾ ಏಷ್ಯಾ ಕಪ್‌ ಕ್ರಿಕೆಟ್‌; ಮಲೇಷ್ಯಾವನ್ನು ಮಣಿಸಿದ ಪಾಕ್‌

05:07 PM Oct 02, 2022 | Team Udayavani |

ಬಾಂಗ್ಲಾದೇಶ: ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ರವಿವಾರದ ಮುಖಾಮುಖಿಯಲ್ಲಿ ಪಾಕಿಸ್ಥಾನ ದುರ್ಬಲ ಮಲೇಷ್ಯಾವನ್ನು 9 ವಿಕೆಟ್‌ಗಳಿಂದ ಸುಲಭದಲ್ಲಿ ಮಣಿಸಿದೆ.

Advertisement

ಮಲೇಷ್ಯಾ ಪೂರ್ತಿ 20 ಓವರ್‌ ಎದುರಿಸಿ ನಿಂತಿತಾದರೂ ಗಳಿಸಿದ್ದು 9ಕ್ಕೆ 57 ರನ್‌ ಮಾತ್ರ. ಪಾಕಿಸ್ಥಾನ 9 ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 61 ರನ್‌ ಮಾಡಿತು.

ಮಲೇಷ್ಯಾ ಸರದಿಯಲ್ಲಿ ಎಲ್ಸಾ ಹಂಟರ್‌ ಅಜೇಯ 29 ರನ್‌ ಮಾಡಿದರು. ಇದಕ್ಕೆ ತೆಗೆದುಕೊಂಡದ್ದು 51 ಎಸೆತ. ಹೊಡೆದದ್ದು 3 ಬೌಂಡರಿ. ಹಂಟರ್‌ ಹೊರತುಪಡಿಸಿ ಮಲೇಷ್ಯಾ ಪರ ಯಾರಿಂದಲೂ ಬೌಂಡರಿ ದಾಖಲಾಗಲಿಲ್ಲ. ಪಾಕ್‌ ಪರ ಒಮೈಮಾ ಸೊಹೈಲ್‌ 19ಕ್ಕೆ 3, ತುಬಾ ಹಸನ್‌ 13ಕ್ಕೆ 2 ವಿಕೆಟ್‌ ಕೆಡವಿದರು.

ಪಾಕಿಸ್ಥಾನ ತಂಡ ಸಿದ್ರಾ ಅಮೀನ್‌ (31) ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಮುನೀಬಾ ಅಲಿ 21 ಹಾಗೂ ನಾಯಕಿ ಬಿಸ್ಮಾ ಮರೂಫ್ 8 ರನ್‌ ಮಾಡಿ ಅಜೇಯರಾಗಿ ಉಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next