Advertisement

Women’s Ashes: ಆಸ್ಟ್ರೇಲಿಯಕ್ಕೆ ಮತ್ತೊಂದು ಗೆಲುವು

10:59 PM Jan 14, 2025 | Team Udayavani |

ಮೆಲ್ಬರ್ನ್: ವನಿತಾ ಆ್ಯಶಸ್‌ ಸರಣಿಯಲ್ಲಿ ಆಸ್ಟ್ರೇಲಿಯ ಸ್ಪಷ್ಟ ಮೇಲುಗೈ ಸಾಧಿಸಿದೆ. ಮಂಗಳವಾರ ನಡೆದ ದ್ವಿತೀಯ ಏಕದಿನ ಪಂದ್ಯವನ್ನೂ ಗೆದ್ದು 2-0 ದಾಪುಗಾಲಿಕ್ಕಿದೆ.

Advertisement

ಇದೊಂದು ಸಣ್ಣ ಮೊತ್ತದ ಪಂದ್ಯವಾಗಿತ್ತು. ಆಸ್ಟ್ರೇಲಿಯ 44.3 ಓವರ್‌ಗಳಲ್ಲಿ 180ಕ್ಕೆ ಆಲೌಟ್‌ ಆಗಿಯೂ ಈ ಪಂದ್ಯವನ್ನು ಉಳಿಸಿಕೊಂಡಿತು. ಇಂಗ್ಲೆಂಡ್‌ 48.1 ಓವರ್‌ಗಳಲ್ಲಿ 159ಕ್ಕೆ ಕುಸಿಯಿತು.

ಆಸ್ಟ್ರೇಲಿಯದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಉತ್ತಮ ಮಟ್ಟದಲ್ಲಿತ್ತು. 24ನೇ ಓವರ್‌ ವೇಳೆ ಎರಡೇ ವಿಕೆಟಿಗೆ 131 ರನ್‌ ಪೇರಿಸಿತ್ತು. ಅನಂತರ ದಿಢೀರ್‌ ಕುಸಿತಕ್ಕೆ ಸಿಲುಕಿತು. 49 ರನ್‌ ಅಂತರದಲ್ಲಿ 7 ವಿಕೆಟ್‌ ಕಳೆದುಕೊಂಡಿತು. ಸೋಫಿ ಎಕ್‌Éಸ್ಟೋನ್‌ 4, ಅಲೈಸ್‌ ಕ್ಯಾಪ್ಸಿ ಹಾಗೂ ಲಾರೆನ್‌ ಬೆಲ್‌ 2 ವಿಕೆಟ್‌ ಉರುಳಿಸಿದರು. ಆಸೀಸ್‌ ಪರ ಎಲ್ಲಿಸ್‌ ಪೆರ್ರಿ ಸರ್ವಾಧಿಕ 60 ರನ್‌ ಹೊಡೆದರು. ಇದು ಈ ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು.

ಈ ಸಾಮಾನ್ಯ ಮೊತ್ತವನ್ನು ಇಂಗ್ಲೆಂಡ್‌ ಮೀರಿ ನಿಲ್ಲಬಹುದೆಂಬ ನಿರೀಕ್ಷೆ ಇತ್ತು. ಆದರೆ ಆಸೀಸ್‌ ಬೌಲರ್ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಆದರೂ ಚೇತರಿಸಿಕೊಂಡ ಇಂಗ್ಲೆಂಡ್‌ 120ಕ್ಕೆ 5 ಎಂಬ ಹಂತಕ್ಕೆ ಬಂದು ನಿಂತಿತು. ಆಗ ಗೆಲುವಿನ ಅವಕಾಶವೂ ಇತ್ತು. ಆದರೆ ಆಸ್ಟ್ರೇಲಿಯದಂತೆ ನಾಟಕೀಯ ಕುಸಿತ ಕಂಡು 39 ರನ್‌ ಅಂತರದಲ್ಲಿ ಕೊನೆಯ 5 ವಿಕೆಟ್‌ ಕಳೆದುಕೊಂಡಿತು. ಅಲಾನಾ ಕಿಂಗ್‌ 4, ಕಿಮ್‌ ಗ್ಯಾರೆತ್‌ 3 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-44.3 ಓವರ್‌ಗಳಲ್ಲಿ 180 (ಪೆರ್ರಿ 60, ಲಿಚ್‌ಫೀಲ್ಡ್‌ 29, ಹೀಲಿ 29, ಎಕ್‌Éಸ್ಟೋನ್‌ 35ಕ್ಕೆ 4, ಕ್ಯಾಪ್ಸಿ 22ಕ್ಕೆ 3, ಬೆಲ್‌ 25ಕ್ಕೆ 2). ಇಂಗ್ಲೆಂಡ್‌-48.1 ಓವರ್‌ಗಳಲ್ಲಿ 159 (ಜೋನ್ಸ್‌ 47, ಸ್ಕಿವರ್‌ ಬ್ರಂಟ್‌ 35, ಅಲಾನಾ 25ಕ್ಕೆ 4, ಗಾರ್ತ್‌ 37ಕ್ಕೆ 3). ಪಂದ್ಯಶ್ರೇಷ್ಠ: ಅಲಾನಾ ಕಿಂಗ್‌.

Advertisement
Advertisement

Udayavani is now on Telegram. Click here to join our channel and stay updated with the latest news.