Advertisement
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಸೂಕ್ತ ತರಬೇತಿ ಹೊಂದಿರುವ ಮಹಿಳೆಯರನ್ನು ರಕ್ಷಣಾ ಪಡೆಗಳಿಗೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದಿದ್ದಾರೆ.
Related Articles
Advertisement
ಸಾರ್ಥಕವಾಯ್ತು ಮನವಿಅರ್ಹತೆಯುಳ್ಳ ಮಹಿಳೆಯರಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂದು ಹಿರಿಯ ವಕೀಲರಾದ ಕುಶ್ ಕಾರ್ಲಾ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅವಿವಾಹಿತ ಹಾಗೂ 12ನೇ ತರಗತಿ ಉತ್ತೀರ್ಣರಾಗಿರುವ ಮಹಿಳೆಯರಿಗೆ ಎನ್‌ಡಿಎ ಹಾಗೂ ನೌಕಾಪಡೆಯ ಅಕಾಡೆಮಿ ಪರೀಕ್ಷೆಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಎನ್‌ಡಿಎನಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಸೇನಾ ಪಡೆಗಳ ಆಯಕಟ್ಟಿನ ಜಾಗಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಅವಕಾಶವಿದ್ದರೂ ಅವರಿಗೆ ಅವರು ಮಹಿಳೆಯರು ಎಂಬ ಕಾರಣಕ್ಕಾಗಿ ಅವರ ನೇಮಕಾತಿ ನಡೆಸಲಾಗುತ್ತಿಲ್ಲ. ಈ ಮೂಲಕ, ಸಂವಿಧಾನವು ಮಹಿಳೆಯರಿಗೆ ಕೊಟ್ಟಿರುವ ಲಿಂಗ ಸಮಾನತೆಯ ಹಕ್ಕುಗಳಿಂದ ಅವರನ್ನು ವಂಚಿತರನ್ನಾಗಿಸಲಾಗುತ್ತಿದೆ ಎಂದು ವಕೀಲರು ತಮ್ಮ ಮನವಿಯಲ್ಲಿ ವಾದಿಸಿದ್ದರು.