ಬೆಂಗಳೂರು: 25 ವರ್ಷದ ಯುವತಿಯ ಜೊತೆ 21 ವರ್ಷದ ಯುವತಿಯೇ ಮದುವೆ ಆಗಿರುವ ವಿಲಕ್ಷಣ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಏನಿದು ಹುಡುಗಿ ವೆಡ್ಸ್ ಹುಡುಗಿ?
ಕೋರಮಂಗಲದ ಬಾಡಿಗೆ ಮನೆಯಲ್ಲಿರುವ ಇಬ್ಬರು ಯುವತಿಯರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ತಮ್ಮ ಮಗಳು ಕಾಣೆಯಾಗಿದ್ದಾಳೆಂದು 21 ವರ್ಷದ ಯುವತಿಯ ಪೋಷಕರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೂರು ದಿನಗಳ ಹಿಂದೆ ಯುವತಿಯರು ಪತ್ತೆಯಾಗಿದ್ದರು. ನಾವು ಲವ್ ಮಾಡಿ ಮದುವೆ ಆಗಿದ್ದೇವೆ ಎಂಬುದು ಯುವತಿಯರ ಹೇಳಿಕೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ಯುವತಿಯರಿಗೆ ಕೌನ್ಸೆಲಿಂಗ್ ಮಾಡಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.