Advertisement
ಉಡುಪಿ ಜಿಲ್ಲೆಯ ಕುಂದಾಪುರ ದಿಂದ ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ ತನಕ ಹನ್ನೊಂದು ಮಹಿಳಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದವು. ಕಾಸರಗೋಡು ನಗರಸಭೆಯ ಮುನ್ಸಿಪಲ್ ಕಾನ್ಫರೆನ್ಸ್ ಹಾಲ್‌ನ ಪುಷ್ಪಲತಾ ನಟರಾಜ್ ವೇದಿಕೆಯಲ್ಲಿ ಜರಗಿದ ಸ್ಪರ್ಧೆಯನ್ನು ಕಾಸರಗೋಡು ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ್ ಭಾಸ್ಕರ ಕಾಮತ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರರು. ಜಿ.ಎಸ್.ಬಿ.ಮಹಿಳಾ ಸಂಘದ ಅಧ್ಯಕ್ಷೆ ರಾಧಾ ಮುರಳೀಧರ್ ಕಾಮತ್, ಜಿ.ಎಸ್.ಬಿ. ಸೇವಾ ಸಂಘದ ಅಧ್ಯಕ್ಷ ಕೆ.ಕೃಷ್ಣ ಮಲ್ಯ, ಬದಿಯಡ್ಕ ಜಿಎಸ್‌ಬಿ ಸೇವಾ ಸಂಘದ ಅಧ್ಯಕ್ಷ ಕೆ.ಸುಂದರ ಪ್ರಭು, ಶ್ರೀ ವರದರಾಜ ದೇವಸ್ಥಾನದ ಮೊಕ್ತೇಸರ ವಿದ್ಯಾಕರ ಮಲ್ಯ, ಅಶೋಕ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕಾರ್ಯಕ್ರಮದ ರೂವಾರಿ ಕಾಸರಗೋಡು ಚಿನ್ನಾ ಅವರು ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಕೊಂಕಣಿ ಮಹಿಳಾ ಸಮ್ಮೇಳನವನ್ನು ಆಯೋಜಿಸಲಾಗುವುದು. ಕಾಸರಗೋಡಿ ನಲ್ಲಿ ಈ ವರೆಗೂ ಕೊಂಕಣಿ ಭಾಷಿಗರಿಗೆ ಇಂತಹ ವೇದಿಕೆ ಈ ವರೆಗೂ ಲಭಿಸಿಲ್ಲ. ಇಂದು ಐತಿಹಾಸಿಕ ದಿನ. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದ ಅವರು ಇದೇ ಪ್ರಥಮ ಬಾರಿಗೆ ಕೊಂಕಣಿ ಮಹಿಳೆಯರಿಗೆ ಸ್ಪರ್ಧೆಯನ್ನು ಏರ್ಪಡಿ ಸಿದ್ದು ಮುಂದಿನ ದಿನಗಳಲ್ಲಿ ರಂಗಚಿನ್ನಾರಿ ಸಂಸ್ಥೆ ರಾಜ್ಯ ಮಟ್ಟದ ಕೊಂಕಣಿ ಸ್ಪರ್ಧೆಯನ್ನು ಏರ್ಪಡಿಸುವುದಾಗಿ ಹೇಳಿದರು.
Related Articles
Advertisement
ಸಂಸ್ಕೃತಿ ಅನಾವರಣ : ಕೊಂಕಣಿ ಮಾತೃ ದೇವೋಭವ ಕಾರ್ಯಕ್ರಮದಲ್ಲಿ ಕೊಂಕಣಿ ಮಹಿಳೆಯರು ಕೊಂಕಣಿ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ವಿವಿಧ ಹಬ್ಬಗಳ ಆಚರಣೆ, ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವ ಜೀವನ ಕ್ರಮಗಳು, ಸಾಂಸ್ಕೃತಿಕ ವೈವಿಧ್ಯ, ಪೂಜೆ, ಪುನಸ್ಕಾರಗಳ ರೀತಿ ನೀತಿಗಳು, ಆಚಾರ ವಿಚಾರಗಳನ್ನು ಪ್ರದರ್ಶಿಸಿ ಕಣ್ಮನ ಸೆಳೆದರು.ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ಸಹಿತ ಭಾಗವಹಿಸಿದ ಎಲ್ಲ ತಂಡಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.