Advertisement

ಸಮೂಹ ರಕ್ಷಣೆಗಾಗಿ ಸ್ತ್ರೀಶಕ್ತಿ ಎದ್ದು ನಿಲ್ಲಲಿ: ಶಶಿಕಲಾ ಟೀಚರ್‌

12:30 AM Mar 16, 2019 | |

ಕಾಸರಗೋಡು: ಈಶ್ವರೀಯ ಪೂಜೆಯಲ್ಲಿ ಸ್ತ್ರೀ ಪುರುಷ ಭೇದ‌ವಿಲ್ಲ. ಅರ್ಧ ನಾರೀಶ್ವರ ಸಂಕಲ್ಪದಿಂದ ಇದು ವ್ಯಕ್ತ. ಆಧ್ಯಾತ್ಮಿಕ ಕಾರ್ಯದಲ್ಲಿ ಸ್ತ್ರೀಯರು ಎಂದೂ ಭಿನ್ನರಲ್ಲ. ಸ್ತ್ರೀಯರನ್ನು ಶಕ್ತಿ  ಎಂದು ಕರೆಯಲಾಗಿದೆ. ಸ್ನೇಹಕ್ಕಾಗಿ, ಪರರ ಒಳಿತಿಗಾಗಿ ಎಲ್ಲವನ್ನೂ ತ್ಯಜಿಸಲು ತಾಯಿಗೆ ಮಾತ್ರ ಸಾಧ್ಯ. ಎಲ್ಲ ಕ್ಷೇತ್ರಗಳಲ್ಲಿ ವಿಭಿನ್ನ ರೀತಿಯ ಆಚಾರ-ಸಂಪ್ರದಾಯವಿದೆ. 

Advertisement

ಬ್ರಹ್ಮಕಲಶೋತ್ಸವ ಹೇಗೆ ನಡೆಸಬೇಕೆಂದು ತೀರ್ಮಾನಿಸುವ ಹಕ್ಕು ತಂತ್ರಿಗಳದ್ದು. ಇದರ ವಿವರಣೆಯನ್ನು ಸಂವಿಧಾನ ಪುಸ್ತಕದಲ್ಲಿ ದಾಖಲಾಗಿಲ್ಲ. ಇವೆಲ್ಲವೂ ಅಲ್ಲಿನ ಪ್ರತಿಷ್ಠೆ, ಪ್ರಕೃತಿದತ್ತ ವ್ಯತ್ಯಾಸ ಹೊಂದಿಕೊಂಡು ಬದಲಾವಣೆ ಮಾಡಲೇಬೇಕು. ಹೀಗೆ ವ್ಯತ್ಯಸ್ತ ಜಾಗ, ವ್ಯತ್ಯಸ್ತ ಪ್ರತಿಷ್ಠೆ, ಇದನ್ನು ಅನುಸರಿಸಿ ನಮ್ಮೆಲ್ಲ ಆಚಾರ ವಿಚಾರ ವಿಭಿನ್ನವಾಗಿದೆ. ಇದನ್ನು ನಮ್ಮ ನ್ಯಾಯಾಂಗ ತೀರ್ಮಾನಿಸಬೇಕೆನ್ನುವುದು ಸರ್ವಥಾ ಸರಿಯಲ್ಲ. ಭಕ್ತರು ಸಲ್ಲಿಸುವ, ಸಮರ್ಪಿಸುವ ಭಕ್ತಿಗೆ ದೇವರು ಒಲಿಯುತ್ತಾನೆ. ಅಲ್ಲದೆ ತಂತ್ರ ಮಂತ್ರದ ಆಧಾರದಲ್ಲಿ ಪ್ರಹ್ಲಾದನಿಗೆ ನರಹರಿ ಒಲಿದುದಲ್ಲ. ಸಮೂಹ ರಕ್ಷಣೆಗಾಗಿ ಸ್ತ್ರೀಶಕ್ತಿ ಎದ್ದು ನಿಲ್ಲಲಿ ಎಂದು ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್‌ ಪಟ್ಟಾಂಬಿ ಅವರು ಹೇಳಿದರು. 

ಇತಿಹಾಸ ಪ್ರಸಿದ್ಧ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಆಯೋಜಿಸಿದ ಮಾತೃ ಶಕ್ತಿ ಸಂಗಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
 
ದೇವಸ್ಥಾನ ಸುಸ್ಥಿತಿಯಲ್ಲಿರಬೇಕು 
ಶಿವ ಎಂದರೆ ಮಂಗಳ ಎಂದರ್ಥ. ಊರು ಶೋಭಿಸಬೇಕಾದರೆ, ಸುಭಿಕ್ಷೆಯಿಂದಿರಬೇಕಾದರೆ ಆ ಊರಿನಲ್ಲಿ ದೇವಾಲಯ ಇರಲೇ ಬೇಕು. ಊರಿಗೆ ದೇಗುಲವೇ ಶೃಂಗಾರ. ಧರ್ಮದ ಉದ್ಧಾರದ ಅಡಿಪಾಯ ದೇಗುಲ. ಆತೊ¾àನ್ನತಿ ಉಂಟು ಮಾಡಲು ಮತ್ತು ಸಮಾಜ ಗಟ್ಟಿಯಾಗಿರಲು ದೇವಸ್ಥಾನ ಸುಸ್ಥಿತಿಯಲ್ಲಿರಬೇಕೆಂದು ಒಡಿಯೂರು ಶ್ರೀ ಕ್ಷೇತ್ರದ ಸಾಧ್ವಿ ಶ್ರೀ ಮಾತಾನಂದಮಯಿ ಅವರು ಆಶೀರ್ವಚನ ನೀಡಿದರು. 

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಮಾತೃ ಸಮಿತಿ ಅಧ್ಯಕ್ಷೆ ಸವಿತಾ ಟೀಚರ್‌ ಅಧ್ಯಕ್ಷತೆ ವಹಿಸಿದರು. ಮಂಗಳೂರು ಗ್ರಾಮಾಂತರ ಮಾತೃ ಮಂಡಳಿ ಅಧ್ಯಕ್ಷೆ ಮೀರಾ ಆಳ್ವ, ಮಧೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಮಾಲತಿ ಸುರೇಶ್‌, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷೆ ಪ್ರೇಮಾ ಎಲ್ಲೋಜಿ ರಾವ್‌ ಕೋಟೆಕಣಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಯೋಜನಾಧಿಕಾರಿ ಚೇತನಾ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ವಿಜಯ ಸಿ.ರಾವ್‌ ಪಳ್ಳಂ, ಸುಚಿತ್ರಾ ಪಿಳ್ಳೆ ಚಿನ್ಮಯ, ಮಾಯಾ ಗಂಗಾಧರ ಪೈ, ಉದ್ಯಮಿ ಬಿಂದು ದೇವದಾಸ್‌, ಕಾಸರಗೋಡು ನಗರಸಭಾ ಸದಸ್ಯರಾದ ರಹನಾ, ಉಮಾ, ಮೊಗ್ರಾಲ್‌ಪುತ್ತೂರು ಪಂಚಾಯತ್‌ ಸದಸ್ಯೆ ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು. ಮಾತೃ ಸಮಿತಿ ಕಾರ್ಯದರ್ಶಿ ಶ್ರೀಲತಾ ಟೀಚರ್‌ ಸ್ವಾಗತಿಸಿದರು. ಉಪಾಧ್ಯಕ್ಷೆ ವಸಂತಿ ಟàಚರ್‌ ವಂದಿಸಿದರು. ಜತೆ ಕಾರ್ಯದರ್ಶಿ ಸುಚಿತ್ರಾ ಮಹೇಶ್‌ ಕಾರ್ಯಕ್ರಮ ನಿರೂಪಿಸಿದರು. 

Advertisement

ಆಚಾರ್ಯ ಸಂಗಮ 
ಮಾ. 15ರಂದು ಬೆಳಗ್ಗೆ ಗಣಪತಿ ಹೋಮ, ಪ್ರೋಕ್ತ ಹೋಮ, ಪ್ರಾಯಶಿತ್ತ‌ ಹೋಮ, ಶಾಂತಿ ಹೋಮ, ತತ್ವ ಹೋಮ, ತತ್ವಕಲಶ ಪೂಜೆ, ಮಂಡಲ ಪೂಜೆ, ಭಜನೆ, ಸಂಜೆ ಆಚಾರ್ಯ ಸಂಗಮ, ಕುಂಭೇಶ ಕರ್ಕರಿ ಕಲಶ ಪೂಜೆ, ಅಧಿವಾಸ ಹೋಮ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ, ಧ್ವಜವಾಹನ ಅಧಿವಾಸ, ರಾತ್ರಿ “ದೇಶ ಕರೆದಾಗ’ ಕನ್ನಡ ನಾಟಕ ನಡೆಯಿತು. 

ಇಂದು ಬ್ರಹ್ಮಕಲಶ
ಬೆಳಗ್ಗೆ ಕವಾಟೋದ್ಘಾಟನೆ, ನಿರ್ಮಾಲ್ಯ ದರ್ಶನ, ಗಣಪತಿ ಹೋಮ, ತೈಲಾಭ್ಯಂಜನ, ಉಷಃಪೂಜೆ, ಧ್ವಜಪ್ರತಿಷ್ಠೆ, ಹೋಮ ಕಲಶಾ ಭಿಷೇಕಗಳು, ಶತರುದ್ರ ಪಾರಾಯಣ, ಪರಿಕಲಶಾಭಿಷೇಕ, ಮಾ. 16ರಂದು ಮಧ್ಯಾಹ್ನ 12.30ಕ್ಕೆ ಬ್ರಹ್ಮ ಕಲಶಾಭಿಷೇಕ, ರಾತ್ರಿ ಪೂಜೆ, ಶ್ರೀ ಭೂತಬಲಿ, ನೃತ್ಯ ಬಲಿ, ರಾಜಾಂಗಣ ಪ್ರಾಸಾದ, ಸಂಜೆ 5.30ರಿಂದ ಸಮಾರೋಪ ಸಮಾರಂಭ ನಡೆಯುವುದು. 

Advertisement

Udayavani is now on Telegram. Click here to join our channel and stay updated with the latest news.

Next