Advertisement

ಆಡಳಿತದಲ್ಲಿ ಮಹಿಳೆಯರ ಪಾಲು ಹೆಚ್ಚು

03:18 PM Mar 07, 2021 | Team Udayavani |

ಮಳವಳ್ಳಿ: ತಾಲೂಕಿನ ಬಂಡೂರು ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ರಾಜ್ಯದ ಅತಿ ಹಿಂದುಳಿದ ಕೊರಮ ಸಮುದಾಯದ ಮಹಿಳೆ ಮುತ್ತಮ್ಮ ಅವರ ಮನೆಗೆ ಸಂಸದೆ ಸುಮಲತಾ ಭೇಟಿ ನೀಡಿ, ಮುತ್ತಮ್ಮ ಅವರನ್ನು ಅಭಿನಂದಿಸಿದರು.

Advertisement

ದಡದಪುರ ಗ್ರಾಮದ ಮುತ್ತಮ್ಮ ಮನಗೆ ಭೇಟಿ ನೀಡಿ ಮಾತನಾಡಿ, ರಾಜ್ಯದಲ್ಲಿಯೇ ಅತಿ ಹಿಂದುಳಿದ ಕೊರಮ ಸಮುದಾಯದಲ್ಲಿ ಪ್ರಥಮ ಮಹಿಳೆ ಬಂಡೂರು ಗ್ರಾಪಂ ಅಧ್ಯಕ್ಷೆಯಾಗಿ ದಡದಪುರ ಮುತ್ತಮ್ಮ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಇಂತಹ ಹಿಂದುಳಿದ ಸಮುದಾಯದವರನ್ನು ಗುರುತಿಸಬೇಕು. ಅದರಲ್ಲೂ ಜಿಲ್ಲೆಯ ಆಡಳಿತ ವರ್ಗದಲ್ಲಿ ಮಹಿಳೆಯರ ಪಾಲು ಹೆಚ್ಚು. ತಾವು ಸಂಸದೆ, ಡೀಸಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಪಂ ಅಧ್ಯಕ್ಷರು ಸೇರಿದಂತೆ ಬಹುತೇಕ ಮಂದಿ ಮಹಿಳೆಯರೇ ಅಧಿಕಾರ ನಡೆಸುತ್ತಿರುವುದು ನಮ್ಮ ಶಕ್ತಿ ತೋರಿಸುತ್ತದೆ ಎಂದರು.

ಗಟ್ಟಿಕೊಪ್ಪಲು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್‌. ಶಿವಣ್ಣ ಅವರು ಸಾಕಷ್ಟು ಸಲಹೆ-ಸಹಕಾರ ನೀಡಿದ್ದು, ಅವರ ಮಾರ್ಗದರ್ಶನ ಮುಂದಿನ ದಿನಗಳಲ್ಲೂ ಹೀಗೆ ಮುಂದುವರಿಯಲಿ ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಬಿ.ಎಸ್‌.ಶಿವಣ್ಣ ಮಾತನಾಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಪುಟ್ಟಬಸವಯ್ಯ, ಉಪಾಧ್ಯಕ್ಷ ರಮೇಶ್‌, ಸದಸ್ಯರಾದ ವಸಂತ್‌, ಶ್ವೇತಾ, ಗೀತಾ, ದೇವರಾಜು, ಗುರುಮಲ್ಲಯ್ಯ, ಮರಮಾದಪ್ಪ, ಪ್ರಕಾಶ್‌, ಚಿಕ್ಕಲಿಂಗಯ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next