Advertisement

ಮಹಿಳೆಯರಿಗೆ ಮೀಸಲಾತಿಗೆ ನೀಡಲು ಒತಾಯ

05:12 PM Oct 03, 2021 | Team Udayavani |

ಹೊಳೆನರಸೀಪುರ: ಸ್ವತಂತ್ರ ಬಂದು 75 ವರ್ಷಗಳಾಗಿದ್ದು ಮಹಿಳೆಯರಿಗೆ ಶೇ. 33 ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮೀಸಲಾತಿ ದೊರಕುವಂತೆ ಮಾಡುವಲ್ಲಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುವಂತೆ ಮಾಜಿ ಸಚಿವ ಹಾಗು ಶಾಸಕ ಎಚ್‌.ಡಿ.ರೇವಣ್ಣ ನುಡಿದರು.

Advertisement

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ 152 ನೇ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹುದ್ದೂರ್‌ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಮಹಾತ್ಮಗಾಂಧೀಜಿ ಅವರು ಅಹಿಂಸಾ ತತ್ವದಡಿಯಲ್ಲಿ ಯಾವುದೆ ರಕ್ತ ಪಾತವಿಲ್ಲದೆ ಸ್ವತಂತ್ರಯ ತಂದು ಕೊಟ್ಟಿದ್ದಾರೆ.  ತಂದು ಕೊಟ್ಟಿರುವ ಮಹಾತ್ಮರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ಬಡವರಿಗೆ ಶಿಕ್ಷಣ ದೊರಕಬೇಕು ಎಂದರು.

ಇದನ್ನೂ ಓದಿ:-  ಸಿದ್ದರಾಮಯ್ಯನವರಿಗೆ ಜೆಡಿಎಸ್ ಮನೆಯೊಳಗೆ ಇಣುಕಿ ನೋಡುವ ಚಾಳಿ ಯಾಕೆ: ಸಿ.ಟಿ.ರವಿ

ಒಂದು ವಾರದಿಂದ ಸಮಾಜದಲ್ಲಿ ಬಹಳಷ್ಟು ಮಂದಿ ನೇಣಿಗೆ ಶರಣಗಾಗುತ್ತಿದ್ದಾರೆ. ಇದಕ್ಕೆ ಕಾರಣ ಜನರಲ್ಲಿನ ಆತ್ಮವಿಶ್ವಾಸ ಕುಗ್ಗುತ್ತಿರುವುದಕ್ಕೆ ಕಾರಣವಾಗಿದೆ. ಜಯಂತಿ ಸಂದರ್ಭದಲ್ಲಿ ಯೋಜನೆಯೊಂದನ್ನು ಜಾರಿಗೆ ತರಬೇಕಿದೆ ಎಂದರು. ವೇದಿಕೆ ಕಾರ್ಯಕ್ರಮ ಆರಂಭಕ್ಕೆ ಮೊದಲು ರೇವಣ್ಣ ಅನೌಪಚಾರಿಕವಾಗಿ ಮಾತನಾಡಿ, ಪಟ್ಟಣದ ಸರಹದ್ದಿನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಅವಶ್ಯಕ ವಾಗಿದ್ದು, ಅದಕ್ಕೆ ಪೊಲೀಸ್‌ ಇಲಾಖೆ ತುರ್ತಾಗಿ ಕ್ರಮಕೈಗೊಂಡು ಮುಖ್ಯ ರಸ್ತೆ ಸೇರಿದಂತೆ ಎಲ್ಲಡೆ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗುವಂತೆ ಸಭೆಯಲ್ಲಿ ಹಾಜರಿದ್ದ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಸಿಸಿ ಕ್ಯಾಮರಾ ಆಳವಡಿಕೆಗೆ ಪೋಲೀಸ್‌ ಅಧಿಕಾರಿಗಳು ಮತ್ತು ತಹಶೀಲ್ದಾರ್‌ ಒಂದಡೆ ಕುಳಿತು ತುರ್ತಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸೂಚಿಸಿದರು. ಪಟ್ಟಣದ ವಿವಿಧೆಡೆ ಅಳವಡಿಕೆಗೆ ತೀರ್ಮಾನಿಸಲಾಯಿತು.

Advertisement

ತಾಲೂಕಿನ ಕಾಮ ಸಮುದ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಅಫಘಾತಗಳ ಸಂಭವಿ ಸುತ್ತಿದೆ. ಆದ್ದರಿಂದ ಪೊಲೀಸ್‌ ಇಲಾಖೆ ಕಾಮ ಸಮುದ್ರ ಅಕ್ಕಪಕ್ಕ ಸುಮಾರು 500 ಮೀ. ರಸ್ತೆಯಲ್ಲಿ ಡೆಂಜರ್‌ ಝೋನ್‌ ಎಂದು ತಿರ್ಮಾನಿಸಿ ಆ ರಸ್ತೆಗಳಲ್ಲಿ ನಾಲ್ಕಾರು ಸ್ಥಳಗಳಲ್ಲಿ ಅಫಘಾತದ ವಲಯ ಎಂದು ನಾಮಫಲಕ ಆಳವಡಿಸಲು ಸೂಚಿಸಿದರು.

ಜಯಂತಿ ಪ್ರಯುಕ್ತ ತಾಲೂಕಿನ ಇಬ್ಬರು ಹಿರಿಯ ನಾಗರಿಕರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ತಹಶೀಲ್ದಾರ್‌ ಕೆ.ಕೆ.ಕೃಷ್ಣ ಮೂರ್ತಿ, ಇಒ ಕೆ.ಯೋಗೇಶ್‌, ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next