Advertisement

ಮಹಿಳೆಯ ಗೂಡಂಗಡಿ ಕಿತ್ತೆಸೆತ; ಪ್ರತಿಭಟನೆ

11:43 PM Jan 13, 2021 | Team Udayavani |

ಉಡುಪಿ: ಉಡುಪಿಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿರುವ ನಗರಸಭೆಯ ಸ್ಥಳದಲ್ಲಿ ಚಿಪ್ಪು ಸುಣ್ಣದ ಗೂಡಂಗಡಿ ಇಟ್ಟುಕೊಂಡು ಹಲವು ವರ್ಷಗಳಿಂದ ಬದುಕು ಸಾಗಿಸಿಕೊಂಡಿದ್ದ ಮಹಿಳೆಯ ಅಂಗಡಿಯನ್ನು ವಿನಾ ಕಾರಣಕ್ಕಾಗಿ ಎತ್ತಂಗಡಿ ಮಾಡಲಾಗಿದೆ.

Advertisement

ಉದ್ಯಾವರದ ವನಿತಾ ಅವರು ಸುಮಾರು 40 ವರ್ಷಗಳಿಂದ ಇಲ್ಲಿ ಅಂಗಡಿ ನಡೆಸುತ್ತಿದ್ದರು. ಆದರೆ ಇವರ ಗೂಡಂಗಡಿ ಪಕ್ಕದ ಕಟ್ಟಡದ ಮಾಲಕರು ತಮ್ಮ ವ್ಯವಹಾರದ ಉದ್ದೇಶಕ್ಕೆ ನಿರ್ಮಿಸಿದ್ದ ಕಟ್ಟಡಕ್ಕೆ ಆವರಣ ಗೋಡೆ ನಿರ್ಮಿಸುವುದಕ್ಕಾಗಿ ಆಕೆಗೆ ಯಾವುದೇ ಮೂನ್ಸೂಚನೆ ನೀಡದೆ ಕಾಂಪೌಂಡ್‌ ಗೋಡೆ ಕಟ್ಟುವ ನೆಪದಲ್ಲಿ ಅವಮಾನೀಯವಾಗಿ ಅಂಗಡಿಯನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ರಾತ್ರಿ ಸಮಯದಲ್ಲಿ ಯುವತಿಗೆ ವಿಷಯ ತಿಳಿದಿದ್ದು, ಆಕೆ ಮನೆಯಿಂದ ಸ್ಥಳಕ್ಕೆ ಆಗಮಿಸಿ ನೋಡಿದಾಗ ದಿಗ್ಭ್ರಮೆಗೊಳಗಾಗಿದ್ದಾರೆ. ಖಾಸಗಿಯವರ ದೌರ್ಜನ್ಯ ಕಂಡು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಯಿತು. ನೊಂದ ಯುವತಿಗೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದರು. ಅಡಿಪಾಯ ಹಾಕಲು ತೋಡಿರುವ ಗುಂಡಿಯಲ್ಲಿ ಮಲಗಿ ಅನ್ಯಾಯದ ವಿರುದ್ಧ ಯುವತಿ ಪ್ರತಿಭಟಿಸಿದಳು. ಕೊನೆಗೆ ಪೋಲಿಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next