Advertisement

ಮದ್ಯ ನಿಷೇಧಕ್ಕೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

04:04 PM Jan 28, 2021 | Team Udayavani |

ಧಾರವಾಡ: ರಾಜ್ಯದ ಉತ್ಛ ನ್ಯಾಯಾಲಯ ಆದೇಶದಂತೆ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಮದ್ಯ ನಿಷೇಧ ಆಂದೋಲನ-ಕರ್ನಾಟಕ ವತಿಯಿಂದ ನಗರದ ಡಿಸಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕಾಗಿ ಕಳೆದ 6 ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಆದರೆ, ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಲೇ ಇದೆ. ಸದ್ಯ ಉತ್ಛ ನ್ಯಾಯಾಲಯ ತಕ್ಷಣವೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಆದೇಶ ನೀಡಿದೆ. ಆದರೆ ಈವರೆಗೆ ಮದ್ಯ ಮಾರಾಟ ನಿಂತಿಲ್ಲ. 15 ದಿನಗಳೊಳಗೆ ನ್ಯಾಯಾಲಯ ಆದೇಶ ಕಾರ್ಯರೂಪಕ್ಕೆ ತರಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಸಲಾಗುವುದೆಂದು ಎಚ್ಚರಿಸಲಾಯಿತು.

ಇದನ್ನೂ ಓದಿ:ಅನುದಾನ ಬಳಕೆ ವರದಿ ನೀಡಲು ಸೂಚನೆ

ಇದಲ್ಲದೇ ಮನೆ ಇಲ್ಲದ ಕೂಲಿ ಕಾರ್ಮಿಕರಿಗೆ ಮನೆ ವಿತರಣೆ, ನರೇಗಾ ಯೋಜನೆಯಡಿ ಕೆಲಸ ಮಾಡುವವರಿಗೆ ವೇತನ, ಲೇಬರ್‌ ಕಾರ್ಡ್‌ ವಿತರಿಸುವಂತೆ ಆಗ್ರಹಿಸಿ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಾವಕ್ಕ ಯಂಕೋಜಿ, ಯಲ್ಲವ್ವ, ಕಸ್ತೂರಿ, ಲಕ್ಷ್ಮೀ, ಗೀತಾ ಒಕ್ಕುಂದ, ಅಮೀನಾಬಾಯಿ ಜಕ್ಕಲಿ ಸೇರಿ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next