Advertisement

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

01:12 PM May 21, 2024 | Team Udayavani |

ನವದೆಹಲಿ: ಕಾರು ಅಪಘಾತಗೊಂಡು ತೀವ್ರ ಸ್ವರೂಪದ ಗಾಯಗಳಾಗಿದ್ದರೂ ಜೊತೆಯಾಗಿ ಕೂತು ಸೆಲ್ಫಿಗೆ ಪೋಸ್‌ ಕೊಟ್ಟಿರುವ ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

Advertisement

ಶನಿವಾರ(ಮೇ.18 ರಂದು)ಮೆಕ್ಸಿಕನ್ ನಗರದ ಕ್ಯುರ್ನಾವಾಕಾದ ರಸ್ತೆಯಲ್ಲಿ ಐವರು ಯುವತಿಯರು ಕಾರಿನಲ್ಲಿ ಹೋಗುತ್ತಿರಬೇಕಾದರೆ ಲೋಮಾಸ್ ಡೆಲ್ ಮಿರಾಡೋರ್ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಇಬ್ಬರು ಯುವತಿಯರು ಕಾರಿನಿಂದ ಹೊರಬಿದ್ದು ತೀವ್ರತರದ ಗಾಯಗಳಾಗಿದೆ. ಪಾದಚಾರಿ ಮಾರ್ಗದಲ್ಲಿ ಇಬ್ಬರು ಯುವತಿಯರು ಬಿದ್ದಿದ್ದು, ಇತರೆ ಮೂವರು ಕಾರಿನಲ್ಲಿ ಸಿಲುಕಿಕೊಂಡಿದ್ದಾರೆ.

ಆದರೆ ರಸ್ತೆಯಲ್ಲಿ ಬಿದ್ದಿದ್ದ ಇಬ್ಬರು ಯುವತಿಯರು ಗಾಯಗೊಂಡಿದ್ದರೂ ಅಪಘಾತವಾದ ಕಾರಿನ ಮುಂದೆ ಕುಳಿತು ಸೆಲ್ಫಿಗಾಗಿ  ಪೋಸ್‌ ನೀಡಿದ್ದಾರೆ. ಆಂಬ್ಯುಲೆನ್ಸ್ ಬರುವವರೆಗೆ ಇಬ್ಬರು ಸೆಲ್ಫಿಗೆ ಪೋಸ್‌ ನೀಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ತಿಳಿಸಿದೆ.

ಕಾರಿನಲ್ಲಿದ್ದವರು ಮದ್ಯದ ಅಮಲಿನಲ್ಲಿದ್ದರು ಎಂದು ಶಂಕಿಸಲಾಗಿದೆ. ಸೆಲ್ಫಿಗೆ ಪೋಸ್‌ ಕೊಡುತ್ತಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಗಾಯಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

Advertisement

ಸದ್ಯ ಮೆಕ್ಸಿಕನ್ ಅಧಿಕಾರಿಗಳು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಇತ್ತ ಇಂಟರ್‌ ನೆಟ್‌ ನಲ್ಲಿ ಸೆಲ್ಫಿಗೆ ಪೋಸ್‌ ಕೊಟ್ಟಿರುವ ಫೋಟೋ ವೈರಲ್‌ ಆಗಿದ್ದು, ಅನೇಕರು ಇಬ್ಬರು ಯುವತಿಯರ ವರ್ತನೆ ಕಂಡು ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next