Advertisement

“ಮಹಿಳೆಯರು ಸ್ವಾವಲಂಬಿ ಬದುಕು ರೂಢಿಸಿಕೊಳ್ಳಬೇಕು

11:37 PM Sep 14, 2019 | Team Udayavani |

ಕಾಪು: ಸಮಾಜದಲ್ಲಿ ಮಹಿಳೆಯರು ಸರಕಾರದ ವಿವಿಧ ಸವಲತ್ತುಗಳ ಬಗ್ಗೆ ಅರಿತುಕೊಂಡು ಕಾರ್ಯ ಪ್ರವೃತ್ತರಾದರೆ ಸಮಾಜ ಸ್ವಾವಲಂಬಿಯಾಗಲು ಸಾಧ್ಯವಿದೆ, ಮಹಿಳೆಯರು ತಮ್ಮ ವಿರಾಮದ ಸಮಯವನ್ನು ಹಾಳು ಮಾಡದೆ ಸಣ್ಣ ಕೈಗಾರಿಕೆಯಲ್ಲಿ ದುಡಿದು ಸ್ವಾವಲಂಬನೆಯ ಬದುಕನ್ನು ರೂಢಿಸಿಕೊಳ್ಳಬೇಕು ಎಂದು ನಿಟ್ಟೆ ಶಿಕ್ಷಣ ಸಂಸ್ಥೆಗಳ ಕಾರ್ಪೋರೇಟ್‌ ಪ್ರೋಗ್ರಾಮ್ಸ್‌ ಡೀನ್‌ ಡಾ| ಅನಂತ ಪದ್ಮನಾಭ ಆಚಾರ್‌ ಹೇಳಿದರು.

Advertisement

ಶ್ರೀಮತ್‌ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ 15ನೇ ವರ್ಷದ ವಿಕಾರಿ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಪಡುಕುತ್ಯಾರಿನ ಶ್ರೀಮತ್‌ ಆನೆಗುಂದಿ ಮಹಾಸಂಸ್ಥಾನದಲ್ಲಿ ಸೆ. 8ರಂದು ಆಯೋಜಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಅವರು ಕಿರು ಉದ್ಯಮಗಳ ಮತ್ತು ಸರಕಾರಿ ಸವಲತ್ತುಗಳ ಬಗ್ಗೆ ಉಪನ್ಯಾಸ ನೀಡಿದರು.

ಸಮಾವೇಶ ಉದ್ಘಾಟಿಸಿದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶಿರ್ವಚನ ನೀಡಿ, ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿಯು ತಾಯಂದಿರಲ್ಲಿದೆ. ದೇವಸ್ಥಾನ, ಮಠ, ಮಂದಿರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವ ಮತ್ತು ಸಮಾಜದ ಸಂಘ – ಸಂಸ್ಥೆಗಳಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿಕೊಳ್ಳುವ ಕೆಲಸ ತಾಯಂದಿರ ಮೂಲಕ ನಡೆಯಬೇಕಿದೆ. ಮಹಾಸಂಸ್ಥಾನದ ವ್ಯಾಪ್ತಿಯ ಎಲ್ಲ ದೇವಸ್ಥಾನಗಳ ಮಹಿಳಾ ಸಮಿತಿ ಮತ್ತು ಮಹಿಳಾ ಸಂಘಗಳನ್ನು ಸೇರಿಸಿ ಮುಂದಿನ ದಿನಗಳಲ್ಲಿ ಮಹಾಸಂಸ್ಥಾನದ ಮಾತೃಮಂಡಳಿಯನ್ನು ರಚಿಸ ಲಾಗುವುದು ಎಂದರು.

ಶ್ರೀಮದ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಮಾತೃಮಂಡಳಿಯ ಮುಖ್ಯಸ್ಥೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಂಬಯಿ ಕಸ್ಟಮ್ಸ್‌ ಸುಪರಿಟೆಂಡೆಂಟ್‌ ಉಷಾ ಜಿ. ಆಚಾರ್ಯ, ಉಡುಪಿ ಮಂಗಳ ಜ್ಯುವೆಲ್ಲರ್ನ ಮಾಲಕಿ ಶಶಿಕಲಾ ಪ್ರಭಾಕರ ಆಚಾರ್ಯ, ಬೆಂಗಳೂರು ಯಲಹಂಕ, ದ.ಕ. ವಿಶ್ವಬ್ರಾಹ್ಮಣ ಮಹಿಳಾ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಎಸ್‌. ಆಚಾರ್ಯ ಶುಭಾಶಂಸನೆಗೈದರು.

Advertisement

ಸಾಧಕ ಮಹಿಳೆಯರಾದ ಉಷಾರಾಣಿ ಆರ್‌. ದಾವಣಗೆರೆ, ತ್ರಿವೇಣಿ ವಿ. ಪುರೋಹಿತ್‌ ಬಾಳಿಲ ಸುಳ್ಯ, ರತ್ನಾವತಿ ಮೋಹನ್‌, ಸರೋಜಿನಿ ವಸಂತ ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಉಡುಪಿ ಭಾರತೀಯ ವಿಕಾಸ ಟ್ರಸ್ಟ್‌ನ ಅಗ್ರಿಕಲ್ಚರ್‌ ಸೀನಿಯರ್‌ ಕನ್ಸಲ್ಟೆಂಟ್‌ ಎಚ್‌. ಅನಂತ ಪ್ರಭು ಅವರಿಂದ ಕೈತೋಟ ಕೃಷಿ, ಟೆರೇಸ್‌ ಕೃಷಿ, ಅಣಬೆ ಕೃಷಿ, ಸಾವಯವ ಗೊಬ್ಬರ ತ‌ಯಾರಿ, ಇಂಗು ಗುಂಡಿ ತಯಾರಿ ಬಗ್ಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು. ಪ್ರತಿಷ್ಠಾನದ ಪ್ರ| ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರು ಇವರು ಆನೆಗುಂದಿ ಮಹಾಸಂಸ್ಥಾನದ ಗುರುಪರಂಪರೆಯ ಬಗ್ಗೆ ವಿವರಣೆ ನೀಡಿದರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ, ಚಾತುರ್ಮಾಸ್ಯ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ. ವಿ ಗಂಗಾಧರ ಆಚಾರ್ಯ, ಕೋಶಾಧಿಕಾರಿ ಬಂಬ್ರಾಣ ಯಜ್ಞೆàಶ ಆಚಾರ್ಯ, ಪ್ರ| ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ, ಕಾರ್ಯದರ್ಶಿಗಳಾದ ಸುರೇಶ್‌ ಆಚಾರ್ಯ, ಪ್ರಶಾಂತ ಆಚಾರ್ಯ, ವಿಶ್ವಸ್ಥರಾದ ಕೆ. ಕೇಶವ ಆಚಾರ್ಯ, ಕರಾವಳಿಯ ವಿವಿಧ ದೇಗುಲಗಳ ಆಡಳಿತ ಧರ್ಮದರ್ಶಿಗಳು, ವಿವಿಧ ಮಹಿಳಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಯಂತಿ ಕೇಶವ ಆಚಾರ್ಯ ಮಂಗಳೂರು, ಇಂದಿರಾ ಗಂಗಾಧರ ಆಚಾರ್ಯ ಉಡುಪಿ, ಚಂದ್ರಾವತಿ ಶ್ರೀಧರ ಆಚಾರ್ಯ ವಡೇರಹೋಬಳಿ, ಆಶಾ ಉಮೇಶ್‌ ಆಚಾರ್ಯ ಪಡೀಲು, ಸುಜಾತ ಸತೀಶ್‌ ಉಪಸ್ಥಿತರಿದ್ದರು.

ಸುಮನಾ ಸುಧಾಕರ್‌ ಸ್ವಾಗತಿಸಿದರು. ಶಾಲಿನಿ ಜಯಕರ್‌ ಪ್ರಸ್ತಾವನೆಗೈದರು. ಗೀತಾ ಚಂದ್ರ ಹಾಗೂ ನಳಿನಿ ವಿಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ಲತಾ ಎಸ್‌. ಆಚಾರ್ಯ ಕುತ್ಯಾರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next