ಚನ್ನಮ್ಮನ ಕಿತ್ತೂರು: ಬೆಳಗಾವಿ ನಗರದ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಂಡವಾಡದ ಜೆಎನ್ ಎಮ್ ಸಿ ಹಾಸ್ಟೇಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ನಾಪತ್ತೆಯಾದ ಮಹಿಳೆಯನ್ನು ಭಾರತಿ ನಾರಾಯಣ ದಾಸನಕೊಪ್ಪ (51) ಎನ್ನಲಾಗಿದೆ.
ಭಾರತಿ ಮನೆಯಲ್ಲಿ ಇದ್ದವರು ಶುಕ್ರವಾರ ಮುಂಜಾನೆ ಇದ್ದಕಿದ್ದಂತೆ ಕಾಣೆಯಾಗಿದ್ದಾರೆ ಈ ಕುರಿತು ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ, ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಮೊಬೈಲ್ ಲೊಕೇಶನ್ ಪರಿಶೀಲನೆ ನಡೆಸಿದ ವೇಳೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಕೆ ಹುಬ್ಬಳ್ಳಿ ಮಲಪ್ರಭಾ ನದಿ ದಂಡೆಯ ಬಳಿ ತೋರಿಸುತ್ತಿದ್ದು ಈ ಕುರಿತು ಎಲ್ಲ ಕಡೆ ಪರಿಶೀಲನೆ ನಡೆಸಿದರೂ ಯಾವುದೇ ಕುರಿತು ಪತ್ತೆಯಾಗಿಲ್ಲ ಅಲ್ಲದೆ ರಾತ್ರಿಯಾದ ಕಾರಣ ಇಂದು (ಶನಿವಾರ) ಮತ್ತೆ ಹುಡುಕಾಟ ನಡೆಸಿದಾಗ ಮಹಿಳೆ ಧರಿಸಿದ್ದ ಚಪ್ಪಲ್, ಬ್ಯಾಗ್ ಮತ್ತು ಬ್ಯಾಗ್ ಒಳಗಡೆ ಇದ್ದ ಮೊಬೈಲ್ ಫೋನ್ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಗಂಗಾಂಬಿಕಾ ದೇವಸ್ಥಾನದ ಹತ್ತಿರ ಮಲಪ್ರಭಾ ನದಿ ದಂಡೆಯಲ್ಲಿ ಪತ್ತೆಯಾಗಿದೆ.
ನದಿ ದಂಡೆಯಲ್ಲಿ ಮೊಬೈಲ್, ಬ್ಯಾಗ್ ಪತ್ತೆಯಾದ ಹಿನ್ನೆಲೆಯುಯಲ್ಲಿ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಅಲ್ಲದೆ ಮಹಿಳೆಯ ಮಾಹಿತಿ ಸಿಕ್ಕಿದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪಿ ಎಸ್ ಐ ಪ್ರವೀಣ ಗಂಗೋಳ ವಿನಂತಿ ಮಾಡಿದ್ದಾರೆ.
ಇದನ್ನೂ ಓದಿ: Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು