ಮಂಗಳೂರು: ಮಡಿಕೇರಿ ನಗರದ ಹೊಸ ಬಡಾವಣೆ ನಿವಾಸಿ ಅಪೋಲಿನ್ (53) ಅವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ.
ಅಪೋಲಿನ್ ಅವರು ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಪುತ್ರ ಮಡಿಕೇರಿ ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅಪೋಲಿನ್ ಅವರು ಅಲ್ಲಿಯೇ ಉಳಿದುಕೊಂಡಿದ್ದರು. ಮೇ 13ರಂದು ಮುಂಜಾನೆ 3.30ರ ಸುಮಾರಿಗೆ ಯಾರಿಗೂ ಹೇಳದೆ ಹೋಗಿದ್ದಾರೆ. ಇವರಿಗೆ ಮದ್ಯ ಸೇವನೆಯ ಅಭ್ಯಾಸವಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಚಹರೆ: 5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು ತಿಳಿ ನೀಲಿ ಬಣ್ಣದ ಕಪ್ಪು ಹೂಗಳಿರುವ ನೈಟಿ ಧರಿಸಿದ್ದರು. ಕನ್ನಡ, ತುಳು, ಕೊಂಕಣಿ ಭಾಷೆ ಮಾತನಾಡುತ್ತಾರೆ. ಅವರ ಕುರಿತು ಮಾಹಿತಿ ದೊರೆತವರು ಮಡಿಕೇರಿ ನಗರ ಪೊಲೀಸ್ ಠಾಣೆ ಅಥವಾ ಸಂಬಂಧಿ ಅಲ್ಬರ್ಟ್ ನೊರೊನ್ಹಾ (9411491416) ಅವರನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.