Advertisement
ವನಿತಾ ಐಪಿಎಲ್ ಪಂದ್ಯಾವಳಿಗಾಗಿ ವನಿತೆಯರ ದೇಶಿ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಬದಲಾವಣೆ ತರುವುದು ಬಿಸಿಸಿಐ ಯೋಜನೆ. ಸಾಮಾನ್ಯವಾಗಿ ನವೆಂಬರ್‌ನಿಂದ ಎಪ್ರಿಲ್ ತನಕ ಮಹಿಳಾ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತದೆ. ಆದರೆ ಈ ಬಾರಿ ಇದನ್ನು ಒಂದು ತಿಂಗಳು ಮುಂಚಿತವಾಗಿ, ಅ. 11ರಿಂದ ಆರಂಭಿಸುವ ಯೋಜನೆ ಇದೆ. ಟಿ20 ಪಂದ್ಯಾವಳಿಯೊಂದಿಗೆ ಆರಂಭವಾಗುವ ವನಿತಾ ದೇಶಿ ಕ್ರಿಕೆಟ್ ಸರಣಿ ಫೆಬ್ರವರಿಯ ವಲಯವಾರು ಏಕದಿನ ಸರಣಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಅನಂತರ ಐಪಿಎಲ್ ಏರ್ಪಡಿಸುವುದು ಬಿಸಿಸಿಐ ಯೋಜನೆ.
ಬಿಸಿಸಿಐ 2018ರಿಂದಲೂ ಐಪಿಎಲ್ ಪಂದ್ಯಾವಳಿಯ ವೇಳೆ ವನಿತಾ ಟಿ20 ಚಾಲೆಂಜ್ ಸರಣಿಯೊಂದನ್ನು ನಡೆಸುತ್ತದೆ. ಆದರೆ ಕೇವಲ 3 ತಂಡಗಳ ನಡುವಿನ ಈ 4 ಪಂದ್ಯಗಳಲ್ಲಿ ಯಾವುದೇ ಕುತೂಹಲ ಇರದು. ಕೇವಲ ಲೆಕ್ಕದ ಭರ್ತಿಯ ಕೂಟವಾಗಿ ಇದು ದಾಖಲಾ ಗುತ್ತ ಬಂದಿದೆ. ಇದು ಬಿಸಿಸಿಐಗೂ ತಿಳಿದಿದೆ. ಹೀಗಾಗಿ ಪೂರ್ಣ ಪ್ರಮಾಣದಲ್ಲೇ ವನಿತಾ ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸುವುದು ಮಂಡಳಿಯ ಯೋಜನೆ. ಸೆಪ್ಟಂಬರ್‌ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವ ಸಾಧ್ಯತೆ ಇದೆ. ಈಗಾಗಲೇ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಚೆನ್ನೈ, ಬಾರ್ಬಡಾಸ್ ರಾಯಲ್ಸ್, ದ ನೈಟ್‌ರೈಡರ್ ಗ್ರೂಪ್ ಮಾಲಕರು, ಯುಟಿವಿ ಬಿಗ್ ಬಾಸ್ ರೂನಿ ಮೊದಲಾದವರು ಫ್ರಾಂಚೈಸಿಗಳನ್ನು ಖರೀದಿಸಿ ವನಿತಾ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ.
Related Articles
Advertisement