Advertisement

ಮಹಿಳಾ ಸೇನಾಧಿಕಾರಿ ಆಯ್ಕೆ: 2022ರಲ್ಲಿ ಪ್ರಕಟಣೆ

08:47 PM Sep 21, 2021 | Team Udayavani |

ನವದೆಹಲಿ: ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ, ಸೇನೆಯಲ್ಲಿ ಮಹಿಳೆಯರಿಗೆ ಅಧಿಕಾರಿಗಳ ಹುದ್ದೆಗೇರಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ನಿಯಮಾವಳಿಗಳನ್ನು ಕೂಲಂಕಶವಾಗಿ ರೂಪಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡ ನಂತರ, ಮುಂದಿನ ವರ್ಷ ಮೇ ತಿಂಗಳಲ್ಲಿ ಮಹಿಳೆಯರು ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ) ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು.

ಆ ಕುರಿತಾದ ಪ್ರಕಟಣೆಯನ್ನು ಅದೇ ತಿಂಗಳಲ್ಲೇ ಹೊರಡಿಸಲಾಗುತ್ತದೆ ಎಂದು ಸರ್ಕಾರ ವಿವರಿಸಿದೆ.

ಇದನ್ನೂ ಓದಿ:8.13 ಲಕ್ಷ ವಂಚಕ ಆ್ಯಪ್‌ ಗಳಿಗೆ ಗೇಟ್‌ ಪಾಸ್‌

ಆಯ್ಕೆಯಾದ ಮಹಿಳೆಯರಿಗೆ ಉತ್ತಮ ದರ್ಜೆಯ ತರಬೇತಿ ನೀಡುವ ಮೂಲಕ ಅವರನ್ನು ಸೇನಾಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲಾಗುತ್ತದೆ ಎಂದು ಹೇಳಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next