Advertisement

ಅರಣ್ಯ ರಕ್ಷಣೆಗೆ ಮಹಿಳಾ ಪಡೆ; ಜಾರ್ಖಂಡ್‌ ಹಳ್ಳಿಯೊಂದರಲ್ಲಿ ಒಗ್ಗೂಡಿದ ಹೆಂಗಳೆಯರು

07:57 PM Feb 14, 2022 | Team Udayavani |

ರಾಂಚಿ: ಕಾಡಿನ ರಕ್ಷಣೆಯಾಗಬೇಕೆಂದು ಪ್ರತಿಯೊಬ್ಬರೂ ಹೇಳುತ್ತಾರಾದರೂ ಅದರತ್ತ ಕೆಲಸ ಮಾಡುವವರು ಎಲ್ಲೋ ಕೆಲವರು ಮಾತ್ರ. ಜಾರ್ಖಂಡ್‌ನ‌ ಹಳ್ಳಿಯೊಂದರ ಮಹಿಳೆಯರು ಮಾತ್ರ ಆ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತಮ್ಮೂರಿನ ಕಾಡಿನ ರಕ್ಷಣೆಗೆ ತಾವೇ ಗುಂಪು ಕಟ್ಟಿ ನಿಂತಿದ್ದಾರೆ.

Advertisement

ಆನಂದಪುರ ಬ್ಲಾಕ್‌ನ ಮಹಿಷಗಢ ಗ್ರಾಮದ ಮಹಿಳೆಯರು ಏಳು ಸ್ವಸಹಾಯ ಗುಂಪುಗಳನ್ನು ಸೇರಿಸಿಕೊಂಡು, ಒಟ್ಟು 104 ಮಹಿಳೆಯರ ತಂಡವೊಂದನ್ನು ರಚಿಸಿಕೊಂಡಿದ್ದಾರೆ. ಆ ತಂಡದ ಮೂಲಕ “ಜಂಗಲ್‌ ಬಚಾವೋ’ ಅಭಿಯಾನ ಆರಂಭಿಸಿದ್ದಾರೆ. 25 ಜನರ ನಾಲ್ಕು ತಂಡಗಳನ್ನು ರಚಿಸಿಕೊಂಡು, ಪ್ರತಿದಿನ ಶಿಫ್ಟ್ ಗಳಲ್ಲಿ ಕಾಡು ಕಾಯುತ್ತಿದ್ದಾರೆ.

ಯಾರಾದರೂ ಕಾಡಿನಲ್ಲಿ ಮರ ಕಡಿಯುವುದಾಗಲೀ ಅಥವಾ ಅವ್ಯವಹಾರ ನಡೆಸುವುದನ್ನು ಕಂಡರೆ ತಕ್ಷಣ ಅವರಿಗೆ 5 ಸಾವಿರ ರೂ.ಗಳಷ್ಟು ದಂಡ ವಿಧಿಸುತ್ತಿದ್ದಾರೆ.

ಇದನ್ನೂ ಓದಿ:ಪರಿಸ್ಥಿತಿ ಹೀಗಾದರೆ ಹಿಂದೂ, ಮುಸ್ಲಿಂ ಗ್ಯಾಪ್ ಹೆಚ್ಚಳ : ಸಚಿವ ಈಶ್ವರಪ್ಪ

ಮರ ಕಡಿಯುವವರಿಗೆ ಮಾತ್ರವಲ್ಲ, ಕಾಡು ಕಾಯುವ ಕೆಲಸಕ್ಕೆ ಯಾವುದಾದರೂ ಮಹಿಳೆ ಗೈರಾದರೆ ಆಕೆಗೂ ತಂಡವೇ 200 ರೂ. ದಂಡ ವಿಧಿಸುತ್ತದೆ. ಈ ರೀತಿ ದಂಡದಿಂದ ಬಂದ ಹಣವನ್ನು ಸಸಿ ನೆಡುವುದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

Advertisement

ಕಾಡು ನಾಶಕ್ಕೆ ಫುಲ್ ಸ್ಟಾಪ್‌:
ಯೋಧರು ಬಂದೂಕು ಹಿಡಿದು ಗಡಿ ಕಾಯುವಂತೆಯೇ, ಬೆತ್ತದ ಕೋಲನ್ನು ಹಿಡಿದು ಕಾಡು ಕಾಯುವ ಈ ಹೆಣ್ಣು ಮಕ್ಕಳಿಂದಾಗಿ ಸುತ್ತಮುತ್ತಲಿನ ಜನರು ಸಾಕಷ್ಟು ಎಚ್ಚೆತ್ತುಕೊಂಡಿದ್ದಾರಂತೆ. ಕಾಡಿಗೆ ಕೊಡಲಿ ಇಡುವಷ್ಟು ಧೈರ್ಯವನ್ನು ಯಾರೂ ಮಾಡುತ್ತಿಲ್ಲವಂತೆ. ಕಳೆದ ಒಂದು ವರ್ಷದಿಂದ ಯಾವುದೇ ಮರವೂ ಕೊಡಲಿಯೇಟು ತಿಂದಿಲ್ಲ ಎನ್ನುತ್ತಾರೆ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next