Advertisement

ಹಳ್ಳಿಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಮಹಿಳಾ ಶಕ್ತಿ ಕೇಂದ್ರ

03:50 AM Feb 02, 2017 | Team Udayavani |

ಗರ್ಭಿಣಿಯರ ಬ್ಯಾಂಕ್‌ ಖಾತೆಗೆ 6,000 ರೂ. ನೇರ ವರ್ಗಾವಣೆ ಯೋಜನೆ ಮುಂದುವರಿಸುವ ಜತೆಗೆ ಮಹಿಳೆಯರ ಸಬಲೀಕರಣಕ್ಕೆ ಗ್ರಾಮ ಮಟ್ಟದಲ್ಲಿ ಪ್ರತ್ಯೇಕ “ಮಹಿಳಾ ಶಕ್ತಿ ಕೇಂದ್ರ’ಗಳನ್ನು ಸ್ಥಾಪಿಸಲಾಗುವುದು. ಆ ಮೂಲಕ, ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ ಒಟ್ಟು 1,84,632 ರೂ. ಹಂಚಿಕೆ ಮಾಡಲಾಗಿದೆ.

Advertisement

ದೇಶದ ಸುಮಾರು 14 ಲಕ್ಷ ಅಂಗನ ವಾಡಿ ಕೇಂದ್ರಗಳ ಮೂಲಕ ಈ ಮಹಿಳಾ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸ ಲಾಗಿದ್ದು, ಅದಕ್ಕಾಗಿ ಒಟ್ಟು 500 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಗ್ರಾಮೀಣ ಮಹಿಳೆಯರಿಗೆ ಒಂದೇ ಸೂರಿನಡಿ ಉದ್ಯೋಗಾವಕಾಶ, ಕೌಶಲಾಭಿವೃದ್ಧಿ, ಡಿಜಿಟಲ್‌ ಸಾಕ್ಷರತೆ, ಆರೋಗ್ಯ ಮತ್ತು ಪೌಷ್ಟಿಕತೆ ಒದಗಿಸುವ ಮೂಲಕ ಮಹಿಳಾ ಸಬಲೀಕರಣ ಈ ಮಹಿಳಾ ಶಕ್ತಿ ಕೇಂದ್ರಗಳ ಸ್ಥಾಪನೆಯ ಉದ್ದೇಶವಾಗಿದೆ. 

ದುರ್ಬಲ  ವರ್ಗದವರಿಗೆ ವಸತಿ ಕಲ್ಪಿಸಲು ರಾಷ್ಟ್ರೀಯ ವಸತಿ ಬ್ಯಾಂಕ್‌ಗಳ ಮೂಲಕ ದೇಶದಲ್ಲಿ ಒಟ್ಟು 20 ಸಾವಿರ ಕೋಟಿ ರೂ. ವೈಯಕ್ತಿಕ ಗೃಹ ಸಾಲ ನೀಡಲು ತೀರ್ಮಾನಿಸಲಾಗಿದೆ. ನೋಟು ನಿಷೇಧದ ಬಳಿಕ ಬ್ಯಾಂಕ್‌ಗಳು ವಸತಿ ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸುತ್ತಿರುವುದರಿಂದ ಬಡವರಿಗೆ ಕನಿಷ್ಠ ವಸತಿ ಸೌಕರ್ಯ ಪಡೆಯಲು ಅನುಕೂಲವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next