Advertisement

ಮಹಿಳಾ ಕಾಂಗ್ರೆಸ್‌ ಸೋಶಿಯಲ್‌ ಮೀಡಿಯಾ ಸಮನ್ವಯಕಾರ್ತಿ ಶೆರಿಲ್‌

12:30 AM Jan 18, 2019 | |

ಮಂಗಳೂರು: ಕರ್ನಾಟಕ ಮಹಿಳಾ ಕಾಂಗ್ರೆಸ್‌ನ ಸೋಶಿಯಲ್‌ ಮೀಡಿಯಾ ಸೆಲ್‌ನಲ್ಲಿ ಕೆಲಸ ಮಾಡಲು ಮಂಗಳೂರಿನ ಕಾಂಗ್ರೆಸ್‌ ಕಾರ್ಯಕರ್ತೆಯೋರ್ವರಿಗೆ ಅವಕಾಶ ಲಭಿಸಿದೆ. ನಂತೂರು ನಿವಾಸಿ ಶೆರಿಲ್‌ ಅಯೋನ ಈ ಅವಕಾಶ ಪಡೆದುಕೊಂಡವರು.

Advertisement

ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಕಾರ್ಯಕರ್ತೆಯಾಗಿರುವ ಶೆರಿಲ್‌, ಸಾಮಾಜಿಕ ತಾಣಗಳಲ್ಲಿ ಆ್ಯಕ್ಟಿವ್‌ ಆಗಿದ್ದರು. ಇದನ್ನು ಪರಿಗಣಿಸಿ ಅವರ ಪ್ರೊಫೈಲ್‌ನ್ನು ಅಖೀಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಶ್ಮಿತಾ ದೇವ್‌ ಅವರಿಗೆ ಕಳುಹಿಸಿಕೊಡಲಾಗಿತ್ತು. ಆಯ್ಕೆ ಪ್ರಕ್ರಿಯೆ ನಡೆದು ಅಂತಿಮವಾಗಿ ಶೆರಿಲ್‌ ಅವರನ್ನು ಮಹಿಳಾ ಕಾಂಗ್ರೆಸ್‌ನ ಸೋಶಿಯಲ್‌ ಮೀಡಿಯಾ ಸೆಲ್‌ನ ರಾಜ್ಯ ಸಮನ್ವಯಕಾರ್ತಿಯಾಗಿ ಆಯ್ಕೆ ಮಾಡಲಾಗಿದೆ. ಆದರೆ ಆಯ್ಕೆ ವೇಳೆ ಎಷ್ಟು ಮಂದಿಯ ಹೆಸರಿತ್ತು ಎಂಬುದು ತಿಳಿದುಬಂದಿಲ್ಲ.

ಡಿಜಿಟಲ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ನಲ್ಲಿ ಎಂಟೆಕ್‌ ಪದವಿ ಪಡೆದಿರುವ ಶೆರಿಲ್‌, ಮಂಗಳೂರಿನ ಎಂಜಿನಿಯರಿಂಗ್‌ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದಾರೆ. ವೃತ್ತಿಪರ ಹಿನ್ನೆಲೆಯೂ ಅವರ ನೂತನ ಕೆಲಸಕ್ಕೆ ಅನುಕೂಲವಾಗಲಿದೆ.

“ಮಹಿಳಾ ಕಾಂಗ್ರೆಸ್‌ನ ಸೋಶಿಯಲ್‌ ಮೀಡಿಯಾ ಸೆಲ್‌ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ದೊಡ್ಡ ಜವಾಬ್ದಾರಿ. ಈಗಿನ ಯುಗದಲ್ಲಿ ಸಾಮಾಜಿಕ ತಾಣಗಳೇ ಟ್ರೆಂಡ್‌ ಆಗಿವೆ ಮತ್ತು ಜನಮನ ತಟ್ಟಲು ಇವು ಹೆಚ್ಚು ಸೂಕ್ತ. ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ಶೆರಿಲ್‌ ತಿಳಿಸಿದ್ದಾರೆ.

ಐದು ರಾಜ್ಯಗಳಿಗೆ ಆಯ್ಕೆ
ಸಾಮಾಜಿಕ ತಾಣ ಸೆಲ್‌ನ ಇನ್‌ಚಾರ್ಜ್‌ ಹಾಗೂ ಅಖೀಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರ.ಕಾರ್ಯದರ್ಶಿ ಚಿತ್ರಾ ಸರ್ವಾರ ಅವರು ಐದು ರಾಜ್ಯಗಳ ಕಾಂಗ್ರೆಸ್‌ ಸೋಶಿಯಲ್‌ ಮೀಡಿಯಾ ಸೆಲ್‌ನ ಸಮನ್ವಯಕಾರರ ಹೆಸರನ್ನು ಇತ್ತೀಚೆಗಷ್ಟೇ ಪ್ರಕಟಿಸಿದ್ದರು. ರಾಜಸ್ಥಾನ, ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿಗೆ ಹೊಸ ಸಮನ್ವಯಕಾರರ ನೇಮಕ ನಡೆದಿತ್ತು. ಈ ಪೈಕಿ ಕರ್ನಾಟಕದಲ್ಲಿ ಶೆರಿಲ್‌ ಸ್ಥಾನ ಪಡೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next