Advertisement
2014 ನವೆಂಬರ್ 1ರಂದು ಜಿಲ್ಲಾ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗಿದೆ. ಸಂತ್ರಸ್ತರಿಗೆ ಕೌನ್ಸೆಲಿಂಗ್, ಚಿಕಿತ್ಸೆಗಾಗಿ ಕರ್ತವ್ಯನಿರತ ವೈದ್ಯರಲ್ಲದೆ, ಮೂವರು ಸಾಮಾಜಿಕ ಕಾರ್ಯಕರ್ತರು, ಓರ್ವ ಆಪ್ತ ಸಮಾಲೋಚಕರು, ಓರ್ವ ಮಹಿಳಾ ಪೊಲೀಸ್ ಅಧಿಕಾರಿ, ಕಾನೂನು ಸಲಹೆಗಾಗಿ ಇಬ್ಬರು ವಕೀಲರನ್ನೂ ಇಲ್ಲಿ ನೇಮಿಸಲಾಗಿದೆ. ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಹೆಲ್ಪ್ ಡೆಸ್ಕ್ ಇದೆ. ಕೌಟುಂಬಿಕ ದೌರ್ಜನ್ಯ, ಆ್ಯಸಿಡ್ ದಾಳಿ, ಮಹಿಳೆಯರ ಸಾಗಾಣಿಕೆ, ಬಾಲ್ಯ ವಿವಾಹ, ವರದಕ್ಷಿಣೆ ಕಿರುಕುಳ ಮುಂತಾದ ಪ್ರಕರಣಗಳಿಗೂ ಇಲ್ಲಿ ನೆರವು ನೀಡಲಾಗುತ್ತದೆ.
ಪುನರ್ವಸತಿ, ಕಾನೂನು ಸಲಹೆ, ಆಪ್ತ ಸಮಾಲೋಚನೆ ಒದಗಿಸಲಾಗುತ್ತಿದೆ. ನೆರವಿಗೆ ಅಲೆದಾಡಬೇಕಿಲ್ಲ
ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳನ್ನು ನೀಡುವುದರಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರು ಚಿಕಿತ್ಸೆ, ಆರೈಕೆ, ರಕ್ಷಣೆಗಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುವುದು, ಮುಜುಗರ ಅನುಭವಿಸುವುದು ತಪ್ಪುತ್ತದೆ. ಸಾಕ್ಷ್ಯಗಳು ನಾಶವಾಗುವ ಸಂಭವವೂ ಇಲ್ಲದಾಗಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಸಹಕಾರಿಯಾಗುತ್ತದೆ. ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ, ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸುವ ಕೆಲಸಕ್ಕೂ ಈ ಘಟಕ ನೆರವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬಂದಿ ಹೇಳುತ್ತಾರೆ.
Related Articles
ದೌರ್ಜನ್ಯಕ್ಕೆ ಒಳಗಾದವರು ಇಲ್ಲಿ ಚಿಕಿತ್ಸೆ, ಸಮಾಲೋಚನೆಗೆ ದಾಖಲಾದರೆ ಇಚ್ಛಿತ ವ್ಯಕ್ತಿಗಳ ಪ್ರವೇಶ ಹಾಗೂ ಭೇಟಿಗೆ ಮಾತ್ರ ಅಮುಮತಿ ನೀಡಲಾಗುತ್ತದೆ. ಎಲ್ಲ ಮಾಹಿತಿಗಳು ಗೌಪ್ಯವಾಗಿರುತ್ತವೆ. 24×7 ಉಚಿತ ಮಹಿಳಾ ಸಹಾಯವಾಣಿ 181ಕ್ಕೆ ಕರೆ ಮಾಡಿ ಸಂತ್ರಸ್ತ ಮಹಿಳೆಯರು ಮಾತನಾಡಲು ಅವಕಾಶವಿದೆ.
Advertisement
306 ಮಂದಿಗೆ ಚಿಕಿತ್ಸೆಮಹಿಳಾ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕವು 2014ರ ನವೆಂಬರ್ 1ರಂದು ಆರಂಭವಾಗಿದ್ದು, ಮೂರು ವರ್ಷಗಳಲ್ಲಿ ಒಟ್ಟು 306 ಮಂದಿ ಇಲ್ಲಿ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ಪಡೆದುಕೊಂಡಿದ್ದಾರೆ. ಈ ಪೈಕಿ 136 ಮಂದಿ 18 ವರ್ಷದೊಳಗಿನ ಮಕ್ಕಳು. 2014-15ರಲ್ಲಿ 17 ಮಕ್ಕಳ ಸಹಿತ ಒಟ್ಟು 55 ಮಂದಿ ಚಿಕಿತ್ಸೆ ಪಡೆದರೆ, 2015-16ರಲ್ಲಿ 52 ಮಕ್ಕಳ ಸಹಿತ ಒಟ್ಟು 123 ಮಂದಿ ಹಾಗೂ 2016-17ನೇ ಸಾಲಿನಲ್ಲಿ 67 ಮಕ್ಕಳು ಸಹಿತ ಒಟ್ಟು 128 ಮಂದಿ ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂರು ವರ್ಷಗಳ ಪೈಕಿ ಈ ವರ್ಷ 2017ರ ಸೆಪ್ಟಂಬರ್‌ವರೆಗೆ 128 ಮಂದಿ ಚಿಕಿತ್ಸೆ ಪಡೆಯುವ ಮೂಲಕ ಅತಿ ಹೆಚ್ಚು ಮಂದಿ ದಾಖಲಾಗಿರುವುದು ಗಮನಾರ್ಹ. ಎಲ್ಲ ರೀತಿಯ ನೆರವು
ಮೂರು ವರ್ಷಗಳ ಹಿಂದೆ ಆರಂಭವಾದ ಈ ವಿಶೇಷ ಚಿಕಿತ್ಸಾ ಘಟಕದಲ್ಲಿ ಹಲವಾರು ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಲೇಡಿಗೋಶನ್ ಆಸ್ಪತ್ರೆಯ ವೈದ್ಯರೇ ಚಿಕಿತ್ಸೆಗೆ ಲಭ್ಯರಿರುತ್ತಾರೆ. ಮಹಿಳೆ ಮತ್ತು ಮಕ್ಕಳಿಗೆಂದೇ ಸ್ಥಾಪಿಸಲಾಗಿರುವ ಈ ಘಟಕದಲ್ಲಿ ಎಲ್ಲ ರೀತಿಯ ನೆರವು ಅವರಿಗೆ ಸಿಗುತ್ತದೆ.
–ಸುಂದರ ಪೂಜಾರಿ, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಧನ್ಯಾ ಬಾಳೆಕಜೆ