Advertisement
ಆಸ್ಟ್ರೇಲಿಯ ವನಿತಾ ಕ್ರಿಕೆಟಿನ ಖ್ಯಾತ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಇಂಥದೊಂದು ಹೇಳಿಕೆ ನೀಡಿದ್ದಾರೆ.
“ಕ್ರಿಕೆಟ್ ಆಸ್ಟ್ರೇಲಿಯ ಮೊದಲ ಬಾರಿಗೆ ಈ ಹುದ್ದೆಗೆ ಮಹಿಳೆಯೊಬ್ಬ ರನ್ನು ನೇಮಿಸಲು ಮುಂದಾಗ ಬೇಕಿದೆ. ಇದು ಸಕಾಲ. ಬಹಳಷ್ಟು ಮಂದಿ ಅರ್ಹ ಅಭ್ಯರ್ಥಿಗಳು ರೇಸ್‌ನಲ್ಲಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯದ ಸಿಇಒ ಕ್ರಿಸ್ಟಿನಾ ಮ್ಯಾಥ್ಯೂಸ್ ಇದಕ್ಕೆ ಅತ್ಯುತ್ತಮ ಆಯ್ಕೆ ಯಾಗಲಿದ್ದಾರೆ’ ಎಂದು ಪೆರ್ರಿ ಹೇಳಿದರು. ಒಳ್ಳೆಯ ಬೆಳವಣಿಗೆ
“ಕೊನೆಯ ಸುತ್ತಿನ ಚರ್ಚೆ ವೇಳೆ ಕ್ರಿಸ್ಟಿನಾ ಮ್ಯಾಥ್ಯೂ ಹೆಸರು ಕೇಳಿಬಂದಿದೆ. ಇದೊಂದು ಒಳ್ಳೆಯ ಹಾಗೂ ವಿಶೇಷ ಬೆಳವಣಿಗೆ. ಹಾಗೆಯೇ ಕ್ರಿಕೆಟ್ ಆಸ್ಟ್ರೇಲಿಯದ ಉನ್ನತ ಹುದ್ದೆಯನ್ನು ಅಲಂಕರಿಸಿದ ಬೆಲಿಂಡಾ ಕ್ಲರ್ಕ್, ಸ್ಟೆಫ್ ಬೆಲ್‌ಟ್ರೇಮ್ ಅವರನ್ನೂ ಪರಿಗಣಿಸಬಹುದು’ ಎಂದು ಪೆರ್ರಿ ಸಲಹೆಯಿತ್ತರು.
Related Articles
Advertisement