Advertisement

ಇಬ್ಬರು ಶಾಸಕರ ರೆಸಾರ್ಟ್‌ ಹಲ್ಲೆ ಹಿಂದೆ ಸ್ತ್ರೀ! 

12:30 AM Mar 03, 2019 | |

ಬೆಂಗಳೂರು: ಕಾಂಗ್ರೆಸ್‌ ಶಾಸಕರಿಬ್ಬರು ರೆಸಾರ್ಟ್‌ನಲ್ಲಿ ಹೊಡೆದಾಡಿಕೊಂಡಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜನವರಿ 19ರಂದು ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ವಿಜಯನಗರ ಶಾಸಕ ಆನಂದ್‌ ಸಿಂಗ್‌ ಹಾಗೂ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ನಡುವೆ ಗಲಾಟೆ ನಡೆಯಲು ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಮಹಿಳೆ ಯೊಬ್ಬರನ್ನು ಚುನಾವಣಾ ಕಣಕ್ಕಿಳಿಸುವ ವಿಷಯ ವಿಕೋಪಕ್ಕೆ ತಿರುಗಿದ್ದೇ ಕಾರಣ ಎನ್ನಲಾಗಿದೆ. ಇಬ್ಬರೂ ಶಾಸಕರು ಒಬ್ಬರಿಗೊಬ್ಬರು ಕೊರಳಪಟ್ಟಿ ಹಿಡಿದುಕೊಂಡು ಗಲಾಟೆ ಮಾಡಿ ಕೊಂಡಿ ರುವ ವಿಡಿಯೋ ಈಗ ಬಹಿರಂಗವಾಗಿದೆ.

Advertisement

ಮಾಧ್ಯಮಗಳಿಗೆ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಆನಂದ್‌ಸಿಂಗ್‌, “ನೀನು ಹೊಡೀತಿಯೇನೋ? ಎಂದು ಪ್ರಶ್ನಿಸಿದ್ದಾರೆ. ಆಗ ಜೆ.ಎನ್‌. ಗಣೇಶ್‌,”ಅಣ್ಣಾ ಇದು ತಪ್ಪು. ಅವಳ ಸರ್ಪೋರ್ಟ್‌ಗೆ ನೀನು’ ಎನ್ನುತ್ತಾರೆ. ಮತ್ತೂಂದು ಧ್ವನಿ, “ಅಣ್ಣಾ ಬಿಡಣ್ಣ’ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಹಿನ್ನೆಲೆ: ಹಗರಿಬೊಮ್ಮನಹಳ್ಳಿ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಆ ಕ್ಷೇತ್ರದಿಂದ ಲಂಬಾಣಿ ಸಮುದಾಯದ ಭೀಮಾನಾಯ್ಕ ಶಾಸಕರಾಗಿ ಆಯ್ಕೆ  ಯಾಗಿದ್ದಾರೆ. ಆ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ವಿಜಯನಗರ ಶಾಸಕ ಆನಂದ್‌ ಅವರ ಸಂಬಂಧಿ ಸಂದೀಪ್‌ ಸಿಂಗ್‌ ಎಂಬುವರ ಪತ್ನಿ ಯನ್ನು ಕಣಕ್ಕಿಳಿಸಲು ಪ್ರಯತ್ನ ನಡೆಸ ಲಾಗುತ್ತಿದೆ ಎಂಬ ಮಾತು ಕೇಳಿ ಬರು ತ್ತಿದೆ. ಸಂದೀಪ್‌ ಸಿಂಗ್‌ ಅವರ ಪತ್ನಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಗಲಾಟೆ ಶುರುವಾಗಿ ಕಂಪ್ಲಿ ಶಾಸಕ ಗಣೇಶ್‌, ಆನಂದ್‌ಸಿಂಗ್‌ -ಭೀಮಾನಾಯ್ಕ ನಡುವೆ ಸಂಧಾನಕ್ಕೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next