ದೇವದುರ್ಗ: ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ಯುವಜನತೆ ಮಾರು ಹೋಗಿದ್ದು, ಮೂಲ ಸಂಸ್ಕೃತಿಯನ್ನು ಉಳಿಸಿ ಪೋಷಿಸುವ ಹೊಣೆ ಮಹಿಳೆಯರ ಮೇಲಿದೆ ಎಂದು ಜಾಲಹಳ್ಳಿ ಬೃಹನ್ಮಠದ ಶ್ರೀ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಿಂದ ತಾಲೂಕಿನ ಜಾಲಹಳ್ಳಿ ಶ್ರೀಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಹಿಳೆಯರು ಎಲ್ಲ ರಂಗದಲ್ಲಿ ಸಾಧನೆಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ಆದರೆ ಮೂಲ ಸಂಸ್ಕೃತಿ ಸಂಕೇತವಾಗಿರುವ ಬೀಸುವುದು, ಕುಟ್ಟುವುದು, ರೊಟ್ಟಿ ಮಾಡುವುದು ಸೇರಿದಂತೆ ಅನೇಕ ಕ್ರಿಯಾಶೀಲ ಚಟುವಟಿಕೆಗಳು ಮರೆಯಾಗುತ್ತಿವೆ. ಮುಂದಿನ ಪೀಳಿಗೆಗೆ ಭಾರತೀಯ ಮೂಲ ಸಂಸ್ಕೃತಿ ಪರಿಚಯಿಸುವ ಹೊಣೆ ಮಹಿಳೆಯರ ಮೇಲಿದೆ ಎಂದ ಅವರು, ಮಹಿಳೆಯರು ಸಹಕಾರಿ ಸಂಘ ಆರಂಭಿಸಿ ಚಟುವಟಿಕೆ ನಡೆಸುತ್ತಿರುವುದು ಮಾದರಿ ಎಂದರು.
ಪ್ರಗತಿಪರ ಕೃಷಿಕ ಮಹಿಳೆ ಮತ್ತು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತೆ ಕವಿತಾ ಉಮಾಶಂಕರ ಮಿಶ್ರಾ, ಉಪನ್ಯಾಸಕಿ ಸುಮಂಗಲಾ ದೇವದುರ್ಗ, ನಿರ್ಮಲಾ ಅಂಬರೀಷ ಮಾತನಾಡಿದರು. ಕಸ್ತೂರೆಮ್ಮ ವೆಂಕಟರಾಯಗೌಡ ಕಕ್ಕಲದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷೆ ಗಿರಿಜಾ ವಿ.ಪತ್ತಾರ ಪ್ರಾಸ್ತಾವಿಕ ಮಾತನಾಡಿದರು.
ಸಂಘದ ಪದಾಧಿ ಕಾರಿಗಳಾದ ಈರಮ್ಮ ಶಿವರೆಡ್ಡಿ ಪಾಟೀಲ, ಅಕ್ಕಮಹಾದೇವಿ ಸೌದ್ರಿ, ಸೌಭಾಗ್ಯಮ್ಮ ಎಂ.ಶೆಳ್ಳಿಗಿ, ಕಾರ್ಯನಿರ್ವಾಹಕ ಅಧಿಕಾರಿ ಸುಲೋಚನಾ ಶೇಖರಯ್ಯ ಸ್ವಾಮಿ, ವ್ಯವಸ್ಥಾಪಕಿ ಭವ್ಯಶ್ರೀ ಇತರರು ಇದ್ದರು.
ಬಜೆಟ್ ಇಲ್ಲದ ಕಾರಣ ವೇತನ ವಿಳಂಬವಾಗಿದೆ. ಸಿಬ್ಬಂದಿ ಸಮಸ್ಯೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ವೇತನ ಮಾಡುವ ಭರವಸೆ ನೀಡಿದ್ದಾರೆ.
ಫಕೀರಪ್ಪ ಹಾಲವಾರ, ಸಮಾಜ ಕಲ್ಯಾಣಾಧಿಕಾರಿ.
ಆರೇಳು ತಿಂಗಳಿಂದ ವೇತನವಿಲ್ಲದೇ ಕುಟುಂಬಗಳು ನಿರ್ವಹಣೆ ಮಾಡಲು ತೀರ ಕಷ್ಟವಾಗಿದೆ. ಅಲ್ಲಲ್ಲಿ ಸಾಲ ಮಾಡಿದ್ದರಿಂದ ಸಾಲಗಾರರು ನಿತ್ಯ ಮನೆಗಳಿಗೆ ಬರುತ್ತಿದ್ದಾರೆ. ಹಬ್ಬ ಹರಿದಿನ ಮಕ್ಕಳಿಗೆ ಬಟ್ಟೆಗಳು ತರಲಾರದಂತ ಸಂಕಷ್ಟ ಬಂದಿದೆ.
ಶಿವಪ್ಪ, ಸಿಬ್ಬಂದಿ.