Advertisement

ಅತ್ಯಾಚಾರ ತ್ವರಿತ ಪತ್ತೆಗೆ ಕಿಟ್‌

05:15 AM Jun 07, 2018 | Team Udayavani |

ಹೊಸದಿಲ್ಲಿ: ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧವನ್ನು ತ್ವರಿತವಾಗಿ ಖಚಿತಪಡಿಸಿ ತನಿಖೆ ನಡೆಸಲು ವಿಶೇಷ ವಿನ್ಯಾಸದ ಕಿಟ್‌ ಗಳನ್ನು ದೇಶದ ಎಲ್ಲಾ ಪೊಲೀಸ್‌ ಠಾಣೆಗಳಿಗೆ, ಆಸ್ಪತ್ರೆಗಳಿಗೆ ರವಾನಿಸುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ. ಪ್ರತಿ ರಾಜ್ಯಗಳಿಗೆ ಒದಗಿಸಲಾಗಿರುವ ನಿರ್ಭಯಾ ನಿಧಿಯಿಂದಲೇ ಆಯಾ ರಾಜ್ಯ ಸರಕಾರಗಳು ಈ ಕಿಟ್‌ ಗಳನ್ನು ಖರೀದಿಸಲಿವೆ. ಈ ಕಿಟ್‌ ನಿಂದ ತನಿಖಾಧಿಕಾರಿಗಳಿಗೆ ತ್ವರಿತವಾಗಿ ಸಾಕ್ಷಿ ಪಡೆಯಲು ಸಾಧ್ಯವಾಗುತ್ತದೆ ಎಂದು ಮನೇಕಾ ಗಾಂಧಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next