Advertisement

ಮಾರ್ಡನ್‌ ಡ್ರೆಸ್‌ ಧರಿಸಿ ಬಂದರೆ ವಾಹನ ಪರವಾನಿಗೆ ಸಿಗಲ್ಲ

11:38 AM Oct 24, 2019 | sudhir |

ಚೆನ್ನೈ: ಡ್ರೈವಿಂಗ್‌ ಲೈಸೆನ್ಸ್ ಪಡೆದುಕೊಳ್ಳಲು ಜೀನ್ಸ್‌ ಪ್ಯಾಂಟ್‌ ಧರಿಸಿ ಬಂದ ಮಹಿಳೆಗೆ ಪರವಾನಿಗೆ ನೀಡಲು ನಿರಕಾರಿಸಿರುವ ಚೆನ್ನೈ ಪ್ರಾದೇಶಿಕ ಕಚೇರಿ ಅರ್ಜಿದಾರರಿಗೆ ಸಭ್ಯ ಉಡುಗೆಯಲ್ಲಿ ಬನ್ನಿ ಎಂದು ಕರೆ ನೀಡಿದೆ.

Advertisement

ಪರವಾನಿಗೆ ಅರ್ಜಿದಾರಿಗೆ ಉಡುಗೆ ಸಂಬಂಧ ಪಟ್ಟಂತೆ ಯಾವುದೇ ನಿಯಮ ಇಲ್ಲದಿದ್ದರೂ, ಡಿಎಲ್‌ ಟೆಸ್ಟ್‌ಗೆ ಬರುವಾಗ ಪ್ರತಿಯೊಬ್ಬ ಅರ್ಜಿದಾರರು ಸರಿಯಾದ ಉಡುಗೆಯಲ್ಲಿ ಬರಬೇಕೆಂದು ಎಂದು ಅಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಅಧಿಕಾರಿಯೊಬ್ಬರು ತಿಳಿಸಿ¨ªಾರೆ.

ಪರವಾನಿಗೆ ಪಡೆಯಲು ಜೀನ್ಸ್‌ ಪ್ಯಾಂಟ್‌ ಹಾಗೂ ಸ್ಲಿವ್‌ಲೇಸ್‌ ಟಾಪ್‌ ಧರಿಸಿ ಕಚೇರಿಗೆ ಬಂದಿದ್ದ ಮಹಿಳಾ ಸಾಫ್ಟ್ ವೇರ್ ಉದ್ಯೋಗಿಯನ್ನು ಪರವಾನಿಗೆ  ನೀಡದೇ ವಾಪಸ್‌ ಕಳುಹಿಸಲಾಗಿದೆ. ಸಭ್ಯ ಉಡುಪು ತೊಟ್ಟು ಬರುವಂತೆ ವಿನಂತಿ ಮಾಡಿಕೊಳ್ಳಲಾಗಿದೆ ಎಂದು ಆರ್‌ಟಿಒ ವಿಭಾಗದ ಅಧಿಕಾರಿಯೊಬ್ಬರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next