ಅರಕಲಗೂಡು: ತಾಲೂಕಿನ ರುದ್ರಪಟ್ಟಣ ಡೇರಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಸರ್ಕಾರದ ನಿಯಮಾನುಸಾರ ಷೇರು ನೀಡದೇ ಮನಸೋ ಇಚ್ಛೆ ನಡೆದುಕೊಳ್ಳುತ್ತಿದ್ದು, ಕ್ರಮ ಕೈಗೊಳ್ಳು ವಂತೆ ಪಟ್ಟಣದ ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ ಮುಂದೆ ರೈತ ಮಹಿಳೆಯರು ಪ್ರತಿಭಟಿಸಿದರು.
ಗ್ರಾಮದಲ್ಲಿ 8 ವರ್ಷಗಳಿಂದಲೂ ಮಹಿಳಾ ಡೇರಿ ಇದೆ. ಹಾಲು ಹಾಕುವ ಮಹಿಳೆಯರು, ಇತ ರರಿಗೆ ಸರ್ಕಾ ರದ ನಿಯಮಾನುಸಾರ ಷೇರು ನೀಡುತ್ತಿಲ್ಲ. ಇದನ್ನು ಪ್ರಶ್ನಿಸಲು ಮುಂದಾದರೇ, ದೌರ್ಜನ್ಯ ನಡೆಸಲಾಗುತ್ತಿದೆ. ಹೀಗಾಗಿ ಸರ್ಕಾರದ ಸಹಾಯಧನ, ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದು ಹೇಳಿದರು.
ಅಧ್ಯಕ್ಷ ಪತಿಯಿಂದ ದೌರ್ಜನ್ಯ: ಹಾಲು ಉತ್ಪಾದಕ ರಾದ ಅನು, ಜ್ಯೋತಿ ಮಾತನಾಡಿ, ರುದ್ರಪಟ್ಟಣ ಮಹಿಳಾ ಡೇರಿಯಲ್ಲಿ ಯಾವುದೇ ನಿಯಮ ಪಾಲಿ ಸದೇ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಲಕ್ಷಾಂತರ ರೂ. ಹಣ ದುರ್ಬಳಕೆ ಮಾಡಿಕೊಳ್ಳಲಾ ಗುತ್ತಿದೆ. ಇದರ ಸಲುವಾಗಿ ಸಂಘದ ಕಾರ್ಯದರ್ಶಿ ವೀಣಾ ಬಳಿ ಕೇಳಲು ಹೋದರೆ ಅವರ ಪತಿ ಸುರೇಶ್ ದೌರ್ಜನ್ಯ ನಡೆಸುತ್ತಾರೆ. ಅಲ್ಲದೆ, ಸಬ್ಸಿಡಿ ಹಣ ದುರ್ಬ ಳಕೆ ಮಾಡಿಕೊಂಡಿದ್ದಾರೆ. ಈ ತಪ್ಪನ್ನು ಮುಚ್ಚಿಹಾಕಿ ಕೊಳ್ಳುವ ಸಲುವಾಗಿ 100 ದಿನ ಹಾಲು ಹಾಕುವ ಉತ್ಪಾದಕರಿಗೆ ಷೇರು ನೀಡುತ್ತಿಲ್ಲ. ಅಲ್ಲದೆ, ವಾರ್ಷಿಕ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಎರಡು ವರ್ಷಗಳಿಂದಲೂ ಷೇರು ಕಟ್ಟಿಸಿಕೊಳ್ಳಲು ಸಂಘದ ಆಡಳಿತ ಮಂಡಳಿಗೆ ನಿರ್ದೇಶನ ನೀಡ ಬೇಕೆಂದು ಸ್ಥಳೀಯ ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ನಿಬಂಧಕರಿಗೆ, ಉಪ ನಿಬಂಧಕರಿಗೆ ಮನವಿ ಸಲ್ಲಿಸುತ್ತ ಬಂದಿದ್ದರೂ ಯಾವುದೇ ಕಾನೂನು ಕ್ರಮ ಜರುಗಿಸುತ್ತಿಲ್ಲ. ಅಲ್ಲದೆ, ಹಾಲು ಒಕ್ಕೂಟದ ನಿರ್ದೇಶಕ ಹೊನ್ನವಳ್ಳಿ ಸತೀಶ್ ಅವರ ಬಳಿಯೂ ಷೇರು ನೀಡುವ ವಿಚಾರವನ್ನು ವಿನಂತಿ ಮಾಡಿದಾಗ, ಈಗಾ ಗಲೇ 30 ಲಕ್ಷ ರೂ. ವಿನಿಯೋಗ ಮಾಡಿದ್ದೇನೆ. ಅದನ್ನು ದುಡಿಯುವ ಬದಲು ನಿಮಗೆ ಷೇರು ಕೊಡಬೇಕಾ ಎಂದು ಉಡಾಫೆಯಿಂದ ಮಾತನಾಡುತ್ತಾರೆ ಎಂದು ಆಪಾದಿಸಿದರು.
ಕಚೇರಿಗೆ ಬೀಗ ಹಾಕಿ ಪ್ರತಿಭಟನೆ: ಪ್ರತಿನಿತ್ಯವೂ ಹಾಲು ಹಾಕುವ ವೇಳೆ 280 ಮಿಲಿ ಹಾಲನ್ನು ಪಡೆದು ಕೊಳ್ಳುತ್ತಾರೆ. ಲೀಟರ್‌ಗೆ ಸರ್ಕಾರದಿಂದ ನೀಡುವ ಸಹಾಯಧನವನ್ನು ತಿಂಗಳ ಹಾಲಿನ ಬಿಲ್‌ನೊಂದಿಗೆ ಹಾಕುತ್ತಿಲ್ಲ. ಇದನ್ನು ಕೇಳಿದರೇ ನೀವು ಹಾಲು ಹಾಕು ವುದೇ ಬೇಡ ಎಂದು ಕಳುಹಿ ಸುತ್ತಾರೆ.ನಮಗೆ ನ್ಯಾಯ ಕೊಡಿಸದಿದ್ದರೇ ಡೇರಿ ಮುಂದೆ ಹಾಲಿನ ಕ್ಯಾನ್ ಇಟ್ಟು ಕೊಂಡು, ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹಾಲು ಉತ್ಪಾದಕ ಮಹಿಳೆಯ ರಾದ ಸುಜಾತಾ, ದಿವ್ಯಾ, ಉಷಾ, ರತ್ನಮ್ಮ, ಕಮಲಮ್ಮ, ಮಣಿ, ರಾಧಾ, ಭಾಗ್ಯ, ಗ್ರಾಮಸ್ಥರಾದ ಕಿರಣ್, ಸಾಗರ್, ರೇವಣ್ಣ, ರಾಘವೇಂದ್ರ, ಶ್ರೀನಿ ವಾಸ, ರವಿ, ಜಲೇಂದ್ರ, ಹರೀಶ ಸೇರಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಸಹಕಾರ ಅಭಿ ವೃದ್ಧಿ ಅಧಿಕಾರಿ ನವೀನ್, ಸಹಾ ಯಕ ಅಧಿಕಾರಿ ರಂಗಸ್ವಾಮಿ ಅವರು ಮನವಿ ಸ್ವೀಕ ರಿಸಿದರು. ವಾರ ದಲ್ಲಿ ಸಹಕಾರಿ ನಿಯಮಾನುಸಾರ ಕ್ರಮ ಜರು ಗಿಸಲಾಗುವುದು ಎಂದು ಭರವಸೆ ನೀಡಿದರು.