Advertisement

“ವಿವಾಹ ಸುವರ್ಣೋತ್ಸವ ಯುವ ಪೀಳಿಗೆಗೆ ಮಾದರಿ’

09:20 PM May 01, 2019 | Sriram |

ಮಲ್ಪೆ: ಆಧುನಿಕತೆಯಲ್ಲಿ ಸಂಬಂಧಗಳಲ್ಲಿ ಶಿಥಿಲತೆ ಎದ್ದು ಕಾಣುತ್ತದೆ. ವಿವಾಹ ವಿಚ್ಚೇದನಗಳು ಸಾಮಾನ್ಯವಾಗುತ್ತಿರುವ ಪ್ರಸ್ತುತ ಸಂದಂರ್ಭದಲ್ಲಿ ವಿವಾಹ ಸುವರ್ಣ ಮಹೋತ್ಸವಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್‌ ಹೇಳಿದರು.

Advertisement

ಅವರು ರವಿವಾರ ಉದ್ಯಾವರ ಶಂಭು ಶೈಲೇಶ್ವರ ದೇವಸ್ಥಾನದಲ್ಲಿ ನಡೆದ ಉಡುಪಿ ಪೋಟೊ ಪ್ಯಾಲೇಸ್‌ನ ಆಡಳಿತ ನಿರ್ದೇಶಕ ದಾಸಪ್ಪ ಪುತ್ರನ್‌ ಮತ್ತು ಧನಲಕ್ಷ್ಮೀ ಕೆ. ದಂಪತಿಗಳ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಕಿದಿಯೂರು ಹೋಟೆಲಿನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಅವರು ಮಾತನಾಡಿ ಮದುವೆಯಾದರು ನೂರುಕಾಲ ಜತೆಜತೆಯಾಗಿ ಬದುಕಬೇಕೆಂಬುವುದು ಎಲ್ಲರ ಹಾರೈಕೆ. ಮದುವೆಯ ಮಾರನೇ ದಿನವೇ ಕೋರ್ಟ್‌ ಮೆಟ್ಟಿಲು ಹತ್ತುವ ಇಂದಿನ ದಿನಗಳಲ್ಲಿ 10 ವರ್ಷ ಬಾಳುವುದೇ ವಿಶೇಷವಾಗಿದೆ. ಈ ನಿಟ್ಟಿನಲ್ಲಿ ದಾಸಪ್ಪ ಪುತ್ರನ್‌ ಮತ್ತು ಧನಲಕೀÒ$¾ ದಂಪತಿಯ 50 ವರ್ಷದ ಸುಧೀರ್ಘ‌ ದಾಂಪಂತ್ಯ ಎಲ್ಲರಿಗೂ ಅನುಕರಣೀಯ ಎಂದರು.

ವಿದ್ವಾನ್‌ ಗೋಪಾಲಾಚಾರ್ಯ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಉಡುಪಿ ಸಾಯಿರಾಧ ಡೆವೆಲಪರ್ ಮನೋಹರ ಶೆಟ್ಟಿ, ಯುವರಾಜ್‌ ಕಿದಿಯೂರು, ದಿನೇಶ್‌ ಪುತ್ರನ್‌ ಕಾನಂಗಿ, ಮಧುಸೂದನ್‌ ಪೂಜಾರಿ ಕೆಮ್ಮಣ್ಣು ಮೊದಲಾದವರು ಉಪಸ್ಥಿತರಿದ್ದರು.ರಮೇಶ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು. ರವಿರಾಜ್‌ ಕಿದಿಯೂರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next