Advertisement

ಫ‌ರೀದಾಬಾದ್‌ ಹೊಟೇಲ್‌ ಕೋಣೆಯ ಬಾತ್‌ ಟಬ್‌ನಲ್ಲಿ ಮಹಿಳೆಯ ಶವ

05:47 PM Apr 27, 2018 | Team Udayavani |

ಹೊಸದಿಲ್ಲಿ : ಫ‌ರೀದಾಬಾದ್‌ ನ ತಾಜ್‌ ವಿವಾಂತ್‌ ಹೊಟೇಲ್‌ನ ಬಾತ್‌ ಟಬ್‌ನಲ್ಲಿ ಲಂಡನ್‌ ಮೂಲದ ಭಾರತೀಯ ಮಹಿಳೆಯೊಬ್ಬಳ ಮೃತ ದೇಹ ಪತ್ತೆಯಾಗಿರುವುದು ವರದಿಯಾಗಿದೆ.

Advertisement

40ರ ಹರೆಯದ ಈ ಮಹಿಳೆಯು ತನ್ನ ಕೊಠಡಿಗೆ ಯಾರಿಗೂ ಬಿಡದಂತೆ ಹೊಟೇಲಿನ ರಿಸೆಪ್ಶನ್‌ ಕೌಂಟರ್‌ನಲ್ಲಿ  ಕೇಳಿಕೊಂಡಿದ್ದಳು ಮತ್ತು ತನಗೆ ಮನೆಯವರಿಂದ ಬರುತ್ತಿದ್ದ ಯಾವುದೇ ಫೋನ್‌ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ.

ಮಹಿಳೆಯ ಸಾವಿಗೆ ಕಾರಣವೇನೆಂದು ಇನ್ನೂ ಗೊತ್ತಾಗಿಲ್ಲ; ಪೊಲೀಸರು ತನಿಖೆ ನಡೆಸುತ್ತಿದ್ದಾರೆ; ಕುಟುಂಬದವರನ್ನು ವಿಚಾರಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. 

ಕಳೆದ ಫೆ.24ರಂದು ದುಬೈ ಹೊಟೇಲ್‌ ಕೋಣೆಯಲ್ಲಿನ ಬಾತ್‌ ಟಬ್‌ನಲ್ಲಿ ಬಾಲಿವುಡ್‌ನ‌ಟಿ ಶ್ರೀದೇವಿಯ ಮೃತದೇಹ ಪತ್ತೆಯಾದ ಘಟನೆಯನ್ನು ಈ ಘಟನೆ ನೆನಪಿಸುವಂತಿದೆ. 

Advertisement

Udayavani is now on Telegram. Click here to join our channel and stay updated with the latest news.

Next