ಫ್ಲೋರಿಡಾ : ಜಗತ್ತಿನಲ್ಲಿ ವಿಶೇಷ ಕೆಲಸ ಮಾಡಿ ಗಿನ್ನೀಸ್ ದಾಖಲೆಯಲ್ಲಿ ತಮ್ಮ ಹೆಸರುಗಳನ್ನು ಗಿಟ್ಟಿಸಿಕೊಂಡ ನೂರಾರು ಜನರನ್ನು ನೋಡಿದ್ದೇವೆ. ಆದ್ರೆ 2018ರಲ್ಲಿ ತನ್ನ ಉದ್ದನೆಯ ಕೈ ಉಗುರುಗಳಿಂದಲೇ ಗಿನ್ನೀಸ್ ಪುಸ್ತಕದಲ್ಲಿ ಹೆಸರು ಗಿಟ್ಟಿಸಿಕೊಂಡ ಮಹಿಳೆ ಅಂದ್ರೆ ಅಯನ್ನಾ ವಿಲಿಯಮ್ಸ್. ಆದ್ರೆ ಇವರು ಸದ್ಯ ಸುದ್ದಿಯಲ್ಲಿರುವುದು ಯಾವುದಕ್ಕೆ ಅಂದ್ರೆ, ಆ ಉದ್ದನೆಯ ಉಗುರುಗಳನ್ನು ಕಳೆದ ವಾರ ಕತ್ತರಿಸಿದ್ದಾರಂತೆ.
ಬರೋಬ್ಬರು 30 ವರ್ಷಗಳ ನಂತರ ತಮ್ಮ ಕೈ ಉಗುರುಗಳನ್ನು ಅಯನ್ನಾ ಕತ್ತರಿಸಿದ್ದಾರೆ. ಕತ್ತರಿಸುವ ಸಮಯದಲ್ಲಿ ಇವರ ಉಗುರುಗಳ ಉದ್ದ 733.55 ಸೆ.ಮೀ (24 ಅಡಿ) ಇದ್ದವು ಎಂದು ವರದಿಯಾಗಿದೆ.
ಗಿನ್ನೀಸ್ ದಾಖಲೆ ಬರೆದಿರುವ ಅಯನ್ನಾ ತನ್ನ ಉಗುರುಗಳನ್ನು ಬೆಳೆಸಲು ಪೋಷಕರ ಅನುಮತಿಯನ್ನು ಪಡೆದಿದ್ದರಂತೆ. ದಿನ ನಿತ್ಯ ಉಗುರುಗಳ ರಕ್ಷಣೆಯಲ್ಲಿ ಕೂಡ ಅಯನ್ನಾ ತೊಡಗಿದ್ದಾಗಿ ತಿಳಿಸಿದ್ದಾರೆ. ಇವರ ಉದ್ದನೆ ಉಗುರುಗಳ ಬಗ್ಗೆ ಜಗತ್ತಿಗೆ 2017ರಲ್ಲಿ ಗೊತ್ತಾಗುತ್ತದೆ. ನಂತರ ಇವರಿಗೆ 2018ರಲ್ಲಿ ಗಿನ್ನೀಸ್ ರೆಕಾರ್ಡ್ ನಲ್ಲಿ ಅಯನ್ನಾ ಹೆಸರು ಸೇರುತ್ತದೆ. ಗಿನ್ನೀಸ್ ದಾಖಲೆಗೆ ಸೇರುವ ಸಮಯದಲ್ಲಿ ಅಯನ್ನಾ ಉಗುರುಗಳು 18 ಅಡಿ ಇದ್ದವಂತೆ.
ಇವರು ಕೈ ಬೆರಳಿನ ಉಗುರುಗಳಿಗೆ ಬರೋಬ್ಬರಿ 2 ಬಾಟೆಲ್ ನೈಲ್ ಫಾಲೀಶ್ ಬೇಕಿತ್ತಂತೆ. ಅಲ್ಲದೆ ಬರೋಬ್ಬರಿ 20 ಗಂಟೆಗಳ ಕಾಲ ಉಗುರಿನ ಅಲಂಕಾರಕ್ಕಾಗಿಯೇ ಮೀಸಲಿಡುತ್ತಿದ್ದರಂತೆ.
ಉಗುರುಗಳನ್ನು ಉದ್ದವಾಗಿ ಬೆಳೆಸಲು ತುಂಬಾ ಕಷ್ಟ. ದಿನ ನಿತ್ಯದ ಕೆಲಸಗಳನ್ನು ಮಾಡುತ್ತ ಉಗುರುಗಳನ್ನು ಬೆಳೆಸುವುದು ತುಂಬಾ ಚಾಲೆಂಜ್ ಆಗಿತ್ತು. ಆದರೂ ನಾನು ನನ್ನ ಹಾದಿಯನ್ನ ಬಿಡಲಿಲ್ಲ ಎಂದು ಅಯನ್ನಾ ಹೇಳಿದ್ದಾರೆ. ಸದ್ಯ ಕತ್ತರಿಸಿದ ಉಗುರುಗಳನ್ನು ಫ್ಲೋರಿಡಾದ ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಸಂಗ್ರಹಿಸಲಾಗಿದೆಯಂತೆ.