Advertisement

Tragedy: ವಯನಾಡ್ ದುರಂತದಲ್ಲಿ ಕುಟುಂಬವನ್ನೇ ಕಳೆದುಕೊಂಡಿದ್ದ ಯುವತಿಗೆ ಮತ್ತೊಂದು ಶಾಕ್…

11:32 AM Sep 12, 2024 | Team Udayavani |

ಮೆಪ್ಪಾಡಿ: ಕಳೆದ ಆಗಸ್ಟ್ ತಿಂಗಳಲ್ಲಿ ಕೇರಳದ ವಯನಾಡ್ ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ತನ್ನ ಕುಟುಂಬ ಸದಸ್ಯರನ್ನೇ ಕಳೆದುಕೊಂಡಿದ್ದ ಯುವತಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.

Advertisement

ಭೂಕುಸಿತದಲ್ಲಿ ತನ್ನ ಕುಟುಂಬದ ಒಂಬತ್ತು ಮಂದಿಯನ್ನು ಕಳೆದುಕೊಂಡಿದ್ದ ಶ್ರುತಿಗೆ ಡಿಸೆಂಬರ್ ನಲ್ಲಿ ಮದುವೆ ನಿಶ್ಚಯವಾಗಿದ್ದು ಇದೀಗ ಶ್ರುತಿಯ ಕೈಹಿಡಿಯಲಿದ್ದ ಹುಡುಗ ಜೆನ್ಸನ್ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಬುಧವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ, ಇದರೊಂದಿಗೆ ತನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡ ದುಃಖದಲ್ಲಿದ್ದ ಶ್ರುತಿಗೆ ಭಾವಿ ಪತಿಯ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ.

ಶ್ರುತಿ ಹಾಗೂ ಜೆನ್ಸನ್ ಮದುವೆ ನಿಶ್ಚಯವಾಗಿತ್ತು ಇದರ ನಡುವೆ ಆಗಸ್ಟ್ ನಲ್ಲಿ ವಯನಾಡ್, ಮೆಪ್ಪಾಡಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಶ್ರುತಿ ಕುಟುಂಬದ ಒಂಬತ್ತು ಮಂದಿ ಸಾವನ್ನಪ್ಪಿದ್ದರು. ಭೂಕುಸಿತದಲ್ಲಿ ಶ್ರುತಿ ಅವರ ಮನೆಯೂ ಕೊಚ್ಚಿ ಹೋಗಿತ್ತು ಅಷ್ಟು ಮಾತ್ರವಲ್ಲದೆ ಮದುವೆಗೆಂದು ಇರಿಸಿದ್ದ 4 ಲಕ್ಷ ನಗದು, 15 ಪವನ್ ಚಿನ್ನವೂ ಮಣ್ಣುಪಾಲಾಗಿ ಹೋಗಿದೆ.

ಇದೆಲ್ಲ ನಡೆದು ನಲವತ್ತೊಂದು ದಿನದ ಬಳಿಕ ಶ್ರುತಿಯ ಸಂಬಂಧಿಸಿಕರು ಮದುವೆಯ ತಯಾರಿಗೆ ಮುಂದಾಗಿದ್ದಾರೆ ಈ ನಡುವೆ ತಮ್ಮವರನ್ನೆಲ್ಲಾ ಕಳೆದುಕೊಂಡು ಬೇಸರದಲ್ಲಿರುವ ಸಮಯದಲ್ಲಿ ಅದ್ದೂರಿಯಾಗಿ ಮದುವೆಯಾಗುವುದು ಬೇಡ ಎಂದು ಶ್ರುತಿ ಹಾಗೂ ಜೆನ್ಸನ್ ರಿಜಿಸ್ಟರ್ ಮದುವೆಯಾಗಲು ನಿರ್ಧರಿಸಿದ್ದಾರೆ.

ಈ ನಡುವೆ ಮದುವೆ ತಯಾರಿ ನಡೆಸುತ್ತಿದ್ದ ಸಂದರ್ಭ ಮಂಗಳವಾರ (ಸಪ್ಟೆಂಬರ್ ೧೦) ಶ್ರುತಿ ಸಂಬಂಧಿಕರು ಹಾಗೂ ಜೆನ್ಸನ್ ಚಲಾಯಿಸುತ್ತಿದ್ದ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ, ಪರಿಣಾಮ ಜೆನ್ಸನ್ ಗಂಭೀರ ಗಾಯಗೊಂಡಿದ್ದ, ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಆದರೆ ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಜೆನ್ಸನ್ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಸುಮಾರು 8:50 ರ ಸುಮಾರಿಗೆ ಸಾವನ್ನಪ್ಪಿದ್ದ ಎನ್ನಲಾಗಿದೆ.

Advertisement

ಕೇರಳ ಸಿಎಂ ಸಂತಾಪ:
ದುರಂತ ಘಟನೆಗಳ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಈ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ ವಿಪತ್ತುಗಳ ಸಂದರ್ಭದಲ್ಲಿ ಸಂಭವಿಸುವ ನಷ್ಟವನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವೀಗ ಭರವಸೆ ನೀಡುವುದೇನೆಂದರೆ ರಾಜ್ಯದ ಜನತೆ ನಿಮ್ಮೊಂದಿಗಿದೆ. ಶ್ರುತಿ ಮತ್ತು ಜೆನ್ಸನ್ ಅವರ ಕುಟುಂಬಕ್ಕೆ ಸಂತಾಪ.

ಇಂದು ಅಂತ್ಯಸಂಸ್ಕಾರ:
ಇಂದು(ಸೆ.12) ಬೆಳಿಗ್ಗೆ ಮರಣೋತ್ತರ ಪರೀಕ್ಷೆಯ ನಂತರ ಜೆನ್ಸನ್ ಅವರ ದೇಹವನ್ನು ಅಂಬಲವಾಯಲ್‌ನ ಅಂದೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 3 ಗಂಟೆಗೆ ಆಂಡೂರಿನ ನಿತ್ಯಸಾಯಮಾತಾ ಚರ್ಚ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: Mandya case: ಮೆರವಣಿಗೆ ವೇಳೆ ಪಾಕಿಸ್ತಾನ ಮನಸ್ಥಿತಿಯವವರು ಕಿಡಿ ಹಚ್ಚಿದ್ದಾರೆ: ಈಶ್ವರಪ್ಪ

 

Advertisement

Udayavani is now on Telegram. Click here to join our channel and stay updated with the latest news.

Next