Advertisement
ಇನ್ನೂ ಅದರಲ್ಲಿ ಸೊಲೋ ರೈಡ್ ಹೊರಟರಂತೂ ಆ ಖುಷಿಗೆ ಪಾರವಿಲ್ಲ.
Related Articles
Advertisement
ಕ್ಯಾಂಡಿಡಾ ಅವರು ತಮ್ಮ ಸುಮಾರು 28,000 ಕಿ.ಮೀ. ಸೊಲೋ ಪ್ರಯಾಣದುದ್ದಕ್ಕೂ ವಿವಿಧ ದೇಶಗಳ ಜನಸಂಸ್ಕೃತಿ, ಆಚಾರ-ವಿಚಾರ, ಜೀವನವಿಧಾನವನ್ನು ಅನ್ವೇಷಿಸಿದ್ದಾರೆ.
ಮಹಿಳಾ ಸಬಲೀಕರಣ ಮತ್ತು ಅವರಲ್ಲಿ ನೈತಿಕ ಸ್ಥೈರ್ಯ ತುಂಬುವುದು ಈ ಪ್ರಯಾಣದ ಗುರಿಯಾಗಿಸಿಕೊಂಡಿದ್ದಾರೆ ಅವರು.
ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಶೈಕ್ಷಣಿಕ ಮತ್ತು ಆರ್ಥಿಕ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಅವರನ್ನು ತಲುಪಿ ಅವರನ್ನು ಜಾಗೃತಗೊಳಿಸುವುದಕ್ಕಾಗಿ ಪ್ರಯಾಣ ಕೈಗೊಳ್ಳಲಾಗಿದೆ. ಜತೆಗೆ ಪ್ರಯಾಣದಿಂದ ಹೊಸ ಸಂಸ್ಕೃತಿ, ಭಾಷೆ, ಜೀವನ ಶೈಲಿಯ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ ಕ್ಯಾಂಡಿಡಾ.
ಬೆಂಗಳೂರಿನಿಂದ ಪ್ರಯಾಣ ಆರಂಭಕ್ಯಾಂಡಿಡಾ ತಮ್ಮ ಬೈಕ್‌ನಲ್ಲಿ ಬೆಂಗಳೂರಿನಿಂದ ಪ್ರಯಾಣವನ್ನು ಆರಂಭಿಸಿ, ಮೊದಲ ಹಂತದಲ್ಲಿ ಭಾರತದ ಪೂರ್ವ ಕರಾವಳಿಯಿಂದ ಈಶಾನ್ಯದೆಡೆಗೆ ಸಾಗಿ ಮಣಿಪುರ, ಮಯನ್ಮಾರ್, ಥೈಲಾಂಡ್, ಲಾವೋಸ್, ವಿಯೆಟ್ನಾಂ, ಕಾಂಬೋಡಿಯಾ, ಮಲೇಷ್ಯಾ, ಸಿಂಗಾಪುರ, ಇಂಡೋನೇಷ್ಯಾದಿಂದ ಸಾಗಿ ಸಿಡ್ನಿಯನ್ನು ತಲುಪಿದ್ದಾರೆ. ಅಲಾಸ್ಕಾದಿಂದ ದಕ್ಷಿಣ ಅಮೆರಿಕಕ್ಕೆ ಮೋಟಾರ್‌ಸೈಕಲ್ ಸವಾರಿ ಮಾಡಿ ಅರ್ಧದಲ್ಲಿ ಮೃತಪಟ್ಟ ಬೈಕರ್ ಅಲಿಸ್ಟೇರ್ ಫಾರ್ಲ್ಯಾಂಡ್ ಅವರ ಗೌರವಾರ್ಥವಾಗಿ ಮತ್ತು ಚೇಂಜ್ ಯುವರ್ ವರ್ಲ್ಡ್ ಫಂಡ್ ಟ್ರಾವೆಲ್ ಯೋಜನೆಯ ಭಾಗವಾಗಿ ಈ ಪ್ರಯಾಣ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದು ಸೊಲೊ ರೈಡ್‌ನ ಮೂಲಕ ಜಗತ್ತನ್ನು ಸುತ್ತಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯ ಜತೆಗೆ ಗಿನ್ನೆಸ್ ದಾಖಲೆ ನಿರ್ಮಾಣವಾಗಿದೆ.
ಕ್ಯಾಂಡಿಡಾ ಅವರು ಹವ್ಯಾಸಿ ಪ್ರವಾಸಿ. ಅವರಿಗೆ ಸುತ್ತುವುದು ಎಂದರೇ ತುಂಬಾ ಇಷ್ಟ. ಈ ಹಿಂದೆ 2015-16ರಲ್ಲಿ ಅವರು ಹಣಕಾಸು ವೃತ್ತಿಯಲ್ಲಿರಬೇಕಾದರೆ ಅದಕ್ಕೆ ರಾಜೀನಾಮೆ ನೀಡಿ ರಾಜ್ಯದ 22 ರಾಜ್ಯಗಳನ್ನು ಒಬ್ಬರೇ ಸುತ್ತಿ, ತಮ್ಮ ಕನಸನ್ನು ಸಾಕಾರಗೊಳಿಸಿದ್ದರು. ಪ್ರಸ್ತುತ ಟ್ರಾವೆಲರ್ ಆಗಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಡಿಸೈನರ್, ಗೈಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 11 ವರ್ಷಗಳ ಬೈಕಿಂಗ್ ಅನುಭವ
ಇವರು ತಮ್ಮ 11 ವರ್ಷಗಳ ಸುದೀರ್ಘ ಬೈಕ್‌ನ ಅನುಭವದೊಂದಿಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಲ್ಲದೇ ಸುಮಾರು 34ಕ್ಕೂ ಅಧಿಕ ಗುಂಪುಗಳ ಜತೆಗೆ ಪ್ರವಾಸ ಮಾಡಿದ ಹೆಗ್ಗಳಿಕೆ ಇವರದು. ಇವರು ಯೋಜಿತವಾಗಿ ಪ್ರವಾಸ ಮಾಡುತ್ತಾರೆ. ಬೈಕರ್ ಆಗಬೇಕೆಂಬ ಕನಸು ಹೊತ್ತಿದ್ದ ಇವರು ಆಸ್ಟೇಲಿಯಾಕ್ಕೆ ಸೊಲೊ ಬೈಕ್ ರೈಡ್ ಮಾಡುತ್ತೇನೆ ಎಂಬುದನ್ನು ನಾನು ಊಹಿಸರಲಿಲ್ಲ ಎನ್ನುತ್ತಾರೆ. ಪ್ರೀತಿ ಭಟ್, ಗುಣವಂತೆ