Advertisement
ಮೊದಲೇ ಮಧುಮೇಹ ಕಾಯಿಲೆ ಇದ್ದ ಸಲೀನಾ ಶಾ (37)ರಲ್ಲಿ ಸೋಂಕು ಪತ್ತೆಯಾಗಿದ್ದು, ಎಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ದುರಾದೃಷ್ಟವಶಾತ್ 8 ದಿನಗಳ ಬಳಿಕ ಸಲೀನಾ ಅಸುನೀಗಿದ್ದಾರೆ.
ಮಾರ್ಚ್ 18 ರಂದು ಸಲೀನಾ ತನ್ನ ಮಗುವಿನ ಸ್ಕಾÂನ್ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ನನ್ನ ನಿನ್ನ ಭೇಟಿಗೆ ಕೇವಲ 6 ವಾರಗಳು ಬಾಕಿ ಇವೆ. ನಾನು ನಿನ್ನನ್ನು ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದರು. ಆದರೆ ಇದೀಗ ಮಗುವನ್ನು ಕಣ್ತುಂಬ ನೋಡದೇ, ಎತ್ತಿ ಮುದ್ದಾಡುವ ಮುನ್ನವೇ ತಾಯಿ ಸಾವನ್ನಪ್ಪಿದ್ದು, ಶಾ ಹಂಚಿಕೊಂಡಿದ್ದ ಪೋಸ್ಟ್‌ಗೆ ಸಂತಾಪ ಹರಿದು ಬರುತ್ತಿದೆ. ಈ ಕುರಿತಂತೆ ಸಲೀನಾಳ ಸೋದರ ಸಂಬಂಧಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ “ಆಕೆ ದಿಟ್ಟತನದ ಪ್ರತೀಕ, ಎಂತಹ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸ ಬಲ್ಲ ಶಕ್ತಿಯುತ ತಾಯಿ ‘ ಎಂದು ಬರೆದುಕೊಂಡಿದ್ದಾರೆ. ಮಗು ಸೋಂಕು ಮುಕ್ತವಾಗಿರುವುದು ಕೊಂಚ ನಿರಾಳತೆಯನ್ನು ಮೂಡಿಸಿದೆ. ಆದರೆ ಗರ್ಭಿಣಿ ಮಹಿಳೆಯರ ರಕ್ಷಣೆಗೆ ಸರಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವತ್ತ ಹೆಚ್ಚಿನ ಗಮನ ನೀಡಬೇಕಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.