Advertisement

ಎಸ್‌ಪಿ ಶಾಸಕನ ಸಹಿತ 8 ಮಂದಿಯಿಂದ ಗ್ಯಾಂಗ್‌ ರೇಪ್‌: ಮಹಿಳೆ ಶವ ಪತ್ತೆ

03:44 PM Feb 13, 2017 | udayavani editorial |

ಸುಲ್ತಾನ್‌ಪುರ : ಸಮಾಜವಾದಿ ಪಕ್ಷದ ಶಾಸಕ ಅರಣ್‌ ವರ್ಮಾ ಸಹಿತ ಎಂಟು ಮಂದಿ ಕಾಮಾಂಧರು ತನ್ನ ಮೇಲೆ ಗ್ಯಾಂಗ್‌ ರೇಪ್‌ ನಡೆಸಿದ್ದಾರೆ ಎಂದು ಆರೋಪಿಸಿದ್ದ 21ರ ಹರೆಯದ ಮಹಿಳೆಯ ಶವ, ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ, ಶನಿವಾರ ರಾತ್ರಿ ಪತ್ತೆಯಾಗಿದೆ.

Advertisement

ಈ ಮಹಿಳೆಯನ್ನು ಕುತ್ತಿಗೆ ಬಿಗಿದು ಸಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಮೊದಲು ಶಾಸಕ ಅರುಣ್‌ ವರ್ಮಾಗೆ ಈ ಗ್ಯಾಂಗ್‌ ರೇಪ್‌ ಪ್ರಕರಣದಿಂದ  ಕ್ಲೀನ್‌ ಚಿಟ್‌ ನೀಡಿದ್ದ ಪೊಲೀಸರು ಇದೀಗ ದೂರುದಾರ ಮಹಿಳೆ ಕೊಲೆಯಾಗಿರುವ ಹಿನ್ನೆಲೆಯಲ್ಲಿ ಐಪಿಸಿ 302ರ ಪ್ರಕಾರ ಮರ್ಡರ್‌ ಕೇಸ್‌ ಬುಕ್‌ ಮಾಡಿದ್ದಾರೆ.

ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಂತೆಯೇ ತನ್ನ ಮೇಲೆ ಮಾಡಲಾಗಿರುವ ಈ ಆರೋಪವು ರಾಜಕೀಯ ಷಡ್ಯಂತ್ರದ ಭಾಗವಾಗಿದೆ ಎಂದು ವರ್ಮಾ ಆರೋಪಿಸಿದ್ದಾರೆ. ಮಾತ್ರವಲ್ಲದೆ, ಈ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಯನ್ನು ಆಗ್ರಹಿಸಿದ್ದಾರೆ. 

ಸುಲ್ತಾನ್‌ಪುರದಲ್ಲಿ ಇದೇ ಫೆ.27ರಂದು ಮತದಾನ ನಡೆಯಲಿದೆ. ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರು ಇದೇ ಸುಲ್ತಾನ್‌ಪುರದಲ್ಲಿ ಕಳೆದ ಜನವರಿಯಲ್ಲಿ ತನ್ನ ಚುನಾವಣಾ ಪ್ರಚಾರಾಭಿಯಾನವನ್ನು ಆರಂಭಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next