Advertisement
ಏನಿದು ಪ್ರಕರಣ: ಕುಕಿ ದೇವಿ ಕೆಲವು ದಿನಗಳಿಂದ ರಾಜಸ್ಥಾನದ ಸೈಲಾ ಗ್ರಾಮದ ಮೋಕ್ನಿ ಎಂಬಲ್ಲಿ ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದಳು ಎನ್ನಲಾಗಿದೆ ಈ ನಡುವೆ ತಾಯಿಗೆ ಸೇರಿದ ಜಮೀನಿನ ವಿಚಾರವಾಗಿ ಸಂಬಂಧಿಕರ ನಡುವೆ ಆಗಾಗ ಜಗಳಗಳು ನಡೆಯುತಿತ್ತು ಎನ್ನಲಾಗಿದೆ, ಈ ನಿಟ್ಟಿನಲ್ಲಿ ಕಳೆದ ಮಂಗಳವಾರ(ಡಿ.17) ಕುಕಿ ದೇವಿ ತನ್ನ ಸಹೋದರ ರಮೇಶ್ ಜೊತೆ ಸೇರಿ ಜಮೀನಿನ ವಿವಾದವನ್ನು ಬಗೆಹರಿಸಿ ಬರೋಣ ಎಂದು ಮೊಕನಿ ಗ್ರಾಮಕ್ಕೆ ತೆರಳಿದ್ದರು, ಈ ವೇಳೆ ಅಲ್ಲಿಗೆ ಬಂದ ಸೋದರಳಿಯ ಓಂ ಪ್ರಕಾಶ್ ಹಾಗೂ ಸಂಬಂಧಿಕರು ಕುಕಿ ದೇವಿಯ ಬಳಿ ಗಲಾಟೆ ಶುರು ಮಾಡಿದ್ದಾರೆ ಈ ವೇಳೆ ಮಾತಿಗೆ ಮಾತು ಬೆಳೆದು ಗಂಭೀರ ಹಂತಕ್ಕೆ ತಲುಪಿ ಓಂ ಪ್ರಕಾಶ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಕುಕಿ ದೇವಿಯ ಮೂಗನ್ನು ಕತ್ತರಿಸಿದ್ದಾನೆ, ಈ ವೇಳೆ ಮೂಗಿನ ಭಾಗ ತುಂಡಾಗಿ ನೆಲಕ್ಕೆ ಬಿದ್ದಿದ್ದು ರಕ್ತ ಹರಿಯತೊಡಗಿದೆ, ಕೂಡಲೇ ಕುಕಿ ದೇವಿ ತುಂಡಾದ ಮೂಗನ್ನು ಹೆಕ್ಕಿ ತನ್ನ ಬ್ಯಾಗ್ ಒಳಗೆ ಇಟ್ಟು ಪಾಲಿಯಲ್ಲಿರುವ ಬಂಗಾರ್ ಆಸ್ಪತ್ರೆಗೆ ಓಡೋಡಿ ಬಂದಿದ್ದಾಳೆ.
ಇನ್ನು ಜಮೀನು ವಿಚಾರವಾಗಿ ಕುಕಿ ದೇವಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಸೋದರಳಿಯ ಓಂ ಪ್ರಕಾಶ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ,
Related Articles
Advertisement